Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ಹಜ್ರತ್ ಶಾ ಕಮಲ್ ಬಾಬಾರವರ ದರ್ಗಾ

ಹಜ್ರತ್ ಶಾ ಕಮಲ್ ಬಾಬಾರವರ ದರ್ಗಾ, ವೆಸ್ಟ್ ಗಾರೊ ಹಿಲ್ಸ್

1

ಹಜ್ರತ್ ಶಾ ಕಮಲ್ ಬಾಬಾರವರ ದರ್ಗಾವು ಟುರದಿಂದ 80 ಕಿ.ಮೀ ದೂರದಲ್ಲಿ , ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ನೆಲೆಗೊಂಡಿದೆ. ಇದು ರಾಜಾ ಮಹೇನ್‍ನಾರಯಣರವರ ಆಳ್ವಿಕೆಯ ಕಾಲದಲ್ಲಿ ಅಂದರೆ 16ನೆಯ ಶತಮಾನದಲ್ಲಿ ನೆಲೆಗೊಂಡಿತು. ನಂಬಿಕೆಗಳ ಪ್ರಕಾರ ಈ ದರ್ಗಾವನ್ನು ಕೇವಲ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಲಾಯಿತಂತೆ. ಈ ಸ್ಥಳವನ್ನು ಪೀರ್ ಸ್ಥಾನ ಎಂದು ಸಹ ಕರೆಯುತ್ತಾರೆ.

ದಂತೆ ಕಥೆಗಳ ಪ್ರಕಾರ ರಾಜನ ಆಳ್ವಿಕೆಯ ಅವಧಿಯಲ್ಲಿ ಈ ಸ್ಥಳವನ್ನು ಒಂದು ಭೂತವು ತನ್ನ ವಶಕ್ಕೆ ತೆಗೆದುಕೊಂಡು ಎಲ್ಲಾ ಮನುಷ್ಯರನ್ನು ಕೊಲ್ಲುವ ಬೆದರಿಕೆಯನ್ನು ಒಡ್ಡಿತಂತೆ. ಆಗ ಇಲ್ಲಿಗೆ ಭೇಟಿ ನೀಡಿದ ಶಾ ಕಮಲ್ ಬಾಬಾರವರು ಈ ಭೂತವನ್ನು ಉಚ್ಛಾಟಿಸಿದರಂತೆ.

ಈ ದರ್ಗಾದಲ್ಲಿ ಪ್ರತಿ ವರ್ಷವು ವಾರ್ಷಿಕವಾಗಿ "ಉರುಸ್" ನಡೆಯುತ್ತದೆ. ನಮ್ಮ ದೇಶ ವಿಭಜನೆಯಾಗುವ ಮೊದಲು ಇದು ಇಲ್ಲಿ ಸಂಪ್ರದಾಯವಾಗಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಈ ದರ್ಗಾಕ್ಕೆ ಹತ್ತಿರದಿಂದ ಮತ್ತು ದೂರದ ಊರುಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಪೀರ್ ಬಾಬಾರವರ ಆಶೀರ್ವಾದವನ್ನು ಕೋರಿ ಆಗಮಿಸುವ ಭಕ್ತರು ಬರಿಗೈನಲ್ಲಿ ಹೋಗಿದ್ದು, ಇದುವರೆಗೂ ಇತಿಹಾಸದಲ್ಲಿ ದಾಖಲಾಗಿಲ್ಲ ಎಂದರೆ ಈ ದರ್ಗಾದ ಮಹಿಮೆಯ ಕುರಿತು ನೀವೇ ಊಹಿಸಬಹುದು.

ಸಾಂಪ್ರದಾಯಿಕ ಮೊಘಲ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ದರ್ಗಾವು ಅತ್ಯಂತ ಪ್ರಶಾಂತವಾದ ಪರಿಸರದಲ್ಲಿ ನೆಲೆಗೊಂಡಿದೆ. ಈ ಕಟ್ಟಡವನ್ನು ಮೇಘಾಲಯ ವಕ್ಫ್ ಮಂಡಳಿಯವರು 2008-09ರಲ್ಲಿ ನವೀಕರಣ ಮಾಡಿದರು. ಪೀರ್ ಸ್ಥಾನ್‍ವು ತನ್ನ ದೈವಿಕ ಅನುಭವ ಮತ್ತು ಶಾಂತಿಗಾಗಿ ಖ್ಯಾತಿ ಪಡೆದಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu