ರೊಂಗ್‍ಬಂಗ್ ಎಂಬುದು ಚೀನಬಟ್ ಗ್ರಾಮದಲ್ಲಿ ನೆಲೆಗೊಂಡಿರುವ ನಯನ ಮನೋಹರವಾದ ಜಲಪಾತವಾಗಿದೆ. ಇದು ಟುರ-ಅಸನಂಗ್ರೆ- ವಿಲಿಯಂನಗರ್ ರಾಜ್ಯ ಹೆದ್ದಾರಿಯ ಬಲಕ್ಕೆ ಕಂಡು ಬರುತ್ತದೆ. ಈ ಸುಂದರವಾದ ಜಲಪಾತವನ್ನು ನೋಡಲು ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತವು ಹಿಮದಷ್ಟು ಬೆಳ್ಳಗೆ ಕಾಣುತ್ತ ಧುಮ್ಮಿಕ್ಕುತ್ತದೆ. ಆಗ ಇದರ ಸೌಂದರ್ಯವು ಮತ್ತಷ್ಟು ಇಮ್ಮಡಿಗೊಂಡಿರುತ್ತದೆ.
ರೊಂಗ್‍ಬಂಗ್ ಡೆರ್ ಅಕ್ಕ ಪಕ್ಕದಲ್ಲಿ ನಿತ್ಯ ಹರಿದ್ವರ್ಣ ಕಾಡುಗಳ ಬಿದಿರುಗಳು ಬೆಳೆದಿದ್ದು, ಜಲಪಾತಕ್ಕೆ ತನ್ನದೇ ಆದ ಸೌಂದರ್ಯವನ್ನು ಒದಗಿಸಿದೆ. ಈ ಪ್ರದೇಶದ ಮೂಲಕ ಹಾದು ಹೋಗುವ ಯಾರೇ ಆಗಲಿ ಈ ಜಲಪಾತವನ್ನು ನೋಡಿ ಹೋಗುವುದು ಉತ್ತಮ. ಇದು ನೋಡುಗರಿಗೆ ಒಂದು ಬಗೆಯ ಆಹ್ಲಾದಕತೆಯನ್ನು ಒದಗಿಸುತ್ತದೆ.
ಇಲ್ಲಿ ಉಳಿದುಕೊಳ್ಳಲು ಬಯಸುವ ಪ್ರವಾಸಿಗರಿಗೆ ಟುರದಲ್ಲಿ ಹಲವಾರು ಹೋಟೆಲ್‍ಗಳು ಮತ್ತು ಅತಿಥಿ ಗೃಹಗಳು ಲಭ್ಯವಿದೆ. ಇವುಗಳಲ್ಲಿ ಉತ್ತಮ ದರ್ಜೆಯ ಲಾಡ್ಜಿಂಗ್ ಮತ್ತು ಊಟದ ವ್ಯವಸ್ಥೆಗಳು ಲಭ್ಯವಿವೆ. ಸ್ಥಳೀಯ ಕ್ಯಾಬ್‍ಗಳ ಮೂಲಕ ನೀವು ರೊಂಗ್‍ಬಂಗ್‍ನಿಂದ ಟುರಗೆ ತಲುಪಬಹುದು.


Click it and Unblock the Notifications