Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಫಿರೋಜ್ ಖಾನ್ ಖ್ವಾಜಸರಾಯ್ ಸಮಾಧಿ

ಫಿರೋಜ್ ಖಾನ್ ಖ್ವಾಜಸರಾಯ್ ಸಮಾಧಿ, ಆಗ್ರಾ

1

ಫಿರೋಜ್ ಖಾನ್ ಖ್ವಾಜಸರಾಯ್  ಚಕ್ರವರ್ತಿ ಶಹ ಜಹಾನನ ಆಸ್ಥಾನದಲ್ಲಿದ್ದ ಒಬ್ಬ ಕುಲೀನ ವ್ಯಕ್ತಿ. ಈತನ ಬಗ್ಗೆ ಚಕ್ರವರ್ತಿ ಜಹಾಂಗೀರ್ ಅಲ್ಲಲ್ಲಿ ಸ್ಮರಿಸಿಕೊಂಡಿದ್ದಾನೆ. ಈತನಿಗೆ ಇದ್ದ ಖ್ವಾಜಸರಾಯ್ ಎಂಬ ಬಿರುದು ಈತನು ಹರಮ್ ಅಥವಾ ಸೆರಾಯ್ ಎಂದು ಕರೆಯಲ್ಪಡುತ್ತಿದ್ದ ಅರಮನೆಯ ಸ್ತ್ರೀಯರ ನಿವಾಸಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಧಿಕಾರಿ ಎಂದು ಸೂಚಿಸುತ್ತದೆ.

ಫಿರೋಜ್ ಖಾನ್ ಅಕ್ಟೋಬರ್ 7,1647ರಲ್ಲಿ ನಿಧನ ಹೊಂದಿದನು. ಅಂದು ಚಾಲ್ತಿಯಲ್ಲಿದ್ದ ಸಂಪ್ರದಾಯದಂತೆ ಈ ಕುಲೀನ ವ್ಯಕ್ತಿಯು ತಾನು ಬದುಕಿದ್ದಾಗಲೇ ತನ್ನ ಗೋರಿಯನ್ನು  ನಿರ್ಮಿಸಿದ್ದನು. ಅಲ್ಲದೆ ಅದಕ್ಕೆ ತಾಲ್ ಫಿರೋಜ್ ಖಾನ್ ಎಂದು ಹೆಸರಿಟ್ಟಿದ್ದನು.

ಆಗ್ರಾದಿಂದ ಕೆಲವು ಕಿ.ಮೀ. ಗಳಷ್ಟು ದೂರದಲ್ಲಿ, ಗ್ವಾಲಿಯರ್ ರಸ್ತೆಯಲ್ಲಿರುವ ಈ ಕೆಂಪು ಮರಳುಗಲ್ಲಿನ ಸ್ಮಾರಕವು ಎರಡು ಅಂತಸ್ತನ್ನು ಹೊಂದಿದೆ. ಈ ಗೋರಿಯ ದಕ್ಷಿಣ ಭಾಗಕ್ಕೆ ಇರುವ ಕಮಾನಿನಾಕಾರದ ಪ್ರವೇಶ ದ್ವಾರದ ಮೂಲಕ ನೀವು ಒಳ ಪ್ರವೇಶಿಸಬಹುದು.

ಈ ಕುಲೀನ ವ್ಯಕ್ತಿಯ ಸಮಾಧಿಯು 40 ಅಡಿ ಉದ್ದದ ಅಷ್ಟ ಕೋನಾಕೃತಿಯ ಬುನಾದಿಯ ಮೇಲೆ ನೆಲೆಗೊಂಡಿದೆ. ಅರ್ಧ ಚಂದ್ರಾಕೃತಿಯ ಗುಮ್ಮಟದ ಕೆಳಗೆ ನೆಲಮಹಡಿಯಿದೆ. ಈ ಬುನಾದಿಯ ಪಶ್ಚಿಮಕ್ಕೆ ಒಂದು ಸಣ್ನ ಮಸೀದಿಯಿದೆ. ಈ ಗೋರಿಯ ಅಲಂಕಾರವು ಅಕ್ಬರನ ಗೋರಿ ಮತ್ತು ಇತಿಮದ್ - ಉಲ್ - ದೌಲದ ವಿನ್ಯಾಸವನ್ನು ಹೋಲುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu