ಹನುಮಾನ್ ಚಟ್ಟಿ, ಯಮುನೋತ್ರಿ

ಹನುಮಾನ್ ಚಟ್ಟಿಯು, ಹನುಮಾನ್ ಗಂಗಾ ಮತ್ತು ಯಮುನಾ ನದಿಗಳ ಸಂಗಮ ಸ್ಥಾನದಲ್ಲಿದ್ದು, ಸಮುದ್ರ ಮಟ್ಟದಿಂದ 2400 ಮೀಟರ್ ಎತ್ತರದಲ್ಲಿದೆ. ಹಿಂದೆ, ಈ ಸ್ಥಳವು ಯಮುನೋತ್ರಿಗೆ ತೆರಳುವ ಹಿಂದೂ ಯಾತ್ರಿಕರ ಚಾರಣದ ಆರಂಭಿಕ ಸ್ಥಳವಾಗಿತ್ತು. ಇಲ್ಲಿಂದ ಯಮುನೋತ್ರಿಯು ಸುಮಾರು 13 ಕಿಮೀ ದೂರದಲ್ಲಿದೆ. ಈಗ ಹನುಮಾನ್ ಚಟ್ಟಿ ಮತ್ತು ಜಂಕಿ ಚಟ್ಟಿಯ ನಡುವೆ ವಾಹನ ನಡೆಸಲು ಅನುಕೂಲವಾಗುವಂತಹ ಒಂದು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಈ ಸ್ಥಳದಲ್ಲಿ ಔಷಧಿಗಳು ಮತ್ತು ರೈನ್ಕೋಟ್ಗಳನ್ನು ಖರೀದಿಸಬಹುದು. ಮುಖ್ಯವಾಗಿ ಯಮುನೋತ್ರಿಗೆ ಹೋಲಿಸಿದರೆ ಹನುಮಾನ್ ಚಟ್ಟಿಯಲ್ಲೇ ಹೆಚ್ಚು ವಸತಿ ಸೌಲಭ್ಯಗಳನ್ನು ಕಾಣಬಹುದು.

Please Wait while comments are loading...