Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಚಂಡಕ ವನ್ಯಧಾಮ

ಚಂಡಕ ವನ್ಯಧಾಮ, ಭುವನೇಶ್ವರ

1

ಚಂಡಕ ವನ್ಯಧಾಮವು ಒಡಿಶಾದ ರಾಜಧಾನಿಯಾದ ಭುಬನೇಶ್ವರದಿಂದ ವಾಯುವ್ಯ ಭಾಗದಲ್ಲಿ ನೆಲೆಗೊಂಡಿದೆ. ಈ ವನ್ಯಧಾಮವು ಸುಮಾರು 175.79 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ವನ್ಯಧಾಮವನ್ನು ಡಿಸೆಂಬರ್ 1982ರಲ್ಲಿ ಪ್ರಮುಖವಾಗಿ ಆನೆಗಳಿಗಾಗಿ ಮೀಸಲಿಟ್ಟ ಅರಣ್ಯವನ್ನಾಗಿ ವಿನ್ಯಾಸಗೊಳಿಸಲಾಯಿತು. ಈ ವನ್ಯಧಾಮವು ತನ್ನ ಶ್ರೀಮಂತ ಪ್ರಾಣಿ ಮತ್ತು ಸಸ್ಯ ಸಂಪತ್ತುಗಳಿಂದಾಗಿ ಗಮನ ಸೆಳೆಯುತ್ತಿದೆ. ಇಲ್ಲಿ ವೈವಿಧ್ಯಮಯವಾದ ಮರ-ಗಿಡಗಳನ್ನು ನಾವು ಕಾಣಬಹುದು. ಅವುಗಳ ಅಡಿಯಲ್ಲಿ ಆಶ್ರಯವನ್ನು ಪಡೆದಿರುವ ಹಲವಾರು ಪ್ರಾಣಿ- ಪಕ್ಷಿಗಳನ್ನು ನಾವು ಇಲ್ಲಿ ಕಾಣಬಹುದು. ಅದರಲ್ಲು ಪ್ರಮುಖವಾಗಿ ಆನೆಗಳು ಇಲ್ಲಿನ ಪ್ರಸಿದ್ಧ ಪ್ರಾಣಿ ಗಣವಾಗಿದೆ.

ಇದರ ಜೊತೆಗೆ ಇಲ್ಲಿ ಚಿರತೆ, ಕೂಗುವ ಜಿಂಕೆ, ಕಾಡು ಹಂದಿ, ಪ್ಯಾಂಗೊಲಿನ್, ಭಾರತೀಯ ತೋಳ ಮತ್ತು ಇನ್ನಿತರ ಪ್ರಾಣಿ ಪಕ್ಷಿಗಳನ್ನು ನಾವಿಲ್ಲಿ ಕಾಣಬಹುದು. ಇದರ ಜೊತೆಗೆ ಈ ವನ್ಯಧಾಮದಲ್ಲಿ ಅಪರೂಪದ ಸರಿಸೃಪಗಳನ್ನು ಸಹ ನಾವು ಕಾಣಬಹುದು. ಇಲ್ಲಿರುವ ವೀಕ್ಷಣಾ ಗೋಪುರದಿಂದ ಪ್ರವಾಸಿಗರು ಬಳಿಯಲ್ಲಿ ಸುಳಿದಾಡುವ ಕಾಡು ಪ್ರಾಣಿಗಳನ್ನು  ಕಾಣಬಹುದು. ಇಲ್ಲಿ ಡೆರಸ್ ಜಲಾಶಯ ಮತ್ತು ಝುಮ್ಕ ಜಲಾಶಯಗಳೆಂದು ಕರೆಯಲ್ಪಡುವ ಎರಡು ಜಲಾಶಯಗಳು ನೆಲೆಗೊಂಡಿವೆ. ಈ ಜಲಾಶಯಗಳ ಬಳಿಯಲ್ಲಿ ಪ್ರವಾಸಿಗರಿಗಾಗಿ ಕಾಟೇಜ್‍ಗಳನ್ನು ನಿರ್ಮಿಸಲಾಗಿದೆ. ಇಲ್ಲಿಂದ ಪ್ರವಾಸಿಗರು ಸುತ್ತಲಿನ ಸುಂದರವಾದ ಪರಿಸರವನ್ನು ಆಸ್ವಾದಿಸಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat