ಅಮೃತಿ ಪ್ರಾಣಿಶಾಸ್ತ್ರೀಯ ಉದ್ಯಾನ ಜಾವಡು ಬೆಟ್ಟಗಳ ತಪ್ಪಲಲ್ಲಿ ಇರುವ ಒಂದು ಪ್ರಸಿದ್ಧ ಪ್ರವಾಸಿ ತಾಣ. ಇಲ್ಲಿ ಹಲವಾರು ಜಲಪಾತಗಳು ಜೊತೆಗೆ ಹಲವು ರೀತಿಯ ಹಕ್ಕಿ ಮತ್ತು ಪ್ರಾಣಿಗಳಿವೆ. ಇದು ಪ್ರಾಣಿಗಳ ವಸತಿಗಾಗಿ ಪ್ರಸಿದ್ಧವಾಗಿದೆ.ಮಂಗ, ಚುಕ್ಕೆಗಳಿರುವ ಜಿಂಕೆ, ಮುಳ್ಳುಹಂದಿ, ನರಿ, ನವಿಲು, ಬಾತುಕೋಳಿ, ಕಾಡು ಗಿಳಿ, ಮೊಸಳೆ, ಕಾಡು ಬೆಕ್ಕು, ಹದ್ದು ಗಳು ಇಲ್ಲಿನ ಪ್ರಮುಖ ಪ್ರಾಣಿಗಳಾಗಿವೆ.
ಇಲ್ಲಿ ವಿವಿಧ ರೀತಿಯ ಔಷಧೀಯ ಸಸ್ಯಗಳು ಕೂಡ ಇಲ್ಲಿವೆ. ಇಲ್ಲಿ ಎರಡು ವಿಶ್ರಾಂತಿ ಗೃಹಗಳು, ಮಕ್ಕಳ ಆಟದ ಸ್ಥಳ, ಧ್ಯಾನ ಮಂದಿರ ಅಮೃತಿ ಪ್ರಾಣಿಶಾಸ್ತ್ರೀಯ ಉದ್ಯಾನದ ಸಮೀಪದಲ್ಲೇ ಇವೆ. ರಜಾದಿನಗಳ ಅವಧಿಯಲ್ಲಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಇಲ್ಲಿನ ಅಭಿವೃದ್ಧಿಗೆ ಮುಂದಾಗಿದೆ. ಇಲ್ಲಿನ ಪ್ರವೇಶ ಶುಲ್ಕ ಪ್ರತಿಯೊಬ್ಬರಿಗೆ 2 ರೂ ಗಳಾಗಿವೆ. ಇಲ್ಲಿ ಆದಿವಾಸಿಗಳು, ಗುಡ್ಡಗಾಡು ಜನರು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ನಿಮ್ಮಿಯಂಬತು ಬಳಿ ಇವರ ಸಮಾಜವನ್ನು ರಚಿಸಲಾಗಿದೆ. ಇಲ್ಲಿನ ಜನರಿಗೆ ಉದ್ಯೋಗ್ ಕಲ್ಪಿಸುವ ಕಾರಣಕ್ಕಾಗಿ ಇದನ್ನು ಕಟ್ಟಲಾಗಿದೆ.