ಭೈಟ್‍ಬರಿ ಎಂಬುದು ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಜಿಂಗ್‍ಜಿರಮ್ ಎಂಬ ನದಿಯ ದಂಡೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಭೈಟ್‍ಬರಿಯು 1991-92 ರಲ್ಲಿ ಈ ಹಳ್ಳಿಯಲ್ಲಿ ನಡೆದ ಉತ್ಖನನದಿಂದಾಗಿ ಭಾರೀ ಪ್ರಸಿದ್ಧಿಯನ್ನು ಪಡೆಯಿತು. ಈ ಉತ್ಖನನವು ಅತ್ಯಂತ ಕುತೂಹಲಕರವಾದ ವಿಚಾರಗಳನ್ನು ಹೊರಗೆಡಹಿತು. ಜಿಂಗ್‍ರಮ್ ನದಿಯಿಂದ ಐದು ಕಿ.ಮೀ ದೂರದಲ್ಲಿ ಉತ್ತರ ಮತ್ತು ದಕ್ಷಿಣಾಭಿಮುಖವಾಗಿ ಬಿದ್ದಿರುವ ಕುದುರೆ ಲಾಳಾಕಾರದ ಮಣ್ಣಿನ ಮತ್ತು ಜಂಬಿಟ್ಟಿಗೆ ಮಣ್ಣಿನ ಇಟ್ಟಿಗೆಗಳು ಇಲ್ಲಿನ ಉತ್ಖನನದಲ್ಲಿ ಹೊರಬಿದ್ದಿವೆ.
ಇದರ ಜೊತೆಗೆ ಈ ಉತ್ಖನನದಲ್ಲಿ ಸುಟ್ಟ ಇಟ್ಟಿಗೆಯಿಂದ ನಿರ್ಮಿಸಿದ ಒಂದು ದೇವಾಲಯವು ಸಹ ಹೊರ ಪ್ರಪಂಚಕ್ಕೆ ಪರಿಚಯವಾಯಿತು. ಮೂರನೆಯ ಅತ್ಯಂತ ಪ್ರಮುಖ ಅಂಶವೆಂದರೆ ಎಂಟಟು ಪುಟ್ಟ ಶಿವಲಿಂಗಗಳ ಪ್ರತಿಕೃತಿಯನ್ನು ಹೊಂದಿರುವ ಅಷ್ಟಭುಜಾಕೃತಿಯ ದೇವಾಲಯ ಇಲ್ಲಿನ ಉತ್ಖನನದಲ್ಲಿ ಕಂಡು ಬಂದಿತು. ನಾಲ್ಕನೆಯದಾಗಿ ಬೌದ್ಧ ಧರ್ಮದವರ ಒಂದು ಸ್ತೂಪ ಇಲ್ಲಿ ಕಂಡು ಬಂದಿತು. ಆದಾಗಿಯೂ ಈ ಐತಿಹಾಸಿಕ ತಾಣದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನೂ ಹೊರಬಂದಿಲ್ಲ. ಭೈಟ್‍ಬರಿಯು ಪುಲ್‍ಬರಿಯಿಂದ ಮೂರು ಮೈಲುಗಳ ದೂರದಲ್ಲಿ ಟುರ ರಸ್ತೆಯಲ್ಲಿ ನೆಲೆಗೊಂಡಿದೆ. ಟುರದಿಂದ ಕ್ಯಾಬ್ ಅನ್ನು ಬುಕ್ ಮಾಡಿಕೊಂಡು ಇಲ್ಲಿಗೆ ತಲುಪಬಹುದು.


Click it and Unblock the Notifications