ಲಕ್ಷ್ಮಿ ನಾರಾಯಣ ದೇವಾಲಯವನ್ನು1905 ರಷ್ಟು ಹಿಂದೆಯೇ ನಿರ್ಮಿಸಲಾಗಿತ್ತು. ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿ ದೇವಿಯ ಪ್ರತಿಷ್ಠಾಪಿತ ಮೂರ್ತಿಗಳನ್ನು ಹೊಂದಿದ್ದ ಈ ದೇವಾಲಯವನ್ನು ಜಮ್ನಾಲಾಲ್ ಬಜಾಜ್ ರು 19 ನೇ ಜುಲೈ 1928 ರಂದು ಉದ್ಘಾಟಿಸಿದ್ದರು.
ಈ ದೇವಸ್ಥಾನವನ್ನು ವಿಶೇಷವಾಗಿ ಸಮಾಜದಲ್ಲಿ ಅಸ್ಪರ್ಶರೆಂದು ಪರಿಗಣಿಸಲ್ಪಟ್ಟಿದ್ದ ಹರಿಜನರಿಗಾಗಿ ನಿರ್ಮಿಸಲಾಯಿತು. ಸಂಸ್ಕೃತ, ಪ್ರಾಕೃತ, ಹಿಂದಿ ಮುಂತಾದ ಭಾರತೀಯ ಭಾಷೆಗಳ ಒಳ್ಳೊಳ್ಳೆ ಹೊತ್ತಿಗೆಗೆಳನ್ನುಳ್ಳ ಪುರಾತನ ಗ್ರಂಥಾಲಯವನ್ನು ಇಲ್ಲಿ ಕಾಣಬಹುದು. ಇದರಲ್ಲಿ ವೇದ ಮತ್ತು ಉಪನಿಷತ್ಗಳೂ ಇರುವುದು ವಿಶೇಷ.


Click it and Unblock the Notifications