ತೋಖು ಎಮಾಂಗ್ ಉತ್ಸವವು ವೊಖಾದ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಒಂಬತ್ತು ದಿನಗಳ ಕಟಾವು ಆದ ಬಳಿಕದ ದಿನಗಳನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತಮ್ಮ ಇಷ್ಟು ದಿನಗಳ ಕೆಲಸವನ್ನು ತಾವು ಬೆಳೆದ ಬೆಳೆಗಳು ಫಲ ಕೊಡುವ ದಿನದಂದು ಹಬ್ಬವಾಗಿ ಆಚರಿಸುವ ಮೂಲಕ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಪುರುಷ ಮತ್ತು ಮಹಿಳೆಯರು ಬಣ್ಣ ಬಣ್ಣದ ಉಡುಪುಗಳಲ್ಲಿ ಬಂದು ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿ ಈ ಜನರ ನಡುವೆ ಭಾತೃತ್ವ ಭಾವವನ್ನು ಈ ಸಮಯದಲ್ಲಿ ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ಅವಧಿಯಲ್ಲಿ ಎಲ್ಲಾ ಜನಗಳು ಒಬ್ಬರು ಇನ್ನೊಬ್ಬರನ್ನು ಗೌರವ ಭಾವದಿಂದ ಕಾಣುತ್ತಾರೆ.
ನೀವು ನಾಗಾ ಸಂಪ್ರದಾಯವನ್ನು ಸಂಸ್ಕೃತಿಯನ್ನು ಬಹಳ ಹತ್ತಿರದಿಂದ ನೋಡಬೇಕಾದರೆ ಈ ಉತ್ಸವವು ಬಹಳ ಸೂಕ್ತವಾದ ಅವಧಿಯಾಗಿದೆ. ಈ ಉತ್ಸವವನ್ನು ನವೆಂಬರ್ ತಿಂಗಳ ಮೊದಲ ವಾರದಲ್ಲಿ ಆಚರಿಸುತ್ತಾರೆ. ಹಾಗೂ ಇಲ್ಲಿ ಬಂದ ಎಲ್ಲಾ ಜನರನ್ನು ಇಲ್ಲಿನ ಸಾಂಪ್ರದಾಯಿಕ ನೃತ್ಯ ಮತ್ತು ಹಾಡುಗಳ ಮೂಲಕ ಸ್ವಾಗತಿಸಲಾಗುತ್ತದೆ. ಇಲ್ಲಿನ ಮಾಂಸಾಹಾರದ ಸವಿಯನ್ನು ನೀವು ಸವಿಯದೇ ಹಿಂತಿರುಗದಿರಿ.