ಹಜರತ್ ಗಂಗಾ ಬಾಬಾ ರಿಶಿ ಸಮಾಧಿಯು ಬಡ್ಗಮ್ ಜಿಲ್ಲೆಯಲ್ಲೇ ಅತ್ಯಂತ ಜನಪ್ರಿಯವಾಗಿದೆ. ಪಲಪೋರಾ ಜಿಲ್ಲೆಯಲ್ಲಿ ಈ ಸಮಾಧಿ ಇದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 360 ಮಸೀದಿ ಮತ್ತು ಅಷ್ಟೇ ಸಂಖ್ಯೆಯ ಸುರಂಗಗಳನ್ನು ನಿರ್ಮಿಸಿದ ಬಾಬಾ ರಿಶಿಗೆ ಈ ಸಮಾಧಿ ಅರ್ಪಿತವಾಗಿದೆ. ಮರಾಜ್‌ನಿಂದ ಇವರು ಪಲಪೋರಾಗೆ ವಲಸೆ ಬಂದಿದ್ದರು ಎಂದು ಹೇಳಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದರು ಎಂದು ಸ್ಥಳೀಯರು ನಂಬಿದ್ದಾರೆ. ಅವುಗಳಲ್ಲಿ ಒಂದು ಮರವು 40 ಮೀ. ಅಗಲವಾಗಿ ಬೆಳೆದಿದೆ. ಪ್ರತಿವರ್ಷ ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ಅಪಾರ ಪ್ರಮಾಣದಲ್ಲಿ ಆಗಮಿಸಿ ಪ್ರಾರ್ಥನೆ, ಹರಕೆಗಳನ್ನು ಸಲ್ಲಿಸುತ್ತಾರೆ.


Click it and Unblock the Notifications