ಐದು ನದಿಗಳಾದ ಗಂಗಾ, ಸರಸ್ವತಿ, ಧುಪಾಪ, ಯಮುನಾ ಮತ್ತು ಕಿರ್ನಾ ಸಂಗಮವಾಗುವ ಪ್ರದೇಶವೇ ಪಂಚಗಂಗಾ ಘಾಟ್. ಈ ಐದು ನದಿಗಳಲ್ಲಿ ಗಂಗಾ ನದಿ ಮಾತ್ರ ಕಾಣಸಿಗುತ್ತದೆ. ಉಳಿದ ನಾಲ್ಕು ನದಿಗಳು ಭೂಮಿಯಲ್ಲಿ ಲೀನವಾಗಿದೆ ಎಂದು ನಂಬಲಾಗುತ್ತಿದೆ. ಇದರಿಂದಾಗಿ ಪಂಚಗಂಗಾ ಫಾಟ್ ನ ಪ್ರದೇಶ ವಾರಣಾಸಿಯಲ್ಲಿ ಅತ್ಯಂತ ಪವಿತ್ರ ಸ್ಥಳ.
ಅನನ್ಯ ಮತ್ತು ಪವಿತ್ರ ಸ್ಥಳವನ್ನು ಹೊರತುಪಡಿಸಿ ಪಂಚಗಂಗಾ ಘಾಟ್ ಮೂರು ಐತಿಹಾಸಿಕ ಕಾರಣಗಳಿಗೆ ಜನಪ್ರಿಯ. ಅವುಗಳೆಂದರೆ...1. ರಾಮಾಯಣವನ್ನು ಮತ್ತೊಮ್ಮೆ ಬರೆದ ಸಂತ ತುಳಸಿ ದಾಸ ಅವರು ತನ್ನ ಜನಪ್ರಿಯ ಸಾಹಿತ್ಯಿಕ ಕೆಲಸ ವಿನಯ-ಪತ್ರಿಕಾ ವನ್ನು ಅವರು ಈ ಸ್ಥಳದಲ್ಲೇ ಬರೆದರೆನ್ನಲಾಗಿದೆ.2. ವೇದಗಳ ಮಹಾನ್ ಪಂಡಿತ ಹಾಗೂ ಗುರು ಸ್ವಾಮಿ ರಾಮನಂದ ಅವರು ತನ್ನ ಶಿಷ್ಯರಿಗೆ ಇಲ್ಲೇ ಬೋಧಿಸಿದರು.3. ಮರಾಠ ದೊರೆ ಬೆನಿ ಮಧುರ್ ರಾವ್ ಸಿಂಧಿಯಾ ನಿರ್ಮಿಸಿದ್ದ ವಿಷ್ಣು ಮಂದಿರವನ್ನು ಕೆಡವಿ ಮುಘಲ್ ಔರಂಗಜೇಬ ಈ ಸ್ಥಳದಲ್ಲಿ ಅಲಮ್ಗಿರ್ ಮಸೀದಿ ನಿರ್ಮಿಸಿದ್ದ.


Click it and Unblock the Notifications