ಸಿಯೊಮ್ ಮತ್ತು ಸಿಪು ನದಿಗಳು ಅಲಾಂಗ್‍ನ ಪಕ್ಕದಲ್ಲಿ ಹರಿದು ಹೋಗುತ್ತವೆ. ಈ ನದಿಗಳು ಸಾಹಸಿ ಮನೋಭಾವದವರಿಗೆ ರಿವರ್ ರಾಫ್ಟಿಂಗ್‍ನ ಮೋಜು ಸವಿಯಲು ಅವಕಾಶವನ್ನು ಒದಗಿಸುತ್ತವೆ. ಇಲ್ಲಿಂದ ಸಾಗುವ ಈ ನದಿಗಳು ಮುಂದೆ ಬ್ರಹ್ಮ ಪುತ್ರ ನದಿಯನ್ನು ಸೇರುತ್ತವೆ. ಇಲ್ಲಿನ ರಾಫ್ಟಿಂಗ್ ಅನ್ನು ವೈಟ್ ವಾಟರ್ ರಾಫ್ಟಿಂಗ್ ಎಂದು ಕರೆಯಲಾಗುತ್ತದೆ. ಇಲ್ಲಿ ಹರಿಯುವ ಸ್ವಾಭಾವಿಕ ನದಿಗಳು ಮತ್ತು ವಾತಾವರಣವು ರಿವರ್ ರಾಫ್ಟಿಂಗ್‍ಗೆ ಹೇಳಿ ಮಾಡಿಸಿದಂತಹ ಅನುಕೂಲಗಳನ್ನು ಒದಗಿಸುತ್ತವೆ.


Click it and Unblock the Notifications