ಯಮುನೋತ್ರಿ ಹವಾಮಾನ

ಮೇ, ಜೂನ್, ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳ ಹವಾಮಾನ ಸಾಕಷ್ಟು ಆಹ್ಲಾದಕರವಾಗಿರುತ್ತದೆ. ಈ ಸಮಯವನ್ನು ಸ್ಥಳದ ಭೇಟಿಗೆ ಸೂಕ್ತವೆಂದು  ಪರಿಗಣಿಸಲಾಗುತ್ತದೆ.

ಬೇಸಿಗೆಗಾಲ

(ಏಪ್ರಿಲ್-ಜುಲೈ): ಯಮುನೋತ್ರಿಯಲ್ಲಿ, ಏಪ್ರಿಲ್ ತಿಂಗಳಿನಿಂದ ಜುಲೈ ತನಕ ವ್ಯಾಪಿಸಲ್ಪಡುವ ಬೇಸಿಗೆ ಸಮಯದಲ್ಲಿ ದಾಖಲಾದ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶವು ಕ್ರಮವಾಗಿ 6°C  ಮತ್ತು 20°C. ಮೇ ಮತ್ತು ಜೂನ್ ಗಳು ಬೆಚ್ಚಗಿನ ದಿನಗಳಾಗಿರುತ್ತವೆ.

ಮಳೆಗಾಲ

(ಜೂನ್-ಆಗಸ್ಟ್): ಮಳೆಗಾಲವು ಯಮುನೋತ್ರಿಯಲ್ಲಿ ಜೂನ್ ತಿಂಗಳಲ್ಲಿ ಆರಂಭಗೊಂಡು ಆಗಸ್ಟ್ ತನಕ ಮುಂದುವರೆಯುತ್ತದೆ. ಈ ಅವಧಿಯಲ್ಲಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತದೆ.

ಚಳಿಗಾಲ

(ಅಕ್ಟೋಬರ್-ಮಾರ್ಚ್ ): ಚಳಿಗಾಲವು ಅಕ್ಟೋಬರ್ ಮತ್ತು ಮಾರ್ಚ್ ಗಳ ನಡುವೆ ವಿಸ್ತರಿಸುತ್ತಿದ್ದು, ಈ ಸಮಯದಲ್ಲಿ, ಭಾರಿ ಮಳೆ ಬೀಳುವ ಮತ್ತು ತಾಪಮಾನ ಉಪ ಶೂನ್ಯ ಮಟ್ಟಕ್ಕಿಂತ ಕೆಳಗೆ ಇಳಿಯುವ ಸಾಧ್ಯತೆ ಇದೆ. ಡಿಸೆಂಬರ್ ಮತ್ತು ಜನವರಿ ತಿಂಗಳುಗಳು  ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಲ್ಲ.