ಮೌಂಟ್ ಟೊಟ್ಸು ವನ್ನು ನಿಮ್ಮ ವೊಖಾ ಭೇಟಿಯ ವೇಳೆ ನೋಡಲು ಮರೆಯದಿರಿ. ಇದು ಸಮುದ್ರ ಮಟ್ಟದಿಂದ ಸುಮಾರು 1250 ಮೀಟರ್ ಎತ್ತರದಲ್ಲಿ ಇದೆ. ಹಾಗೂ ಇಲ್ಲಿ ನಿಂತು ಕೆಳಗಿನ ಕಣಿವೆಗಳನ್ನು ನೋಡುವ ಮಜವೇ ಹೇಳತೀರದು. ಇಲ್ಲಿನ ಜನಗಳ ನಂಬಿಕೆಯ ಪ್ರಕಾರ ಈ ಬೆಟ್ಟವನ್ನು ಒಂದು ದೊಡ್ಡ ಹಾವು ಮತ್ತು ಏಡಿ ರಕ್ಷಿಸುತ್ತದೆ. ಇದು ವೊಖಾದಿಂದ 25 ಕಿ.ಮೀ ದೂರದಲ್ಲಿದೆ.
ಇದು ಬಂಡೆಕಲ್ಲು ಏರುವ ಸಾಹಸಿ ಪ್ರವೃತ್ತಿ ಇರುವವರಿಗೆ ಅತ್ಯಂತ ಇಷ್ಟದ ಸ್ಥಳವಾಗಿದೆ. ಇಲ್ಲಿ ಪ್ರವಾಸಿ ಇಲಾಖೆಯಿಂದ ಬೆಟ್ಟದ ಬುಡದಲ್ಲಿ ಬೇಸ್ ಕ್ಯಾಂಪ್ ಅನ್ನು ಇದೇ ಕಾರಣಕ್ಕಾಗಿ ನಿರ್ಮಿಸಲಾಗಿದೆ. ಇಲ್ಲೇ ಬೆಟ್ಟದ ಬುಡದಲ್ಲಿ ಕೆಲವು ಸಣ್ಣ ಸರೋವರಗಳು ಮತ್ತು ನೀರಿನ ತೊರೆಗಳಿದ್ದು ಇವು ಸೌಂದರ್ಯವನ್ನು ಹೆಚ್ಚಿಸುತ್ತವೆ. ಇವುಗಳಲ್ಲಿ ಒಂದು ನಾಗಾ ಜನರ ಪ್ರಸಿದ್ಧ ವ್ಯಕ್ತಿ ಸಾಂತ್ ಬರ್ಗ್ ನ ಸ್ಥಳವಾಗಿದೆ ಈತ ಇಲ್ಲಿನ ಸರೋವರದ ಸ್ತ್ರೀ ಶಕ್ತಿಯನ್ನು ವರಿಸಿದ್ದ ಎಂಬ ನಂಬಿಕೆ ಇದೆ.


Click it and Unblock the Notifications