Search
  • Follow NativePlanet
Share
ಮುಖಪುಟ » ಸ್ಥಳಗಳು » ವಯನಾಡ್ » ಆಕರ್ಷಣೆಗಳು » ನೀಲಿಮಲ ವೀಕ್ಷಣಾ ಸ್ಥಳ

ನೀಲಿಮಲ ವೀಕ್ಷಣಾ ಸ್ಥಳ, ವಯನಾಡ್

2

ನೀಲಿಮಲ ವೀಕ್ಷಣಾ ಸ್ಥಳವು ವಯನಾಡಿನಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಾಹಸ ಮನೋಭಾವ ಮತ್ತು ಕ್ರೀಡಾ  ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ. ಇದು ಚಾರಣಕ್ಕೆ ಅತ್ಯಂತ ಸೂಕ್ತ ಸ್ಥಳವಾಗಿದ್ದು, ನೀವು ಮೇಲೆ ಮೇಲೆ ಆರೋಹಣ ಮಾಡಿದಂತೆಲ್ಲ ಸುಂದರವಾದ ಪರಿಸರದ ದೃಶ್ಯವೈಭವವನ್ನು ಕಾಣಬಹುದು. ನಿಮಗೆ ಸಮಯಾವಕಾಶವಿದ್ದರೆ ಇಲ್ಲಿ ಚಾರಣದ ಜೊತೆಗೆ ಶಿಬಿರಗಳನ್ನು ಹಾಕಿಕೊಂಡು ಸಮಯ ಕಳೆಯಲು ಅವಕಾಶವಿದೆ. ಈ ವೀಕ್ಷಣಾ ಸ್ಥಳದ ಸುತ್ತ ಹಲವಾರು ಕಾಡು ಹಾದಿಗಳು ಇದ್ದು, ಸಾಹಸ ಚಟುವಟಿಕೆಗಳನ್ನು ಕೈಗೊಳ್ಳಲು ಬಯಸುವ ಉತ್ಸಾಹಿಗಳಿಗೆ ವಿಪುಲ ಅವಕಾಶಗಳನ್ನು ಒದಗಿಸುತ್ತವೆ.

ಈ ಕಾಡು ಹಾದಿಗಳು ಕಾಫಿ ತೋಟಗಳ ನಡುವೆ ಸಾಗಿ ಶಿಖಾರಾರೋಹಣದ ಮೋಜನ್ನು ಒದಗಿಸುತ್ತವೆ.  ಸಾಹಸಿಗರು ಮೇಲಕ್ಕೆ ಸಾಗಿದಂತೆಲ್ಲ ಕಾಫಿ ಬೀಜಗಳ ಜೊತೆಗೆ ಶುಂಠಿ ಮತ್ತು ಅಡಿಕೆಗಳ ಸುಗಂಧವನ್ನು ಆಸ್ವಾದಿಸಬಹುದು.

ನೀಲಿಮಲ ವೀಕ್ಷಣಾ ಸ್ಥಳದಿಂದ ನೀವು ಈ ತನ್ಮಯಗೊಳಿಸುವ ಕಣಿವೆಯ ಹಲವಾರು ಮನಮೋಹಕ ಜಲಪಾತಗಳನ್ನು, ಸುಂದರವಾದ ಬೆಟ್ಟಗಳನ್ನು, ಹಿಮಾಚ್ಛಾಧಿತವಾದ ದಟ್ಟ ಕಾಡುಗಳನ್ನು ಕಣ್ಣು ತುಂಬಿಕೊಳ್ಳಬಹುದು. ಅಲ್ಲದೆ ಇಲ್ಲಿಂದ ಮೀನ್ ಮಟ್ಟಿ ಜಲಪಾತದ ಅತ್ಯದ್ಭುತವಾದ ನೋಟವನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed