ಬೋರ್ಡಿಯ ಅತಿದೊಡ್ಡ ಕೆರೆಗೆ ದೆಪ್ಚರಿ ಆಣೆಕಟ್ಟು ಕಟ್ಟಲಾಗಿದೆ. ಈ ಜಲಾಶಯ ಆಣೆಕಟ್ಟು, ಅಸವ್ಲಿ ಅಣೆಕಟ್ಟಿಗಿಂತ ದೊಡ್ಡದು.
ಶಾಂತ ಹಾಗೂ ನೆಮ್ಮದಿಯ ವಾತಾವರಣ ಹೊಂದಿರುವ ದೆಪ್ಚರಿ ಅಣೆಕಟ್ಟಿನ ಪ್ರದೇಶ ದಟ್ಟ ಹಸಿರಿನಿಂದ ಕೂಡಿದೆ. ನಿರ್ಮಲ ಹಾಗು ಪರಿಶುದ್ಧ ವಾತಾವರಣವನ್ನು ಹೊಂದಿರುವ ಈ ಪ್ರದೇಶ ಮನಸ್ಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ.
ಒತ್ತಡದ ಬದುಕಿನಿಂದ ಶಾಂತಿ ಪಡೆಯಲು, ವಾರಾಂತ್ಯಗಳಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ನಿಸರ್ಗದ ಸೌಂದರ್ಯ ಸವಿಯಬಹುದಾದ ಅದ್ಭುತ ತಾಣವಿದು.