’ಕೇರಳದ ಅನ್ನದ ಬಟ್ಟಲು’ ಎಂದೇ ಪ್ರಸಿದ್ದವಾದ ಸ್ಥಳ ಕುಟ್ಟನಾಡು. ದೇಶದ ಕೃಷಿ ಭೂಪಟದಲ್ಲಿಯೂ ಕುಟ್ಟನಾಡ್ ಗೆ ವಿಶೇಷ ಸ್ಥಾನವಿದೆ. ಅಚ್ಚನ್ ಕೋವಿಲ್, ಮನಿಮಾಲ, ಮೀನಾಚಿಲ್, ಮತ್ತು ಪಾಂಪ ಮುಂತಾದ ನದಿಗಳು ಇಲ್ಲಿನ ಕೃಷಿಕರಿಗೆ ಜೀವದಾಯಿನಿಗಳು. ಇಲ್ಲಿನ ಪ್ರಾಕೃತಿಕ ಸೊಬಗೂ ಮನಮೋಹಕವಾಗಿದೆ. ಇಲ್ಲಿನ ಜನರ ಜೀವನ ಶೈಲಿ ಅತ್ಯಂತ ಸರಳ.
ಇಲ್ಲಿನ ನದಿಗಳಲ್ಲಿ ವಿಹಾರ ಮಾಡುವ ಆಸೆಯದ್ದರೆ, ಬಾಡಿಗೆ ದೋಣಿಗಳನ್ನು ಪಡೆದುಕೊಂಡು ಸುತ್ತಾಡಬಹುದು. ಅತ್ಯಂತ ಖುಷಿ ಕೊಡುವ ಸಂಗತಿಯೆಂದರೆ ಇಲ್ಲಿನ ಜನರು ನಮ್ಮೊಂದಿಗೆ ಆತ್ಮೀಯವಾಗಿ ಬೆರೆಯುತ್ತಾರೆ.


Click it and Unblock the Notifications