ಅಂಬಲಪುಳಾ ಶ್ರೀಕೃಷ್ಣ ದೇವಸ್ಥಾನಕ್ಕೆ ಪುರಾತನವಾದ ಇತಿಹಾಸವಿದೆ. ಕ್ರಿಶ 790 ರ ಸುಮಾರಿನಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ಚಂಬಕೇಸರಿ ಪೂರದಮ್ ತಿರುನಲ್ ದೇವನಾರಾಯಣ ಈ ದೇವಸ್ಥಾನವನ್ನು ಕಟ್ಟಿಸಿದ್ದು. ಇಲ್ಲಿ ಪೂಜಿಸಲ್ಪುಡುವ ಅಧಿದೇವತೆ ಪಾರ್ಥಸಾರಥಿ, ಪ್ರಸಿದ್ಧ ಗುರುವಾಯೂರಪ್ಪನ ಜೊತೆ ಆಧ್ಯಾತ್ಮಿಕ ಸಂಬಂಧ ಹೊಂದಿದ್ದಾನೆ ಎಂಬುದು ನಂಬಿಕೆ.
ದೇವರ ನೈವೇದ್ಯಕ್ಕಿಟ್ಟ ಹಾಲಿನ ಪ್ರಸಾದವನ್ನು ಸ್ವೀಕರಸಲು ಇಲ್ಲಿ ಪ್ರತಿದಿನವೂ ಕೂಡ ಗುರುವಾಯೂರಪ್ಪ ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾನೆ ಎಂದು ಇಂದಿಗೂ ನಂಬಲಾಗುತ್ತದೆ. ಪ್ರತಿವರ್ಷ ಇಲ್ಲಿ ಅಂಬಲಪುಳಾ ದೇವಸ್ಥಾನ ಹಬ್ಬ ಹಾಗೂ ಆರಾಟ್ಟು ಹಬ್ಬವನ್ನು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ.