ಅಕ್ಬರನ ಅರಮನೆ ಮತ್ತು ಮ್ಯೂಸಿಯಂನ್ನು 1570 ರಲ್ಲಿ ನಿರ್ಮಿಸಲಾಗಿದೆ. ರಾಜಸ್ತಾನದ ಅತಿ ಗಟ್ಟಿಯಾದ ಕಟ್ಟಡ ಇದೆಂದು ಪರಿಗಣಿಸಲಾಗಿದೆ. ಇದು ಮೊಘಲ್ ದೊರೆ ಜಹಾಂಗಿರ್ ಮತ್ತು ಮುಘಲ್ ಪ್ರದೇಶದ ಇಂಗ್ಲಿಷ್ ರಾಯಭಾರಿಯಾಗಿರುವ ಸರ್ ಥಾಮಸ್ ರಾಯ್ ಭೇಟಿಯಾಗುವ ಪ್ರದೇಶ ಇದಾಗಿತ್ತು. 1908 ರಲ್ಲಿ ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಯ್ತು. ಇದು 6 ಮತ್ತು 7ನೇ ಶತಮಾನದ ಹಿಂದೂ ಮೂರ್ತಿಗಳ ಆಗರವಾಗಿದೆ. ಇದು ರಜಪೂತ ಮತ್ತು ಮುಘಲ್ ಶೈಲಿಯ ಸಮ್ಮಿಶ್ರಣವಾಗಿದೆ.ಕಾಳಿಯ ಅತಿದೊಡ್ಡದಾದ ಕಪ್ಪು ಮಾರ್ಬಲ್ ಮೂರ್ತಿಯು ಇಲ್ಲಿನ ಜನಪ್ರಿಯ ಮೂರ್ತಿಯಾಗಿದೆ. ಹಳೆಯಕಾಲದ ಮಿಲಿಟರಿ ಮತ್ತು ಯುದ್ಧ ಪರಿಕರಗಳು, ಪುರಾತನ ಕಲಾಕೃತಿಗಳು, ಮೂರ್ತಿಗಳು ಮತ್ತು ಕಲ್ಲಿನ ಮೂರ್ತಿಗಳನ್ನೂ ಕೂಡಾ ಈ ಮ್ಯೂಸಿಯಂನಲ್ಲಿ ಇರಿಸಲಾಗಿದೆ.


Click it and Unblock the Notifications