Search
  • Follow NativePlanet
Share
» »ಲಕ್ನೋದಿಂದ ವಾರಾಂತ್ಯದ ರಜಾ ದಿನಗಳಲ್ಲಿ ಭೇಟಿ ಕೊಡಬಹುದಾದ ತಾಣಗಳು

ಲಕ್ನೋದಿಂದ ವಾರಾಂತ್ಯದ ರಜಾ ದಿನಗಳಲ್ಲಿ ಭೇಟಿ ಕೊಡಬಹುದಾದ ತಾಣಗಳು

ನೀವು ಲಕ್ನೋ ಪ್ರವಾಸದಲ್ಲಿರುವಿರಾ? ಹಾಗಿದ್ದಲ್ಲಿ ಈ ತಾಣಗಳಿಗೂ ಪ್ರವಾಸ ಆಯೋಜಿಸಿ

ಉತ್ತರಪ್ರದೇಶವು ಪ್ರವಾಸಿ ತಾಣಗಳನ್ನು ಒಳಗೊಂಡ ಪ್ರಮುಖ ರಾಜ್ಯವಾಗಿದೆ. ಇದು ಸುಂದರವಾದ ತಾಣಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವು ಸ್ಥಳಗಳು ನೈಸರ್ಗಿಕವಾಗಿ ಸುಂದರವಾಗಿದ್ದರೆ ಇನ್ನು ಕೆಲವು ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡಿವೆ. ನವಾಬರ ನಗರವೆನಿಸಿರುವ ಲಕ್ನೊ ಸ್ಥಳೀಯ ಮತ್ತು ಪ್ರವಾಸಿಗರನ್ನು ಕೈಬೀಸಿ ಆದರದ ಸ್ವಾಗತ ನೀಡುತ್ತದೆ.

ಲಕ್ನೋ ನಗರವು ತನ್ನ ಜನದಟ್ಟಣೆಯಿಂದ ಮತ್ತು ದೃಶ್ಯಗಳಿಂದ ಪ್ರವಾಸಿಗರನ್ನು ಬ್ಯುಸಿಯಾಗಿರಿಸಿದರೂ ಕೂಡಾ ಇಲ್ಲಿ ಹಲವಾರು ನೋಡಲೇಬೇಕಾದಂತಹ ನೈಸರ್ಗಿಕ ಮತ್ತು ಐತಿಹಾಸಿಕ ತಾಣಗಳು ಇಲ್ಲಿಗೆ ಹತ್ತಿರದಲ್ಲಿದೆ. ಇವುಗಳಲ್ಲಿ ಹಲವಾರು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದವುಗಳಾಗಿವೆ. ಇಲ್ಲಿ ಸರೋವರಗಳಿಂದ ರಾಷ್ಟ್ರೀಯ ಉದ್ಯಾನವನಗಳಿಂದ ಪ್ರಾಚೀನ ನಗರಗಳವರೆಗೆ ಎಲ್ಲವನನ್ನೂ ಹೊಂದಿದ್ದು, ವಾರಾಂತ್ಯದಲ್ಲಿ ಲಕ್ನೋಯಿಂದ ಭೇಟಿ ಕೊಡಬಹುದಾದ ಹಲವಾರು ತಾಣಗಳಿವೆ.

ವಾರಾಣಾಸಿ

ವಾರಾಣಾಸಿ

ಬನಾರಸ್ ಮತ್ತು ಕಾಶಿ ಎಂದು ಕರೆಯಲ್ಪಡುವ ಮತ್ತು ಮತ್ತು ಪ್ರಪಂಚದ ಅತ್ಯಂತ ಹಳೆಯ ನಾಗರಿಕತೆ ಎಂದು ಪರಿಗಣಿಸಲ್ಪಟ್ಟ ವಾರಣಾಸಿಯು ಉತ್ತರ ಪ್ರದೇಶದ ಪ್ರಮುಖ ವಾರಾಂತ್ಯದ ವಿಹಾರ ಸ್ಥಳಗಳಲ್ಲಿ ಒಂದಾಗಿದೆ. ಏಳು ಪವಿತ್ರ ನಗರಗಳ ಒಂದು ಭಾಗವಾಗಿರುವ ವಾರಣಾಸಿಯು ನಿಸ್ಸಂದೇಹವಾಗಿಯೂ ಭಾರತದ ಆಧ್ಯಾತ್ಮಿಕ ಕೇಂದ್ರವಾಗಿದೆ. ಪವಿತ್ರ ನಗರದ ಪ್ರತಿಯೊಂದು ತಿರುವಿನಲ್ಲಿಯೂ ನೀವು ಹಿಂದೂ ದೇವಾಲಯಗಳನ್ನು ನೋಡುವಿರಿ! ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿರುವ ಹಳೆಯದಾದ, 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಾಲಯವು ಎಲ್ಲಕ್ಕಿಂತ ಹೆಚ್ಚು ಜನರು ಭೇಟಿ ನೀಡುತ್ತಾರೆ.

ಇದಲ್ಲದೆ, ವಾರಣಾಸಿಯಲ್ಲಿ ಸತ್ತರೆ ಮಂಗಳಕರ ಸ್ಥಳವೆಂದು ನಂಬಲಾಗಿದೆ, ಏಕೆಂದರೆ ಇದು ಜೀವನ ಮತ್ತು ಸಾವಿನ ಚಕ್ರದಿಂದ ಮೋಕ್ಷ ಅಥವಾ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಪವಿತ್ರ ಗಂಗೆಯ ದಡದಲ್ಲಿ ಸುಮಾರು 80 ಘಾಟ್‌ಗಳಿವೆ.ವಾರಣಾಸಿಯಲ್ಲಿರುವ ಸ್ಮಾರಕಗಳ ಭವ್ಯತೆ ಮತ್ತು ಆಧ್ಯಾತ್ಮಿಕ ಜ್ಞಾನೋದಯದ ಸಂಪ್ರದಾಯ - ಗಂಗಾ ಆರತಿ ಇತ್ಯಾದಿಗಳನ್ನು ಇಲ್ಲಿ ಅನುಭವಿಸಲೇಬೇಕು.

ಫ಼ತೇಪುರ್ ಸಿಕ್ರಿ

ಫ಼ತೇಪುರ್ ಸಿಕ್ರಿ

ಮೊಘಲ್ ಆಳ್ವಿಕೆಯ ಪ್ರಮುಖ ಕೇಂದ್ರವಾದ ಫತೇಪುರ್ ಸಿಕ್ರಿಯು ಆಗ್ರಾದಿಂದ ಸುಮಾರು 42 ಕಿಮೀ ದೂರದಲ್ಲಿದೆ. ಫತೇಪುರ್ ಸಿಕ್ರಿಯು ಇಂದಿಗೂ ಕೂಡಾ ಭಾರತದಲ್ಲಿ ಮೊಘಲರ ಆಳ್ವಿಕೆಯ ಅತ್ಯಂತ ಅಮೂಲ್ಯವಾದ ಅವಶೇಷಗಳಲ್ಲಿ ಒಂದಾಗಿದೆ. ಇದನ್ನು ಇಂದು ವಿಶ್ವ ಪರಂಪರೆಯ ರಚನೆಗಳ ಪಟ್ಟಿಯಲ್ಲಿ ಮಹತ್ವದ ರಚನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಫತೇಪುರ್ ಸಿಕ್ರಿಯು ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ ಸ್ಥಳವಾಗಿದೆ.

ಮಥುರಾ

ಮಥುರಾ

ಕೃಷ್ಣ ದೇವರ ಜನ್ಮಸ್ಥಳವೆಂದು ಹೇಳಲಾಗುವ ಮಥುರಾ ಹಿಂದುಗಳ ಏಳು ಪವಿತ್ರ ನಗರಗಳಲ್ಲಿ ಒಂದಾಗಿದೆ ಮತ್ತು ಇದು ದೇಶದಾದ್ಯಂತದಅಸಂಖ್ಯಾತ ಸಂಖ್ಯೆಯಲ್ಲಿ ಭಕ್ತರನ್ನು ತನ್ನತ್ತ ಸೆಳೆಯುತ್ತಾ ಉತ್ತರ ಪ್ರದೇಶದ ಅತ್ಯಂತ ಉತ್ತಮವಾದ ರಜಾ ತಾಣವೆನಿಸುವಂತೆ ಮಾಡಿದೆ . ಮಥುರಾದಲ್ಲಿರುವ ಆಕರ್ಷಣೆಗಳಲ್ಲಿ ಅತ್ಯಂತ ಹೆಚ್ಚು ಆಕರ್ಷಿಸುವ ಪ್ರವಾಸಿ ಆಕರ್ಷಣೆ ಎಂದರೆ ಅದು ಶ್ರೀಕೃಷ್ಣ ಜನ್ಮಭೂಮಿ ಈ ಸ್ಥಳವನ್ನು ಶ್ರೀಕೃಷ್ಣ ದೇವರ ಜನನ ಭೂಮಿ ಎಂದು ಪರಿಗಣಿಸಲಾಗುತ್ತದೆ ಹಾಗೂ ಶ್ರೀಕೃಷ್ಣ ದೇವರು ಜನ್ಮ ತಾಳಿದ ಮಹಾನ್ ಕಾರಾಗ್ರಹ ಇಂದು ಸಂದರ್ಶಕರಿಗೆ ನೋಡಲು ಭೇಟಿ ಕೊಡುವ ಸ್ಥಳವೆನಿಸಿದೆ.

ನಗರದಲ್ಲಿರುವ ಇನ್ನೆರಡು ಮಹತ್ವಪೂರ್ಣವಾದ ದೇವಾಲಯಗಳೆಂಡರೆ ಗೀತಾ ಮಂದಿರ ಮತ್ತು ದ್ವಾರಕಾದೀಶ್ ದೇವಾಲಯ. ಆಹಾರ ಪ್ರೀಯರಿಗಾಗಿಯೂ ಮಥುರಾದ ಬೀದಿಗಳು ಪ್ರಸಿದ್ದವಾಗಿದೆ. ಇಲ್ಲಿಯ ಸ್ಥಳೀಯ ಸ್ನಾಕ್ಸ್ ಗಳಾದ ಆಲೂಪೂರಿ, ಜಿಲೇಬಿಗಳು, ಕಚೋರಿಗಳು, ಚಾಟ್ ಮತ್ತು ಗುಲಾಬ್ ಜಾಮೂನ್ ಇವು ಕೆಲವು ಪ್ರಸಿದ್ದ ತಿನಿಸುಗಳು.

ಅಗ್ರಾ

ಅಗ್ರಾ

ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾಗಿರುವ ಸ್ಮಾರಕಕ್ಕೆ ನೆಲೆಯಾಗಿರುವ ಆಗ್ರಾ ನಗರವು ತನ್ನಲ್ಲಿಯ ವಾಸ್ತುಶಿಲ್ಪ ಸೌಂದರ್ಯಕ್ಕೆ ನಿಮ್ಮನ್ನು ಮೋಡಿ ಮಾಡುತ್ತದೆ. ಆಗ್ರಾದಲ್ಲಿರುವ ಮಾರ್ಬಲ್ ನಿಂದ ಮಾಡಲಾದ ರಚನೆಯಾದ "ತಾಜ್ ಮಹಲ್" ಅದರ ಪರಿಭಾಷೆಯಲ್ಲಿ ಅದ್ಭುತವಾದ ಮಿತಿಯಿಲ್ಲದ ಸೌಂದರ್ಯದಲ್ಲಿ ವರ್ಣಿಸಲಾಗಿದೆ. ಯಮುನಾ ನದಿಯ ದಂಡೆಯ ಮೇಲಿರುವ ತಾಜ್ ಮಹಲ್ ಪ್ರಪಂಚದಾದ್ಯಂತ ಪ್ರೇಮಿಗಳು ಮತ್ತು ಕವಿಗಳನ್ನು ಉತ್ತೇಜಿಸಿದ ಒಂದು ಸ್ಮಾರಕವಾಗಿದೆ.

ಸಾರಾನಾಥ್

ಸಾರಾನಾಥ್

ಸಾರಾನಾಥ್ ಇದನ್ನು ಮ್ರಿಗದವ, ರಿಷಿಪಟ್ಟಣ, ಮಿಗದಯ, ಮತ್ತು ಇಷಿಪಟ್ಟನ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ವಾರಣಾಸಿಯಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.ಗೌತಮ ಬುದ್ಧನು ಜ್ಞಾನೋದಯವನ್ನು ಪಡೆದ ನಂತರ ತನ್ನ ಮೊದಲ ಧರ್ಮೋಪದೇಶವನ್ನು ಬೋಧಿಸಲು ಸಾರನಾಥಕ್ಕೆ ಬಂದನೆಂದು ನಂಬಲಾಗಿದೆ ಮತ್ತು 5 ನೇ - 6 ಬುದ್ಧನು ಧಮೇಕ್ ಸ್ತೂಪದಲ್ಲಿ ತನ್ನ ಮೊದಲ ಧರ್ಮೋಪದೇಶವನ್ನು ಕಲಿಸಿದ ನಿಖರವಾದ ಸ್ಥಳವಾಗಿದೆ. ಆದ್ದರಿಂದ, ಸಾರನಾಥವು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಬೌದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ.

ಬೌದ್ಧ ಮಠಗಳು ಮತ್ತು ಪಗೋಡಗಳ ಜೊತೆಗೆ, ಸಾರನಾಥವು ಪ್ರಸಿದ್ಧ ವಸ್ತುಸಂಗ್ರಹಾಲಯಕ್ಕೆ ನೆಲೆಯಾಗಿದೆ, ಇದು ಬೌದ್ಧ ಕಲೆಯ ಉತ್ತಮ ಸಾಕಾರಗಳ ನಡುವೆ ಪ್ರದರ್ಶಿಸಲಾದ ಬೌದ್ಧ ವಿಗ್ರಹಗಳ ಸಮೃದ್ಧ ಸಂಗ್ರಹವನ್ನು ಪ್ರದರ್ಶಿಸುತ್ತದೆ.

ಅಲಹಾಬಾದ

ಅಲಹಾಬಾದ

ಇತ್ತೀಚೆಗೆ ಪ್ರಯಾಗ್ರ್ ರಾಜ್ ಎಂದೂ ಹೆಸರಿಸಲಾದ ಅಲಬಾದ್, ಭಾರತದ ಪರಂಪರೆ ಹಾಗೂ ಸಂಸ್ಕೃತಿಯನ್ನು ಎಂದಿಗೂ ಕಡೆಗಣಿಸಲಾಗದ ರೀತಿಯಲ್ಲಿ ರೂಪಿಸಲಾದ ನಗರವಾಗಿದೆ ಮತ್ತು ಅದರ ಇತಿಹಾಸವು ಅನಾದಿ ಕಾಲದಿಂದಲೂ ಇದ್ದು, ಅದರ ದೀರ್ಘಕಾಲೀನ ಪರಂಪರೆಗೆ ನಮನವನ್ನು ಸಲ್ಲಿಸಬೇಕು. ಬಹುತೇಕ ಇಡೀ ಅಲಹಾಬಾದ್ ಸ್ಮಾರಕಗಳು ಮತ್ತು ಕಲಾಕೃತಿಗಳಿಂದ ತುಂಬಿದೆ. ಪರಿಣಾಮವಾಗಿ ಅಲಹಾಬಾದ್‌ನ ಸಂಸ್ಕೃತಿಯು ಭಾರತ ಮತ್ತು ಇಲ್ಲಿಯ ಜನರ ಮೇಲೆ ವಹಿಸುವ ಪ್ರಬಲ ಪಾತ್ರಕ್ಕೆ ವಿಶೇಷ ಸ್ಪರ್ಶವನ್ನು ನೀಡುತ್ತದೆ. ಇದು ನಿಸ್ಸಂದೇಹವಾಗಿಯೂ ರಾಜ್ಯದ ಅತ್ಯಂತ ಜನಪ್ರಿಯ ನಗರಗಳಲ್ಲಿ ಒಂದಾಗಿದೆ, ಆದುದರಿಂದ ಅಲಹಾಬಾದ್‌ಗೆ ಅಗತ್ಯವಾಗಿ ಭೇಟಿ ಕೊಡಿ.

ಅಯೋಧ್ಯೆ

ಅಯೋಧ್ಯೆ

ಅಯೋಧ್ಯೆಯನ್ನು ರಾಮದೇವರ ಜನ್ಮ ಭೂಮಿ ಎಂದು ಎಲ್ಲರಿಂದಲೂ ಪೂಜಿಸಲ್ಪಡುತ್ತದೆ. ಇದು ಜಗತ್ತಿನಾದ್ಯಂತದ ಹಿಂದೂ ಭಕ್ತರು ಮತ್ತು ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಹೆಚ್ಚಿನ ಯಾತ್ರಾರ್ಥಿಗಳು ಈ ಪುಣ್ಯಭೂಮಿಗೆ ದೇವರ ಆಶೀರ್ವಾದ ಪಡೆಯಲು ಭೇಟಿ ನೀಡುತ್ತಾರೆ.ಅಯೋಧ್ಯೆಯ ಆಧ್ಯಾತ್ಮಿಕ ಪ್ರಾಮುಖ್ಯತೆಯ ಜೊತೆಗೆ, ಶಾಪಿಂಗ್ ಮತ್ತು ದೃಶ್ಯವೀಕ್ಷಣೆ ಮತ್ತು ಮೋಜು ಮಾಡಲು ಬೇಕಾದ ಹಲವಾರು ವಿಷಯಗಳಿಲ್ಲಿವೆ. ಆದುದರಿಂದ ಇಲ್ಲಿಗೆ ಭೇಟಿ ಕೊಟ್ಟು ನಿಮ್ಮನ್ನು ನೀವು ಉಲ್ಲಾಸಗೊಳಿಸಿಕೊಳ್ಳಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+