Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂದೀಗಢ್ » ಹವಾಮಾನ

ಚಂದೀಗಢ್ ಹವಾಮಾನ

ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ ಅವಿಭಾಜ್ಯ ಋತುಗಳು. ಪ್ರತಿಯೊಂದು ಅನನ್ಯವಾದ ಸ್ವಭಾವವನ್ನು ಹೊಂದಿದೆ.

ಬೇಸಿಗೆಗಾಲ

ಮಾರ್ಚ್ ನಿಂದ ಆರಂಭವಾಗುವ ಬೇಸಿಗೆಗಾಲ ಮಧ್ಯ ಜೂನ್ ತನಕವಿರುತ್ತದೆ. ಚಂದೀಗಢ್ ನಲ್ಲಿ ಬೇಸಿಗೆಗಾಲದಲ್ಲಿ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ನಿಂದ 42 ಡಿಗ್ರಿ ಸೆಲ್ಸಿಯಸ್ ತನಕ ಏರುತ್ತದೆ. ಈ ಅವಧಿಯಲ್ಲಿ ಅತ್ಯಧಿಕ ಉಷ್ಣತೆಯಿರುತ್ತದೆ. ಈ ಸಮಯದಲ್ಲಿ ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡಲು ಹಿಂಜರಿಯುತ್ತಾರೆ. ಚಂದೀಗಢ್ ನಲ್ಲಿ ಮೇ ತನಕ ಬೇಸಿಗೆ ದಿನಗಳಿರುತ್ತದೆ.

ಮಳೆಗಾಲ

ಮನ್ಸೂನ್ ಋತು ಬೇಸಿಗೆಯ ಅತ್ಯಧಿಕ ಉಷ್ಣತೆಯಿಂದ ಸ್ವಲ್ಪ ಮಟ್ಟಿಗೆ ನಿರಾಳವಾಗುವಂತೆ ಮಾಡುತ್ತದೆ. ಜೂನ್ ಮಧ್ಯಭಾಗದಿಂದ ಸಪ್ಟೆಂಬರ್ ಮಧ್ಯದ ತನಕ ಚಂದೀಗಢ್ ನಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಈ ಆದ್ರ ಮತ್ತು ಬೇಗೆಯ ಋತುವಿನ ಬಳಿಕ ಸಪ್ಟೆಂಬರ್ ಮಧ್ಯಭಾಗದಿಂದ ನವಂಬರ್ ತನಕ ಶರತ್ಕಾಲದ ಆಹ್ಲಾದಕರ ವಾತಾವರಣವಿರುತ್ತದೆ.

ಚಳಿಗಾಲ

ಚಂದೀಗಢ್ ನಲ್ಲಿ ನವಂಬರ್ ತಿಂಗಳಲ್ಲಿ ಆರಂಭವಾಗುವ ಚಳಿಗಾಲವು ಮಾರ್ಚ್ ಮಧ್ಯಭಾಗದ ತನಕವಿರುತ್ತದೆ. ಈ ಋತುವಿನಲ್ಲಿ ಗರಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ನಿಂದ 20 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಕನಿಷ್ಠವೆಂದರೆ -2ಡಿಗ್ರಿ ಸೆಲ್ಸಿಯಸ್ ನಿಂದ 5 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಚಂದೀಗಢ್ ನಲ್ಲಿ ಚಳಿಗಾಲದಲ್ಲಿ ಮೈನಡುಗಿಸುವ ಚಳಿಯಿರುತ್ತದೆ. ಅರಣ್ಯ ಪ್ರದೇಶ, ಅಧಿಕ ಮಳೆ ಮತ್ತು ಆಲಿಕಲ್ಲಿನ ಮಳೆಯಿಂದಾಗಿ ಅತ್ಯಧಿಕ ಚಳಿಯಿರುತ್ತದೆ.