Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಅಲೆಪ್ಪಿ ಬೀಚ್

ಅಲೆಪ್ಪಿ ಬೀಚ್, ಅಲೆಪ್ಪಿ

4

ಬೀಚುಗಳಲ್ಲಿ ಭಿನ್ನವಾಗಿರುವ ಅಲೆಪ್ಪಿ ಬೀಚ್ ಉಳಿದ ಕರಾವಳಿ ನಗರಗಳ ಬೀಚ್‌ಗಳಂತಿಲ್ಲ. ನಗರದ ಹೃದಯ ಭಾಗದಲ್ಲಿರುವ ಅಲೆಪ್ಪಿ ಬೀಚ್, ರೈಲ್ವೇ ನಿಲ್ದಾಣದಿಂದ ಸರಿಸುಮಾರು ಒಂದು ಕಿಲೋ ಮೀಟರ್ ಅಂತರದಲ್ಲಿದೆ. ಒಂದು ಬದಿಯಲ್ಲಿ ಬೊಬ್ಬಿರಿಯುವ ಅರಬ್ಬಿ ಸಮುದ್ರ, ಇನ್ನೊಂದು ಬದಿಯಲ್ಲಿ ಆಳೆತ್ತರದ ಪಾಮ್ ಮರಗಳು ಅಲೆಪ್ಪಿ ಬೀಚಿನ ಹೊಳೆಯುವ ಮರಳಿಗೆ ಹೊಸ ಮೆರುಗು ನೀಡಿವೆ.

ಸೂರ್ಯಾಸ್ತದ ಕೆಂಪು ಬಣ್ಣಗಳು ಸಮುದ್ರದ ಅಲೆಗಳೊಂದಿಗೆ ಸೇರಿ ನೋಡುವುದಕ್ಕೆ ರೋಮಂಚನ ಹುಟ್ಟಿಸುತ್ತವೆ. ಸ್ನೇಹಿತರು, ಕುಟುಂಬದವರೊಟ್ಟಿಗೆ ಬದುಕಿನ ಮಧುರ ಕ್ಷಣಗಳನ್ನು ಸಾರ್ಥಕಗೊಳಿಸಿಕೊಳ್ಳಲು ಅಲೆಪ್ಪಿ ಬೀಚ್ ಹೇಳಿ ಮಾಡಿಸಿದ ಕಡಲ ತಡಿ. ಅಲೆಪ್ಪಿ ಬೀಚ್ ನಲ್ಲಿ ಕಾಲಿಟ್ಟಾಗ ಎರಡು ಅವಕಾಶಗಳನ್ನು ಯಾವತ್ತೂ ಮಿಸ್ ಮಾಡಿಕೊಳ್ಬೇಡಿ. ಒಂದು, ಸಮುದ್ರದ ಅಲೆಗಳ ಮೇಲೆ ದೋಣಿ ವಿಹಾರ. ಇನ್ನೊಂದು, ದೀಪಸ್ಥಂಭದಲ್ಲಿ ನಿಂತು ಹಾರಾಡುವ ಹಕ್ಕಿಗಳನ್ನು ನೋಡುವುದು. ಎಂಟ್ರಿ ಫೀ ಕೊಟ್ಟು ದೋಣಿ ಹತ್ತಿದರೆ ಸಮುದ್ರದ ಅಲೆಗಳೊಂದಿಗೆ ಹತ್ತಿರದಲ್ಲಿಯೇ ಆಡಬಹುದು. ದೀಪಸ್ಥಂಭದಲ್ಲಿ ನಿಂತು ಹರುವ ಹಕ್ಕಿಗಳೊಟ್ಟಿಗೆ ನಾವೂ ಹಾರಿದಂತೆ ಭಾಸವಾಗುತ್ತದೆ. ಸದ್ಯ ಪ್ರವಾಸಿ ತಾಣವಗಿ ಮಾರ್ಪಟ್ಟಿರುವ ಅಲೆಪ್ಪಿ ಲೈಟ್ ಹೌಸ್ ಒಂದು ಕಾಲಕ್ಕೆ ಇಲ್ಲಿನ ಬಂದರಿಗೆ ಪ್ರಾಮುಖ್ಯತೆ ತಂದುಕೊಟ್ಟಿತ್ತು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue