Search
  • Follow NativePlanet
Share
ಮುಖಪುಟ » ಸ್ಥಳಗಳು » ವೃಂದಾವನ » ಆಕರ್ಷಣೆಗಳು » ಕೇಸಿ ಘಾಟ್

ಕೇಸಿ ಘಾಟ್, ವೃಂದಾವನ

2

ವೃಂದಾವನದಲ್ಲಿ ಶ್ರೀ ಕೃಷ್ಣನು ತನ್ನ ಬಾಲ್ಯದ ಬಹುತೇಕ ಅವಧಿಯನ್ನು ಕಳೆದನೆಂದು ನಂಬಲಾಗಿದೆ. ನಂಬಿಕೆಗಳ ಪ್ರಕಾರ ಕೃಷ್ಣನು ಕೇಸಿ ಘಾಟಿನಲ್ಲಿ ಕೇಸಿ ಎಂಬ ರಾಕ್ಷಸನನ್ನು ಕೊಂದು ತನ್ನ ಸ್ನೇಹಿತರು ಹಾಗು ಬಳಗವನ್ನು ಕಾಪಾಡಿದನಂತೆ. ಆಗ ನಡೆದ ಕಾಳಗವನ್ನು ನೋಡಿದ ದೇವಾಂಶ ಸಂಭೂತರು ಮತ್ತು ಸ್ಥಳೀಯರು ಶ್ರೀ ಕೃಷ್ಣನ ಅಪರಿಮಿತ ಶಕ್ತಿ ಸಾಮರ್ಥ್ಯಗಳನ್ನು ನೋಡಿ ದಿಗ್ಭ್ರಾಂತರಾದರಂತೆ. ಈ ಅದ್ಭುತ ಘಟನೆಯಿಂದಾಗಿ ಈ ಸ್ಥಳವು ಹಿಂದೂಗಳಿಗೆ ಅತ್ಯಂತ ಪವಿತ್ರವಾಗಿದೆ. ಈ ಘಾಟಿನಲ್ಲಿ ಹಲವಾರು ಸಣ್ಣ ಸಣ್ಣ ದೇವಾಲಯಗಳನ್ನು ನಾವು ಕಾಣಬಹುದು. ವೃಂದಾವನದಲ್ಲಿ ಅಳಿದುಳಿದಿರುವ ಕೆಲವೇ ಘಾಟ್‍ಗಳಲ್ಲಿ ಕೇಸಿ ಘಾಟ್ ತನ್ನ ಪ್ರಾಕೃತಿಕ ಸೌಂದರ್ಯದ ಸಲುವಾಗಿ ಪ್ರವಾಸಿಗರ ವಲಯದಲ್ಲಿ ಭಾರಿ ಖ್ಯಾತಿಯನ್ನು ಗಳಿಸಿದೆ. ಇಲ್ಲಿ ಹರಿಯುವ ಯಮುನಾ ನದಿಯಲ್ಲಿ ಮಿಂದರೆ ಸಕಲ ಪಾಪ ಕರ್ಮಗಳಿಂದ ವಿಮುಕ್ತಿ ಹೊಂದಬಹುದೆಂದು ನಂಬಲಾಗುತ್ತದೆ. ಪ್ರವಾಸಿಗರು ಇಲ್ಲಿ ನಡೆಯುವ ಸಂಜೆಯ ಆರತಿಯನ್ನು ನೋಡಲು ಸಹ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed