Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಜುನಾಘಡ್ ಕೋಟೆ

ಜುನಾಘಡ್ ಕೋಟೆ, ಬಿಕಾನೇರ್

4

ಜುನಾಘಡ್ ಕೋಟೆಯು ಬಿಕಾನೇರ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಅಭೇದ್ಯ ಕೋಟೆಯನ್ನು 1593ರಲ್ಲಿ ರಾಜ ರೈ ಸಿಂಗ್ ನಿರ್ಮಿಸಿದನು.ಅನುಪ್ ಮಹಲ್, ಗಂಗಾ ನಿವಾಸ್, ರಂಗ್ ಮಹಲ್, ಚಂದ್ರ ಮಹಲ್, ಫೂಲ್ ಮಹಲ್, ಕರನ್ ಮಹಲ್ ಮತ್ತು ಶೀಷ್ ಮಹಲ್‍ನಂತಹ ಹಲವಾರು ಅರಮನೆಗಳನ್ನು ಹೊಂದಿರುವ ಈ ಕೋಟೆಯು ಕಂದಕದಿಂದ ಸುತ್ತುವರೆದಿದೆ. ಅನೂಪ್ ಮಹಲ್ ತನ್ನಲ್ಲಿರುವ ಮಂತ್ರ ಮುಗ್ಧಗೊಳಿಸುವಂತಹ ಹೊನ್ನಿನ ಎಲೆಯ ವರ್ಣಚಿತ್ರಗಳಿಗೆ ಖ್ಯಾತಿಪಡೆದಿದೆ. ಚಂದ್ರ ಮಹಲ್‍ ಮನಮೋಹಕವಾದ ಸುಣ್ಣದ ಕಲ್ಲಿನ ಗೋಡೆಗಳಲ್ಲಿನ ವರ್ಣಚಿತ್ರಗಳಿಂದ ಅಲಂಕೃತಗೊಂಡಿದೆ. ಪ್ರವಾಸಿಗರು ಫೂಲ್ ಮಹಲ್ ಅರಮನೆಯಲ್ಲಿನ ಆಕರ್ಷಕವಾಗಿ ಕನ್ನಡಿಗಳನ್ನು ಅಳವಡಿಸಿರುವ ಕುಸುರಿ ಕಾರ್ಯವನ್ನು ಕಾಣಬಹುದಾಗಿದೆ. ಕರಣ್ ಮಹಲ್ ಅನ್ನು ಬಿಕಾನೇರ್‍ನ ರಾಜರು ಮೊಘಲರ ದೊರೆ ಔರಂಗಜೇಬನ ಮೇಲೆ ಸಾಧಿಸಿದ ದಿಗ್ವಿಜಯದ ಸವಿನೆನಪಿಗಾಗಿ ನಿರ್ಮಿಸಲಾದ ಮಹಲ್ ಆಗಿದೆ. ಈ ಅರಮನೆಗಳನ್ನು ಡುಲ್ಮೆರ ಎಂದು ಕರೆಯಲಾಗುವ ಕೆಂಪು ಮರಳುಗಲ್ಲುಗಳಿಂದ ನಿರ್ಮಿಸಲಾಗಿದೆ.ಈ ಕೋಟೆಯು 986 ಉದ್ದ ಗೋಡೆಗಳನ್ನು, 37 ಬುರುಜುಗಳನ್ನು ಮತ್ತು ಎರಡು ದ್ವಾರಗಳನ್ನು ಹೊಂದಿದೆ. ಪ್ರವಾಸಿಗರು ಈ ಕೋಟೆಗೆ ಮುಖ್ಯದ್ವಾರವಾದ ಕರಣ್ ಪೋಲ್ ಮೂಲಕ ಪ್ರವೇಶಿಸಬಹುದು. ಈ ಕೋಟೆಯ ಒಳಗಡೆ ಮಹಿಮೆಯುಳ್ಳ ಹರ್ ಮಂದಿರ್ ಎಂಬ ಸಣ್ಣ ಮಂದಿರವಿದೆ. ಇದನ್ನು ಬಿಕಾನೇರ್ ನ ರಾಜ ಮನೆತನಗಳು ದೇವಾನುದೇವತೆಗಳನ್ನು ಪೂಜಿಸಲು ಬಳಸುತ್ತಿದ್ದರು. ದರ್ಬಾರ್ ಹಾಲ್, ಗಜ್ ಮಂದಿರ್ ಮತ್ತು ಸೂರಜ್ ಪೊಲ್‍ಗಳು ಈ ಕೋಟೆಯಲ್ಲಿರುವ ಇನ್ನಿತರ ಆಕರ್ಷಣೆಗಳಾಗಿವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu