India
Search
 • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಪಂಚ್ ಮಹಲ್

ಪಂಚ್ ಮಹಲ್, ಆಗ್ರಾ

3

ಪಂಚ್ ಮಹಲ್ ಎಂಬುದು ಒಂದು ಬೇಸಿಗೆ ಅರಮನೆ. ಇದು ಅಕ್ಬರನ ಮೂವರು ಪತ್ನಿಯರಿಗಾಗಿ ಹಾಗು ರಾಜ ಮನೆತನದ ಇನ್ನಿತರ ಸ್ತ್ರೀಯರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಐದು ಅಂತಸ್ತಿನ ಮೊಗಸಾಲೆಯಾಗಿದೆ. ಈ ಕಟ್ಟಡವು ಅಕ್ಬರ್ ಚಕ್ರವರ್ತಿಯ ಪತ್ನಿಯಾದ ಜೋಧಾ ಬಾಯಿಯವರ ಅರಮನೆಗೆ ಸಮೀಪದಲ್ಲಿ ನೆಲೆಗೊಂಡಿದೆ. ಅಲ್ಲದೆ ಈ ಮಹಲ್ ಜೋಧಾಬಾಯಿ ಅರಮನೆಯೊಂದಿಗೆ ಹಾಗು ಅರಸರ ಕೋಣೆಯೊಂದಿಗೆ ಸಂಪರ್ಕದ ಹಾದಿಯನ್ನು ಸಹ ಹೊಂದಿದೆ.

ಪಂಚ್ ಮಹಲನ್ನು ಬಡ್ಗೆರ್ ಅಥವಾ ಗಾಳಿ ಗೋಪುರ ಎಂದು ಸಹ ಕರೆಯುತ್ತಾರೆ. ಏಕೆಂದರೆ ಪರ್ಷಿಯನ್ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡವು ಗಾಳಿ ಸುಲಲಲಿತವಾಗಿ ಹಾದು ಹೋಗುವಂತಹ ರಚನೆಗಳನ್ನು ಹೊಂದಿದೆ. ಏಕೆಂದರೆ ಆಗ್ರಾದಲ್ಲಿ ಬೇಸಿಗೆಯು ಅತ್ಯಂತ ಅಸಹನೀಯವಾಗಿರುವುದರಿಂದಾಗಿ ಇಂತಹ ರಚನೆಗಳು ಅತ್ಯಾವಶ್ಯಕವಾಗಿತ್ತು.

ಈ ಕಟ್ಟಡದಲ್ಲಿ ಎದ್ದು ಕಾಣುವಂತಹ ಅಂಶವೇನೆಂದರೆ, ಇದರ ಪ್ರತಿ ಮಹಡಿಯು ತನ್ನ ಮೇಲೆ ಮೇಲೆ ಹೋದಂತೆ ಹಿಂದಿನದಕ್ಕಿಂತ ಕಿರಿದಾಗುತ್ತ ಸಾಗುತ್ತದೆ. ಹಾಗಾಗಿ ಇದರ ನೆಲ ಮಹಡಿಯು 130 ಅಡಿ ಉದ್ದ  ಮತ್ತು 40 ಅಡಿ ಅಗಲವಿದ್ದರೆ, ಐದನೇ ಮಹಡಿಯು 10 ಅಡಿ ಉದ್ದ ಮತ್ತು 10 ಅಡಿ ಅಗಲವಿದೆ. ಜೊತೆಗೆ ಇಲ್ಲಿ ಗುಮ್ಮಟವನ್ನು ಹೊಂದಿರುವ ಚೌಕಾಕಾರದ ಛಾತ್ರಿಯಿದೆ.

ಪ್ರತಿ ಮಹಡಿಯು ಸುಂದರವಾಗಿ ಕೆತ್ತಲ್ಪಟ್ಟಿರುವ ಸ್ತಂಭಗಳ ಮೇಲೆ ನಿಂತಿವೆ. ಜೊತೆಗೆ ಎಲ್ಲಾ ಮಹಡಿಗಳು ತೆರೆದ ಹಜಾರಗಳನ್ನು ಹೊಂದಿದೆ. ಇದು ಗಾಳಿ ಬೀಸಲು ಯಾವುದೇ ತಡೆ ಇಲ್ಲದಂತೆ ಮಾಡಲು ಬಳಸಲಾದ ತಂತ್ರವಾಗಿದೆ. ಇಲ್ಲಿನ ನೆಲ ಮಹಡಿಯನ್ನು ನೌಕರ ವರ್ಗದವರಿಗಾಗಿ ಮೀಸಲಾಗಿಡಲಾಗಿತ್ತು.

One Way
Return
From (Departure City)
To (Destination City)
Depart On
17 Aug,Wed
Return On
18 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Aug,Wed
Check Out
18 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Aug,Wed
Return On
18 Aug,Thu