ಕೃಷ್ಣ ಜನ್ಮ ಭೂಮಿ ದೇವಾಲಯ ಮೈದಾನದಲ್ಲಿರುವ ಶ್ರೀ ರಾಧಾ ರಾಸ್ ಬಿಹಾರಿ ಅಷ್ಟ ಸಖಿ ದೇವಾಲಯವು ಭಾರತದ ಅತ್ಯಂತ ಹಳೆಯ ದೇವಾಲಯದಲ್ಲಿ ಒಂದಾಗಿದೆ. ಇದನ್ನು ಹೆಸರೇ ಸೂಚಿಸುವಂತೆ ಇದು ರಾಧಾ ಕೃಷ್ಣ ಮತ್ತು ಆತನ ಎಂಟು ಜನ ಸಖಿಯರಿಗಾಗಿ ನಿರ್ಮಿಸಲಾಗಿದೆ. ಈ ಎಂಟು ಜನ ಸಖಿಯರು ಮತ್ತು ರಾಧೆಯ ಜೊತೆಗೆ ಶ್ರೀ ಕೃಷ್ಣನು ರಾಸಲೀಲೆಯನ್ನು ಆಡಿದನೆಂದು ನಂಬಲಾಗಿದೆ.
ದಂತ ಕತೆಗಳ ಪ್ರಕಾರ ಶ್ರೀ ಕೃಷ್ಣನು ಮಥುರಾ ಮತ್ತು ವೃಂದಾವನದ ಎರಡು ಸ್ಥಳಗಳಲ್ಲಿ ರಾಸಲೀಲೆಯನ್ನು ತೊಡಗಿದನೆಂದು ಭಾವಿಸಲಾಗುತ್ತದೆ. ರಾತ್ರಿಯ ಸಮಯದಲ್ಲಿ ಇಲ್ಲಿ ಕಾಲುಗೆಜ್ಜೆ ಮತ್ತು ಅಲೌಕಿಕ ಶಬ್ದಗಳನ್ನು ಕೇಳಬಹುದು ಎಂದು ನಂಬಲಾಗುತ್ತದೆ.
ಮೂಲ ದೇವರ ಮತ್ತು ಎಂಟು ಜನ ಸಖಿಯರ ವಿಗ್ರಹಗಳಿಗೆ ತೊಡಿಸಲಾಗಿರುವ ಬಟ್ಟೆಗಳನ್ನು ಪ್ರತಿದಿನ ಮುಖ್ಯ ಪೂಜೆಗೆ ಮೊದಲು ಬದಲಿಸಲಾಗುತ್ತದೆ. ಕೆಲವು ಬಟ್ಟೆಗಳು ಸುಮಾರು ನೂರು ವರ್ಷಗಳಷ್ಟು ಹಿಂದಿನವು. ಆದಾಗಿಯೂ ಈ ದೇವಾಲಯವನ್ನು ಇತ್ತೀಚೆಗೆ ನವೀಕರಣ ಮಾಡಲಾಯಿತು. ಕಟ್ಟಡದ ಬಹುಭಾಗವನ್ನು ಯಥಾ ಪ್ರಕಾರ ಅದೇ ಪ್ರಾಚೀನ ಸ್ಥಿತಿಯಲ್ಲಿ ಉಳಿಸಿಕೊಂಡಿರುವುದು ವಿಶೇಷ.


Click it and Unblock the Notifications