Search
  • Follow NativePlanet
Share
ಮುಖಪುಟ » ಸ್ಥಳಗಳು» ಬಟಿಂಡಾ

ಬಟಿಂಡಾ - ಕೆರೆಗಳ ನಗರ

18

ಬಟಿಂಡಾವು ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗಿ ಈ ಹೆಸರು ಬಂದಿದೆ. ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯಿಂದಾಗಿ ಈ ಊರು ದೇಶ - ವಿದೇಶಗಳಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಬಟಿಂಡಾದ ಸುತ್ತ- ಮುತ್ತ ಇರುವ ಪ್ರವಾಸಿ ಆಕರ್ಷಣೆಗಳು

ಬಟಿಂಡಾದಲ್ಲಿ ಹಲವಾರು ದೇವಾಲಯಗಳು ಮತ್ತು ಗುರುದ್ವಾರಗಳಿದ್ದು, ಈ ಊರನ್ನು ಧಾರ್ಮಿಕ ದೃಷ್ಟಿಯಿಂದ ಒಂದು ಪ್ರಮುಖ ಕೇಂದ್ರವಾಗಿ ಮಾಡಿದೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದುದು ಕಿಲಾ ಮುಬಾರಕ್. ಚಿಕ್ಕ ಚಿಕ್ಕ ಇಟ್ಟಿಗೆಗಳಿಂದ ನಿರ್ಮಾಣಗೊಂಡ ಈ ಕೋಟೆಯು ತನ್ನ ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಪ್ರಮುಖ ಸ್ಮಾರಕವಾಗಿ ಗುರುತಿಸಿಕೊಂಡಿದೆ. ಗುರುದ್ವಾರ ಲಖಿ ಜಂಗಲ್ ಸಾಹಿಬ್ ದೇಶದಲ್ಲಿ ನೆಲೆಗೊಂಡಿರುವ ಸಿಖ್ಖರ ಪಾಲಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಕಾಡಿನ ನಡುವೆ ನೆಲೆಗೊಂಡಿರುವ ಈ ಗುರುದ್ವಾರವು ಬಟಿಂಡಾದ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚೇತಕ್ ಪಾರ್ಕ್, ಡಂಡಮ ಸಾಹಿಬ್, ಬಟಿಂಡಾ ಕೆರೆ, ಮೈಸೆರ್ ಖಾನಾ, ಪ್ರಾಣಿ ಸಂಗ್ರಹಾಲಯ, ದೋಬಿ ಬಜಾರ್ ಮತ್ತು ಪೀರ್ ಹಾಜಿ ರಟ್ಟನ್‍ರವರ ಮಝಾರ್ ಇಲ್ಲಿ ನೆಲೆಗೊಂಡಿರುವ ಇನ್ನಿತರ ಪ್ರವಾಸಿ ತಾಣಗಳಾಗಿವೆ. ಪ್ರವಾಸಿಗರು ಉಳಿದುಕೊಳ್ಳಲು ಐಶಾರಾಮಿ ವಸತಿಯನ್ನು ಬಯಸುವಂತಿದ್ದಲ್ಲಿ, ಅವರು ಬಟಿಂಡಾ ಕೋಟೆಗೆ ಭೇಟಿ ನೀಡಬಹುದು. 1930ರಲ್ಲಿ ನಿರ್ಮಾಣಗೊಂಡ ಈ ಕೋಟೆಯನ್ನು ಪಟಿಯಾಲ ಎಸ್ಟೇಟಿನ ಮಹಾರಾಜ ಭೂಪಿಂದರ್ ಸಿಂಗ್‍ರವರ ಸೇನೆಯ ವಸತಿಯನ್ನಾಗಿ ಬಳಸಲಾಗುತ್ತಿತ್ತು. ಇದನ್ನು ಇಂದು ಚತುರ್ತಾರ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.

ಬಟಿಂಡಾಗೆ ತಲುಪುವುದು ಹೇಗೆ

ದೆಹಲಿಯಿಂದ 326 ಕಿ.ಮೀ ದೂರದಲ್ಲಿರುವ ಬಟಿಂಡಾಗೆ ರಸ್ತೆಯ ಮೂಲಕ 6 ಗಂಟೆಗಳ ಪ್ರಯಾಣವಧಿ ತಗುಲುತ್ತದೆ. ಪಂಜಾಬಿನ ಪ್ರಮುಖ ನಗರಗಳಿಂದ ಬಟಿಂಡಾಗೆ ಬಸ್, ಕ್ಯಾಬ್ ಮತ್ತು ಟ್ಯಾಕ್ಸಿಗಳ ಮೂಲಕ ತಲುಪಬಹುದು. ದೇಶದ ಪ್ರಮುಖ ನಗರಗಳಿಂದ ಬಟಿಂಡಾಗೆ ರೈಲುಗಳ ಸಂಪರ್ಕವಿದೆ. ಪ್ರವಾಸಿಗರು ಲೂಧಿಯಾನಗೆ ವಿಮಾನದ ಮೂಲಕ ತಲುಪಿ ಅಲ್ಲಿಂದ ಬಟಿಂಡಾಗೆ ಬಸ್ ಅಥವಾ ಟ್ಯಾಕ್ಸಿಯಲ್ಲಿ ತೆರಳಬಹುದು.

ಬಟಿಂಡಾಗೆ ಭೇಟಿ ನೀಡಲು ಅತ್ಯುತ್ತಮ ಕಾಲ

ಬಟಿಂಡಾಗೆ ಭೇಟಿ ನೀಡಬೇಕಾಂದದಲ್ಲಿ ಅಕ್ಟೊಬರ್ ನಿಂದ ಮಾರ್ಚ್ ನಡುವಿನ ಅವಧಿಯಲ್ಲಿ ಭೇಟಿ ನೀಡುವುದು ಉತ್ತಮ.

ಬಟಿಂಡಾ ಪ್ರಸಿದ್ಧವಾಗಿದೆ

ಬಟಿಂಡಾ ಹವಾಮಾನ

ಉತ್ತಮ ಸಮಯ ಬಟಿಂಡಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬಟಿಂಡಾ

  • ರಸ್ತೆಯ ಮೂಲಕ
    ಬಟಿಂಡಾವು ಹರಿಯಾಣ, ಉತ್ತರ್ ಪ್ರದೇಶ್, ರಾಜಸ್ಥಾನ್ ಮತ್ತು ಹಿಮಾಚಲ್ ಪ್ರದೇಶ್ ರಾಜ್ಯಗಳ ಜೊತೆಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಬಟಿಂಡಾಗೆ ರಾಜ್ಯ ಹಾಗು ಹೊರರಾಜ್ಯದ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಬಂದು ಹೋಗುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬಟಿಂಡಾ ಜಂಕ್ಷನ್ ಮೂಲಕ ಸಾಗುವ ರೈಲುಗಳು ಪ್ರವಾಸಿಗರನ್ನು ದೇಶದ ಇತರ ಭಾಗಗಳ ಜೊತೆಗೆ ಸಂಪರ್ಕಿಸಲು ನೆರವಾಗುತ್ತದೆ. ಇದರ ಜೊತೆಗೆ ಪಂಜಾಬಿನ ಇತರ ಪ್ರಮುಖ ನಗರಗಳಾದ ಚಂಡಿಘಡ್, ಲೂಧಿಯಾನ ಮತ್ತು ಅಮೃತ್‍ಸರ್ ನಡುವೆ ಇಲ್ಲಿಂದ ರೈಲುಗಳು ಸಂಚರಿಸುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬಟಿಂಡಾಗೆ ಸಮೀಪದ ವಿಮಾನ ನಿಲ್ದಾಣವು ಲೂಧಿಯಾನದಲ್ಲಿದೆ. ಅಮೃತ್‍ಸರ್ ಮತ್ತು ಚಂಡಿಘಡ್ ಇಲ್ಲಿಗೆ ಸಮೀಪದ ಇನ್ನಿತರ ವಿಮಾನ ನಿಲ್ದಾಣಗಳಾಗಿವೆ. ಈ ವಿಮಾನ ನಿಲ್ದಾಣಗಳಿಂದ ಪ್ರವಾಸಿಗರು ಬಟಿಂಡಾಗೆ ಟ್ಯಾಕ್ಸಿ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu