ಈ ದೇಗುಲವು ಬೆಟ್ಟದ ಮೇಲಿದೆ. ದೇಗುಲದಿಂದ ಸುತ್ತಲ ಕಣಿವೆಯನ್ನು ನೋಡಲು ಬಹಳ ಸುಂದರವಾಗಿರುತ್ತದೆ. ಈ ದೇಗುಲವು ನೋಡುಗರು ಇದನ್ನು ನಿರ್ಮಿಸಿದ ಕಲೆಗಾರರ ಚಾಕಚಕ್ಯತೆಗೆ ನಿಬ್ಬೆರಗಾಗುವಂತೆ ಮಾಡುತ್ತದೆ. ಈ ದೇಗುಲಕ್ಕೆ ಪ್ರವೇಶದ್ವಾರ, ಪ್ರಾಂಗಣ ಮತ್ತು ಗರ್ಭಗುಡಿಯಿದೆ. ಇಲ್ಲೊಂದು ವಿಗ್ರಹವಿದ್ದು ಇದು ಜೈನ ತೀರ್ಥಂಕರನ ವಿಗ್ರಹವೆಂದು ಭಾವಿಸಲಾಗಿದೆ. ಇದು ಬುದ್ಧನ ವಿಗ್ರಹ ಕೂಡ ಆಗಿರಬಹುದು. ಏಕೆಂದರೆ ಇದು 24 ತೀರ್ಥಂಕರರ ಯಾವುದೇ ರೀತಿಯ ಚಿಹ್ನೆಗಳನ್ನು ಹೊಂದಿಲ್ಲ. ಇದರ ಸುತ್ತಲು ವೃತ್ತಾಕಾರದ ಪ್ರಾಂಗಣವಿದ್ದು ಶಿಖರವಿದೆ. ಶಿಖರದ ಕೆತ್ತನೆ ಬಹಳ ಸುಂದರವಾಗಿದೆ. ಇದು ಜೈನ ದೇವಾಲಯವಾಗುವುದಕ್ಕೆ ಮುಂಚೆ ಇದೊಂದು ದೇವಿಯ ದೇಗುಲವಾಗಿತ್ತು ಎಂಬುದಕ್ಕೆ ಇಲ್ಲಿ ಕುರುಹುಗಳಿವೆ.


Click it and Unblock the Notifications