Search
  • Follow NativePlanet
Share

ಬರೋಗ್ - ಸಾಹಸ ಪ್ರಿಯರಿಗೊಂದು ಸ್ವರ್ಗ

15

ನಮ್ಮ ದೇಶದಲ್ಲಿ ಹಲವಾರು ಐತಿಹಾಸಿಕ ಕಥೆಗಳನ್ನು ಹೊಂದಿರುವ ಅದೇಷ್ಟೋ ಸ್ಥಳಗಳನ್ನು ಕಾಣಬಹುದು. ಇಂತಹ ಸ್ಥಳಗಳಲ್ಲಿ ಅಂದಿನ ವಿಚಾರಗಳು, ಸಾಹಸಗಳು ಇಂದಿಗೂ ಜೀವಂತವಾಗಿರುತ್ತದೆ. ಅಂತಹ ಸ್ಥಳಗಳಿಗೆ ಉತ್ತಮ ಉದಾಹರಣೆಯೆಂದರೆ ಹಿಮಾಚಲ ಪ್ರದೇಶದ ಬರೋಗ್ ಗ್ರಾಮ.

ಬರೋಗ್ ಗ್ರಾಮದಲ್ಲಿನ ಸುರಂಗ ರೈಲ್ವೆ ಮಾರ್ಗದಿಂದಾಗಿಯೇ ಖ್ಯಾತಿಯನ್ನು ಗಳಿಸಿದೆ. ಈ ಕಾರಣದಿಂದಲೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಅಪಾರ. ಶಿಮ್ಲಾಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಈ ಪುಟ್ಟ ಗ್ರಾಮ ಸದಾ ಪ್ರವಾಸಿಗರನ್ನು ಆಕರ್ಷಿಸುತ್ತದೆ!

ಬರೋಗ್, ಸಮುದ್ರ ಮಟ್ಟದಿಂದ 6000 ಅಡಿ ಎತ್ತರದಲ್ಲಿದ್ದು, ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿದೆ. ಇಂದು ಇದೊಂದು ಪ್ರಖ್ಯಾತ ಪ್ರವಾಸಿ ತಾಣವಾವೆನಿಸಿದೆ. ಇದು 20 ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದ ಒಂದು ವಸಾಹತು ಹುಟ್ಟಿನ, ಒಂದು ಸಣ್ಣ ಹಳ್ಳಿ. ಈ ಸಮಯದಲ್ಲಿ ಇಲ್ಲಿ ಕಲ್ಕಾ - ಶಿಮ್ಲಾ ರೈಲ್ವೆ ಎಂಬ ನ್ಯಾರೋ ಗೇಜು ರೈಲು ಮಾರ್ಗವು ನಿರ್ಮಾಣಗೊಂಡಿತು.

ಪರ್ವತದ ಮೂಲಕ ಭಾರಿ ಸುರಂಗದ ನಿರ್ಮಾಣ ಮಾಡಲು ಯೋಜಿಸಿದ್ದ ಬರೋಗ್ ಎಂಬ ಎಂಜಿನಿಯರ್ ನಿಂದಾಗಿ ಈ ಗ್ರಾಮಕ್ಕೆ ಬರೋಗ್ ಎಂದು  ಹೆಸರಿಸಲಾಯಿತು. ಬರೋಗ್ ಸುರಂಗದ ನಿರ್ಮಾಣ ಪ್ರಕ್ರಿಯೆಯನ್ನು ವೇಗವನ್ನು ವೃದ್ಧಿಸಲು ಅವನು ಪರ್ವತದ ಎರಡು ವಿರುದ್ಧ ಪಾರ್ಶ್ವಗಳಿಂದ ಸುರಂಗ ಅಗೆಯುವುದಕ್ಕೆ ಆದೇಶಿಸಿದರು. ಆದಾಗ್ಯೂ, ತನ್ನ ತಪ್ಪು ಲೆಕ್ಕಾಚಾರಗಳ ಕಾರಣದಿಂದಾಗಿ, ಸುರಂಗದ ಇಬ್ಬದಿಯ ತುದಿಗಳು ಒಂದಕ್ಕೊಂದು ಸಂಪರ್ಕ ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರಿಗೆ ಬ್ರಿಟಿಷ್ ಸರ್ಕಾರವು ದಂಡ ವಿಧಿಸಿತು. ಇದರಿಂದಾಗಿ ಮುಜುಗರದಿಂದ ಅವರು ಆತ್ಮಹತ್ಯೆಗೆ ಶರಣಾದರು. ಈ ಎಂಜಿನಿಯರ್ ದೇಹವನ್ನು ಸುರಂಗದ ಹತ್ತಿರದಲ್ಲಿಯೇ ಸಮಾಧಿ ಮಾಡಲಾಯಿತು ಮತ್ತು ನಂತರ, ಈ ಗ್ರಾಮಕ್ಕೆ ಇತನ ಹೆಸರನ್ನೇ ಇಡಲಾಯಿತು. ಘಟನೆಯ ನಂತರ, ಸುರಂಗ ನಿರ್ಮಿಸುವ ಉಳಿದ ಕೆಲಸವನ್ನು ಎಚ್ಎಸ್ ಹ್ಯಾರಿಂಗ್ಟನ್ ಎಂಬ ರೈಲ್ವೆ ಮುಖ್ಯ ಎಂಜಿನಿಯರ್ ಪೂರ್ಣಗೊಳಿಸಿದರು. ಈ ಸುರಂಗವು ಸುಮಾರು 1143,61 ಮೀ ಸುದೀರ್ಘವಾಗಿದ್ದು, ಈಗ ಕಲ್ಕಾ- ಶಿಮ್ಲಾ ರೈಲ್ವೆ ದೀರ್ಘವಾದ ಸುರಂಗಗಳಲ್ಲಿ ಒಂದಾಗಿದೆ. ಇದು ವಿಶ್ವದ ಅತ್ಯಂತ ಪ್ರಬಲ ಸುರಂಗ ಎಂದು ಕರೆಯಲಾಗುತ್ತದೆ.

ಶಿಮ್ಲಾ ಪ್ರಯಾಣ ಮಾಡುವ ಬಹುಪಾಲು ಪ್ರಯಾಣಿಕರು ಚಂಡೀಘಢ ನಿಂದ 60 ಕಿಮೀ ದೂರದಲ್ಲಿರುವ ಕಲ್ಕಾ- ಶಿಮ್ಲಾ ಹೆದ್ದಾರಿಯಲ್ಲಿನ ಬರೋಗ್ ನಲ್ಲಿ ತಂಗುತ್ತಾರೆ. ಚೂರ್ ಚಾಂದನಿ ಶಿಖರ ಈ ಪ್ರದೇಶದ ಅವಿಭಾಜ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಬರೋಗ್ ನ ಇತರೆ ಪ್ರಮುಖ ಪ್ರವಾಸಿ ತಾಣಗಳೆಂದರೆ, ಡಾಗ್ಶೈ, ವಿಶಾಲ್ ಶಿವ ದೇವಸ್ಥಾನ, ಡೋಲಂಜಿ ಬಾನ್ ಮಠ ಮತ್ತು ರೇಣುಕಾ ಸರೋವರ. ಇವುಗಳ ಜೊತೆಗೆ, ಶೋಲೋನಿ ದೇವಿ ದೇವಸ್ಥಾನ, ಮಕ್ಕಳ ಉದ್ಯಾನ ಮತ್ತು ಜವಾಹರ್ ಉದ್ಯಾನ ಸಹ ಪ್ರವಾಸಿಗರು ನೋಡುವಂತಹ ಸ್ಥಳವಾಗಿದೆ.

ಚಂಡೀಘಡ್ ಮತ್ತು ಶಿಮ್ಲಾ, ಬರೋಗ್ ಗೆ ಹತ್ತಿರದ ವಿಮಾನ ನಿಲ್ದಾಣಗಳಾಗಿವೆ. ಶಿಮ್ಲಾ ವಾಯುನೆಲೆ ವಿಮಾನದ ಮೂಲಕ ನೇರವಾಗಿ ಕುಲ್ಲು ಮತ್ತು ದೆಹಲಿ ನಗರಗಳಿಗೆ ಸಂಪರ್ಕವಿದೆ. ಹಾಗೆಯೇ ಚಂಡೀಘಢ ವಿಮಾನ ನಿಲ್ದಾಣದ ಮೂಲಕ ದೆಹಲಿ, ಮುಂಬೈ, ಪುಣೆ ಮತ್ತು ಬೆಂಗಳೂರು ನಂತಹ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ರೈಲು ಪ್ರಯಾಣ ಬಯಸುವ ಪ್ರವಾಸಿಗರು ಬರೋಗ್ ರೈಲು ನಿಲ್ದಾಣ ತನಕ ಟಿಕೆಟ್ ಬುಕ್ ಮಾಡಬಹುದು. ಪ್ರವಾಸಿಗರಿಗೆ ದೆಹಲಿ, ಚಂಡೀಘಢ, ಚೈಲ್, ಕಸೌಲಿ, ಸೋಲನ್ ಮತ್ತು ಶಿಮ್ಲಾ ಮುಂತಾದ ಸ್ಥಳಗಳಿಂದ ಬಸ್ ನಿಲ್ದಾಣಕ್ಕೆ ತಲುಪಲು ಸಾಧ್ಯ. ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಈ ಸ್ಥಳಕ್ಕೆ ಭೇಟಿ ಸೂಕ್ತವಾದುದು ಎಂದು ಪರಿಗಣಿಸಲಾಗಿದೆ.

ಬರೋಗ್ ಪ್ರಸಿದ್ಧವಾಗಿದೆ

ಬರೋಗ್ ಹವಾಮಾನ

ಉತ್ತಮ ಸಮಯ ಬರೋಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬರೋಗ್

  • ರಸ್ತೆಯ ಮೂಲಕ
    ಬರೋಗ್ ಶಿಮ್ಲಾ-ಕಲ್ಕಾ ಹೆದ್ದಾರಿಯಲ್ಲಿದೆ. ಪ್ರಯಾಣಿಕರು ರಸ್ತೆ ಮಾರ್ಗವಾಗಿ ಪ್ರಯಾಣ ಮಾಡಲು ಬಯಸಿದರೆ ಕಲ್ಕಾದಿಂದ ಶಿಮ್ಲಾಕ್ಕೆ ನಿರಂತರವಾದ ಬಸ್ ಹಾಗೂ ಬಾಡಿಗೆ ಟ್ಯಾಕ್ಸಿಗಳ ಸೌಲಭ್ಯವನ್ನು ಪಡೆಯಬಹುದು. ಬರೋಗ್ ನಿಂದ ಹತ್ತಿರದ ಬಸ್ ನಿಲ್ದಾಣ 8 ಕೀ.ಮಿ ಅಂತರದಲ್ಲಿ ಸೋಲನ್ ನಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬರೋಗ್ ನಿಂದ 37 ಕೀ.ಮಿ ಅಂತರದಲ್ಲಿರುವ ಕಲ್ಕಾದಲ್ಲಿರುವ ಬ್ರಾಡ್ ಗೇಜ್ ರೈಲ್ವೆ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬರೋಗ್, ಕಲ್ಕಾ ಮತ್ತು ಶಿಮ್ಲಾ ನಡುವೆ ಸಂಚರಿಸುವ ಕಿರಿದಾದ ಗೇಜ್ ಅನ್ನು ಕೂಡಾ ಹೊಂದಿದೆ. ಪ್ರವಾಸಿಗರು ಈ ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಬಸ್ ಗಳ ಮೂಲಕ ಸುಲಭವಾಗಿ ಬರೋಗ್ ಸ್ಥಳವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬರೋಗ್ ನಿಂದ 65 ಕೀ.ಮಿ ದೂರದಲ್ಲಿರುವ ಚಂಡೀಘಡ್ ವಿಮಾನ ನಿಲ್ದಾಣವು ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಭಾರತದ ಪ್ರಮುಖ ಪಟ್ಟಣಗಳಾದ ಮುಂಬೈ, ಬೆಂಗಳೂರು, ಧರ್ಮಶಾಲಾ, ಜೈಪುರ್ ಮತ್ತು ದೆಹಲಿಗಳಿಗೆ ಉತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಇದರ ಜೊತೆಗೆ ಶಿಮ್ಲಾ ವಿಮಾನ ನಿಲ್ದಾಣವು ಬರೋಗ್ ನಿಂದ 73 ಕೀ.ಮಿ ಅಂತರದಲ್ಲಿದೆ. ಈ ವಿಮಾನ ನಿಲ್ದಾಣಗಳಿಂದ ಪ್ರವಾಸಿಗರು ಟ್ಯಾಕ್ಸಿ ಅಥವಾ ಬಸ್ ಗಳ ಮೂಲಕ ಬರೋಗ್ ಪ್ರದೇಶವನ್ನು ತಲುಪಬಹುದು. ನವ ದೆಹಲಿಯ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu