ಸಂತ ಸೆಬಾಸ್ಟಿಯನ್ ಇಗರ್ಜಿ(ಚರ್ಚ್) ಕ್ರೈಸ್ತ ಯಾತ್ರಾರ್ಥಿಗಳಿಗೆ ಒಂದು ಮುಖ್ಯವಾದ ಸ್ಥಳ. ಈ ಇಗರ್ಜಿ(ಚರ್ಚ್) ಮೂದಲ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳುತ್ತಾರೆ ಸಂತ ಸೆಬಾಸ್ಟಿಯನ್. ಇನ್ನುಳಿದ ಏಳು ಪ್ರಮುಖ ಚರ್ಚುಗಳ ಫೈಕಿ ಸಂತ ಸೆಬಾಸ್ಟಿಯನ್ ನಿಂದ ಉದ್ಧಾವಾದದ್ದು ಇದೊಂದೇ ಚರ್ಚು ಎಂಬ ಹೆಚ್ಚುಗಾರಿಕೆಯೂ ಇದರ ಜತೆಗಿದೆ. ಈ ಚರ್ಚು ಐತಿಹಾಸಿಕ ಪ್ರಸಿದ್ಧವಾದ ಅರ್ತುಂಕಲ್ ಪೆರುನಲ್ ಎಂಬ ಉತ್ಸವವನ್ನು ಪ್ರತೀ ವರ್ಷವೂ ಆಚರಿಸುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ.
(ಅಲ್ಲೆಪ್ಪೆ ಜಿಲ್ಲೆಯಲ್ಲಿ ಅರ್ತುನ್ ಎಂಬ ಒಂದು ಊರಿದೆ ಪೆರುನಲ್ ಎಂದರೆ ಹಬ್ಬ) ನೆರೆದಂಥ ಜನ ಸಂತ ಸೆಬಾಸ್ಟಿಯನ್ ಪ್ರತಿಮೆಯೊಂದಿಗೆ ವೈಭವಯುತ ಮೆರವಣಿಗೆ ನಡೆಸಿ, ಸಮುದ್ರ ತೀರದವರೆಗೂ ಹೋಗಿ ಮರಳಿಚರ್ಚಿಗೆ ಬರುತ್ತಾರೆ. ಕೆಲವು ಭಕ್ತರು ಅವರ ಪ್ರಾಚೀನ ಕಾಲದ ಪದ್ಧತಿಯಂತೆ ಅಂಬೆಗಾಲಿಡುತ್ತ ಅವರ ಸಂತರುಗಳನ್ನು ಬಲಿಪೀಠದವರೆಗೂ ಕರೆದು ತರುತ್ತಾರೆ. ಈ ಹಬ್ಬವನ್ನು ದೇವರ ಅರ್ಶಿವಾದವೆಂದು ತಿಳಿದು ಪ್ರತಿ ವರ್ಷ ಜನೇವರಿಯಲ್ಲಿ ಅಚರಿಸಲಾಗುತ್ತದೆ. ಈ ಇಗರ್ಜಿ ಅಲ್ಲೆಪ್ಪೆಯಿಂದ 23 ಕಿ.ಮಿ ದೂರದಲ್ಲಿದೆ. ಇಲ್ಲಿಗೆ ತೆರಳುವುದಕ್ಕೆ ನಗರದಿಂದ ಒಳ್ಳೆ ಸಂಚಾರ ವ್ಯವಸ್ಥೆಯೂ ಇರುವುದರಿಂದ ಪರವಾಸಕ್ಕೆ ಯಾವುದೇ ಅಡಚಣೆ ಉಂಟಾಗದು.