ಕಂಪನಿ ಭಾಗ್, ಸುಂದರವಾದ ಗಾರ್ಡನ್ ಆಗಿದ್ದು, ದಟ್ಟ ಹಸಿರು ಮತ್ತು ಆಕರ್ಷಕ ಬಣ್ಣ ಬಣ್ಣಗಳ ಲಾನ್‌ನ್ನು ಹೊಂದಿದೆ. ಇದು ಅಲ್ವಾರಿನ ಆಕರ್ಷಣೆಯ ಪ್ರಮುಖ ಕೇಂದ್ರವಾಗಿದೆ. ಭಾಗ್‌ನ್ನು ರಾಜಾ ಶಿವ್ ದಾನ್ ಸಿಂಗ್‌ರಿಂದ 1868ರಲ್ಲಿ ನಿರ್ಮಿಸಲ್ಪಟ್ಟಿತು. ದೇಶದ ಮರಳು ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಥಾರ್ನ ಕಣಿವೆಯ ಮಧ್ಯದಲ್ಲಿ ಇದು ಓಯಾಸಿಸ್ ರೀತಿ ಇದೆ. ಈ ಗಮನಾರ್ಹ ಗಾರ್ಡನ್‌ನಲ್ಲಿ ಬೆಂಗಾಲಿ ಶೈಲಿಯ “ಛತ್ರಿ” ಕೂಡಾ ಇದೆ. ಈ ಗಾರ್ಡನ್‌ನಲ್ಲಿ ಶಿಮ್ಲಾ ಹೌಸ್ ಕೂಡಾ ಇದ್ದು, ಇದು ತನ್ನ ಬೃಹತ್ ಇಮೇಜ್‌ನಿಂದ ಗಮನ ಸೆಳೆಯುತ್ತಿದೆ. 1885ರಲ್ಲಿ ಈ ವಾಸ್ತುಶಿಲ್ಪವನ್ನು ಮಹಾರಾಜ ಮಂಗಲ್ ಸಿಂಗ್ ನಿರ್ಮಿಸಿದರು.


Click it and Unblock the Notifications