ತಲುಪುವ ಬಗೆ

ಪ್ರಯಾಣಿಕರನ್ನು ಯಮುನೋತ್ರಿಗೆ ಕೊಂಡೊಯ್ಯಲು ಹನುಮಾನ್ ಚಟ್ಟಿ ಹಾಗೂ ಇತರ ಸನಿಹದ ಸ್ಥಳಗಳಿಂದ ಬಸ್ ಸೇವೆಗಳಿವೆ. ಡೆಹ್ರಾಡೂನ್, ತೆಹ್ರಿ, ಉತ್ತರಕಾಶಿ ಮತ್ತು ರಿಷಿಕೇಶ್ ನಂತಹ ಪ್ರಮುಖ ನಗರಗಳಿಂದ ಹನುಮಾನ್ ಚಟ್ಟಿಯವರೆಗೆ ಮಾತ್ರ ಬಸ್ ಗಳಿದ್ದು ಮುಂದೆ ಟ್ಯಾಕ್ಸಿ ಸೇವೆಗಳನ್ನು ಪಡೆಯಬಹುದು. ಮೇಲಾಗಿ, ಪ್ರಯಾಣಿಕರು ದೆಹೆಲಿಯ ಕಶ್ಮಿರಿ ಗೇಟ್ ಬಸ್ ಟರ್ಮಿನಲ್ ನಿಂದ ರಿಷಿಕೇಶ್ ಗೆ ಬಸ್ ಸೇವೆಗಳನ್ನು ಪಡೆಯಬಹುದು. ನಂತರ, ಹನುಮಾನ್ ಚಟ್ಟಿಗೆ ಬಸ್ ತೆಗೆದುಕೊಳ್ಳಬಹುದು. ಇಲ್ಲಿಂದ ಪ್ರವಾಸಿಗರು 14 ಕಿಮೀ ದೂರ ಚಾರಣ ಕೈಗೊಂಡು ಯಮುನೋತ್ರಿ ತಲುಪಬಹುದು.