Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ಸಸತ್‍ಗ್ರೆ ಹಳ್ಳಿ

ಸಸತ್‍ಗ್ರೆ ಹಳ್ಳಿ, ವೆಸ್ಟ್ ಗಾರೊ ಹಿಲ್ಸ್

1

ಸಸತ್‍ಗ್ರೆ ಹಳ್ಳಿಯು ಮೇಘಾಲಯದ ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ನೊಕ್ರೆಕ್ ಶೃಂಗದ ತಪ್ಪಲಿನಲ್ಲಿ ನೆಲೆಗೊಂಡಿದೆ. ಈ ಸುಂದರವಾದ ಪುಟ್ಟ ಹಳ್ಳಿಯು ಗರೊ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಹಲವಾರು ಮನೆಗಳನ್ನು ಹೊಂದಿದೆ. ಈ ಮನೆಗಳು ಸಧೃಡವಾಗಿ, ವಿಶಾಲವಾಗಿ ಮತ್ತು ಗಾಳಿ ಬೆಳಕು ಉತ್ತಮವಾಗಿ ಬರುವಂತೆ ವ್ಯವಸ್ಥೆಗೊಂಡಿವೆ.

ಈ ಹಳ್ಳಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಗರೊ ಸಂಪ್ರದಾಯಗಳ ಕುರಿತಾಗಿ ಆಳವಾಗಿ ತಿಳಿದುಕೊಳ್ಳಬಹುದು. ಏಕೆಂದರೆ ಸಸತ್‍ಗ್ರೆ ಹಳ್ಳಿಯ ಜನರು ತಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಗಳ ಜೊತೆ ನಿಕಟ ಸಂಬಂಧವನ್ನು ಇಂದಿಗು ಬೆಸೆದುಕೊಂಡಿದ್ದಾರೆ.

ಸಸತ್‍ಗ್ರೆ ಹಳ್ಳಿಯು ಪ್ರತಿ ವರ್ಷ ಇಲ್ಲಿ ಉತ್ಪಾದನೆಯಾಗುವ ಶ್ರೇಷ್ಠ ದರ್ಜೆಯ ಕಿತ್ತಳೆ ಹಣ್ಣುಗಳಿಗೆ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಹಲವಾರು ಕಿತ್ತಳೆ ಹಣ್ಣಿನ ತೋಟಗಳಿವೆ. ಇಡೀ ಊರು ಕಡು ಹಸಿರು ಬಣ್ಣದ ಕಿತ್ತಳೆ ಹಣ್ಣಿನ ಮರಗಳಿಂದ ಆವೃತಗೊಂಡಿದೆ. ಸಸತ್‍ಗ್ರೆ ಹಳ್ಳಿಯ ಕಿತ್ತಳೆಗಳನ್ನು ಹಣ್ಣಿನ ಪ್ರಿಯರು ಬಹುವಾಗಿ ಇಷ್ಟ ಪಡುತ್ತಾರೆ. ಇವುಗಳು ರುಚಿಯಾಗಿ, ರಸಪೂರಿತವಾಗಿರುವುದರ ಜೊತೆಗೆ ಆರೋಗ್ಯಕರವು ಆಗಿರುವುದು ಇದಕ್ಕೆ ಕಾರಣವಾಗಿದೆ. ಈ ಹಳ್ಳಿಯು ನೊಕ್ರೆಕ್ ವನ್ಯಧಾಮದ ಪಕ್ಕದಲ್ಲಿಯೇ ನೆಲೆಗೊಂಡಿದೆ. ಪ್ರವಾಸಿಗರು ಟುರ- ವಿಲಿಯಂನಗರ್ ಹೆದ್ದಾರಿಯಲ್ಲಿರುವ ಒರಗಿಟೊಕ್ ಹಳ್ಳಿಯ ಕಚ್ಛಾ ರಸ್ತೆಯ ಮೂಲಕ ಸಸತ್‍ಗ್ರೆ ಹಳ್ಳಿಯನ್ನು ತಲುಪಬಹುದು.

One Way
Return
From (Departure City)
To (Destination City)
Depart On
18 Aug,Tue
Return On
19 Aug,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Aug,Tue
Check Out
19 Aug,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Aug,Tue
Return On
19 Aug,Wed