ಗಂಗಾ ಸುವರ್ಣ ಮಹೋತ್ಸವ ವಸ್ತು ಸಂಗ್ರಹಾಲಯವು ಬಿಕಾನೇರ್ ನ ಲಾಲ್‍ಘಡ್ ಅರಮನೆಯ ಬಳಿಯಲ್ಲಿ ನೆಲೆಸಿದೆ. ಈ ವಸ್ತು ಸಂಗ್ರಹಾಲಯವನ್ನು 1937ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಇದನ್ನು ರಾಜಸ್ಥಾನ ಸರ್ಕಾರವು ನಿರ್ವಹಿಸುತ್ತಿದೆ. ಈ ಸಂಗ್ರಹಾಲಯವು ಟೆರ್ರಾಕೋಟಾದ ಸಾಮಾನುಗಳನ್ನು, ಆಯುಧಗಳನ್ನು, ವರ್ಣಚಿತ್ರಗಳನ್ನು, ಶಿಲ್ಪಗಳನ್ನು ಮತ್ತು ನಾಣ್ಯಗಳ ಅದ್ಭುತವಾದ ಸಂಗ್ರಹಗಳನ್ನು ಹೊಂದಿದೆ. ಇಲ್ಲಿ ಪ್ರವಾಸಿಗರು ಪ್ರಾಚೀನ ಹರಪ್ಪಾ ನಾಗರೀಕತೆಯ ಕಲಾ ವಸ್ತುಗಳ ಜೊತೆಗೆ ಗುಪ್ತ ಮತ್ತು ಕುಶಾನರ ಕಾಲದ ಕಲಾವಸ್ತುಗಳನ್ನು ಪ್ರದರ್ಶನಕ್ಕಿಟ್ಟಿರುವುದನ್ನು ಗಮನಿಸಬಹುದು.
ಈ ವಸ್ತು ಸಂಗ್ರಹಾಲಯವನ್ನು ಮಹಾರಾಜ ಗಂಗಾ ಸಿಂಗ್ ಸ್ಮಾರಕ, ಸ್ಥಳೀಯ ಕಲೆ ಮತ್ತು ಕರಕುಶಲ ಕಲೆ, ಇತಿಹಾಸ, ಶಿಲ್ಪಕಲೆ, ಟೆರ್ರಾಕೋಟಾ ಮತ್ತು ಕಂಚಿನ ಆಯುಧಗಳನ್ನು, ಮಿನಿಯೇಚರ್ ವರ್ಣಚಿತ್ರಗಳನ್ನು ಮತ್ತು ಜನಪದ ಕಲೆಗಳು ಎಂಬ ವಿವಿಧ ವಿಭಾಗಗಳಾಗಿ ವಿಭಜಿಸಲಾಗಿದೆ.


Click it and Unblock the Notifications