ಸೇವ ಕುಂಜ್ ಮತ್ತು ನಿಧಿವನ್‍ಗಳು ಶ್ರೀ ಕೃಷ್ಣನ ಕಾಲದಿಂದಲು ಅತ್ಯಂತ ಸುಂದರವಾದ ಉದ್ಯಾನವನಗಳಾಗಿವೆ. ನಂಬಿಕೆಗಳ ಪ್ರಕಾರ ಸೇವಾ ಕುಂಜ್‍ನಲ್ಲಿ ಶ್ರೀ ಕೃಷ್ಣನು ರಾಧಾ ಮತ್ತು ಇತರ ಗೋಪಿಯರ ಜೊತೆಗೆ ರಾಸ ಲೀಲೆಯನ್ನು ಆಡಿದನೆಂದು ಹೇಳಲಾಗುತ್ತದೆ. ಈ ಉದ್ಯಾನವನದ ಒಳಗೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ರಾಧ ಕೃಷ್ಣರ ದೇವಾಲಯವನ್ನು ನಾವು ಕಾಣಬಹುದು.
ಇಲ್ಲಿಗೆ ಸಮೀಪದಲ್ಲಿ ನಿಧಿವನ್ ಎಂಬ ಸ್ಥಳವಿದೆ. ಇಲ್ಲಿ ಕೃಷ್ಣ ಮತ್ತು ರಾಧೆಯರು ವಿಶ್ರಾಂತಿ ಪಡೆದರೆಂದು ನಂಬಲಾಗುತ್ತದೆ. ಬಹುತೇಕ ಮಂದಿ ಪ್ರವಾಸಿಗರು ಈ ಉದ್ಯಾನವನಕ್ಕೆ ಸಂಜೆ ಅಥವಾ ರಾತ್ರಿಗಳ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಏಕೆಂದರೆ ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣ ಮತ್ತು ರಾಧೆಯರು ಸಂಜೆಯಾದ ನಂತರ ರಾಸ ಲೀಲೆಯನ್ನು ಆಡಿದರೆಂದು ನಂಬಲಾಗುತ್ತದೆ. ಇಲ್ಲಿ ಇನ್ನಿತರ ದೇವಾಲಯಗಳನ್ನು ಸಹ ನಾವು ಕಾಣಬಹುದು.


Click it and Unblock the Notifications