Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಪಿಪ್ಲಿ

ಪಿಪ್ಲಿ, ಭುವನೇಶ್ವರ

1

ಪಿಪ್ಲಿಯು ಭುಬನೇಶ್ವರದ ಸಮೀಪದಲ್ಲಿರುವ ಒಂದು ಸಣ್ಣ ಹೋಬಳಿಯಾಗಿದೆ. ಈ ಗ್ರಾಮವು ಪ್ರಾಥಮಿಕವಾಗಿ ತನ್ನ ಕರಕುಶಲ ವಸ್ತುಗಳಿಗೆ ಪ್ರಸಿದ್ಧವಾಗಿದೆ.  ಪಿಪ್ಲಿಯು ಶೋಭಾಯಮಾನ ಮತ್ತು ಮನೋಹರವಾದ, ಮನಸೂರೆಗೊಳ್ಳುವ ಕೌಶಲ್ಯವುಳ್ಳ ಕೈಚೀಲಗಳು, ಕೊಡೆಗಳು, ಪಾದರಕ್ಷೆಗಳು, ಬಟ್ಟೆಗಳು, ಗೋಡೆಯ ಅಲಂಕಾರಗಳು, ತಲೆದಿಂಬಿನ ಹೊದಿಕೆಗಳು, ಕುಶನ್ ಬಟ್ಟೆಗಳು, ಹಾಸಿಗೆಯ ಚಾದರಗಳು ಇವೇ ಮೊದಲಾದ ವಸ್ತುಗಳನ್ನು ಉತ್ಪನ್ನ ಮಾಡುತ್ತದೆ. ಪಿಪ್ಲಿಯನ್ನು ಹೊಕ್ಕೊಡನೆಯೇ ಸರ್ವರಿಗೂ ಅಪ್ಯಾಯಮಾನವಾಗುವ ಒಂದು ಅಂಶವೇನೆಂದರೆ ಇಲ್ಲಿನ ಪ್ರಕಾಶಮಾನವಾದ ಆಭರಣಗಳ ಕುಸುರಿ ಕೆಲಸವುಳ್ಳ ಚಾದರಗಳು.  

ಈ ಪ್ರಕಾರದ ಕರಕುಶಲವು ಇಲ್ಲಿನ ಗ್ರಾಮಸ್ಥರಿಗೆ ಬಹು ಕಾಲದಿಂದಲೂ ಒಂದು ಆದ್ಯತೆಯ ವೃತ್ತಿಯಾಗಿತ್ತು.  ಒಡಿಶಾದ ಅರಸರೂ ಸಹ ಈ ಸುಂದರ ಕಲಾ ಪ್ರಕಾರವನ್ನು ಬಹುವಾಗಿ ಮೆಚ್ಚಿ, ಪ್ರೋತ್ಸಾಹಿಸುತ್ತಿದ್ದರು.  ಹೂವುಗಳು, ಪಕ್ಷಿಗಳು, ಪ್ರಾಣಿಗಳು, ವೃಕ್ಷಗಳು, ಸೂರ್ಯ ಇವುಗಳ ಆಧಾರದ ಮೇಲೆ ಕಲಾವಿದರು ಸುಂದರವಾದ ನಮೂನೆಯನ್ನು, ಮಾದರಿಯನ್ನು ಆಯ್ಕೆ ಮಾಡುತ್ತಾರೆ, ತದನಂತರ ಅತ್ಯುತ್ತಮ ಬಟ್ಟೆಯನ್ನು ಹೊರತರಲು ಇದನ್ನು ಸಂಯೋಜಿಸುತ್ತಾರೆ.  ಬಟ್ಟೆಯ ಮೇಲಿನ ಈ ಕಲಾಕೃತಿಯನ್ನು, ಸಣ್ಣ ಸಣ್ಣ ಕನ್ನಡಿಗಳನ್ನು ಸೇರಿಸುವುದರ ಮೂಲಕ ಮತ್ತಷ್ಟು ಚೆಂದಗಾಣಿಸುತ್ತಾರೆ.  ಈ ಗ್ರಾಮಕ್ಕೆ ಆಗಾಗ್ಗೆ ಪ್ರವಾಸಿಗರು ಭೇಟಿ ಇತ್ತು, ಸ್ಮರಣಿಕೆಗಳನ್ನು ಮತ್ತು ಉಡುಗೊರೆ ವಸ್ತುಗಳನ್ನು ತಮ್ಮ ಆತ್ಮೀಯರಿಗಾಗಿ ಇಲ್ಲಿಂದ ಖರೀದಿಸಿ ಮನೆಗೊಯ್ಯುತ್ತಾರೆ ಅಥವಾ ತಮ್ಮ ಶೋಕೇಸ್ ನಲ್ಲಿ, ಭುಬನೇಶ್ವರದಲ್ಲಿ ಕಳೆದ ದಿನಗಳ ಸವಿನೆನಪಿಗಾಗಿ ಇಲ್ಲಿಂದ ಒಂದು ಬಣ್ಣದ ವಸ್ತುವನ್ನು ಖರೀದಿಸಿ ಮನೆಗೊಯ್ಯುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue