Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಣಾಸಿ » ಆಕರ್ಷಣೆಗಳು » ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ವಾರಣಾಸಿ

4

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಬಿಎಚ್ ಯು ಎಂದೇ ಜನಪ್ರಿಯ. ಪ್ರಮುಖ ದೇಶಭಕ್ತ, ಸಾಮಾಜಿಕ ಸುಧಾರಕ, ಶಿಕ್ಷಣ ಮತ್ತು ರಾಜಕೀಯ ಕಾರ್ಯಕರ್ತ ಪಂಡಿತ್ ಮದನ್ ಮೋಹನ್ ಮಾಲ್ವಿಯಾ ಅವರ ಪ್ರಯತ್ನದ ಫಲವಾಗಿ ಈ ವಿಶ್ವವಿದ್ಯಾನಿಲಯ ನೆಲೆನಿಂತಿದೆ.

1916ರ ಫೆಬ್ರವರಿ 4ರಂದು ವಿಶ್ವವಿದ್ಯಾನಿಲಯಕ್ಕೆ ಭಾರತದ ಆಗಿನ ವೈಸರಾಯ್ ಲಾರ್ಡ್ ಹರ್ಡಿಂಗ್ ಶಿಲಾನ್ಯಾಸ ಮಾಡಿದ್ದರು. 20 ಸಾವಿರ ವಿದ್ಯಾರ್ಥಿಗಳು ಮತ್ತು 60 ಹಾಸ್ಟೆಲ್ ಗಳಿರುವ ಈ ವಿಶ್ವವಿದ್ಯಾನಿಲಯ ಏಶ್ಯಾದ ಬೃಹತ್ ವಿಶ್ವವಿದ್ಯಾನಿಲಯವಾಗಿದೆ. ಇದನ್ನು ಪೂರ್ವದ ಆಕ್ಸ್ ಫರ್ಡ್ ಎಂದೇ ಕರೆಯಲಾಗುತ್ತದೆ.

1300 ಎಕ್ರೆ ಪ್ರದೇಶದಲ್ಲಿರುವ ಇದರ ಮುಖ್ಯ ಕ್ಯಾಂಪಸ್ ಗೆ ವಾರಣಾಸಿಯ ಆಗಿನ ಆಡಳಿತಗಾರರು ಜಾಗ ದಾನವಾಗಿ ನೀಡಿದ್ದರು. ವಿಶ್ವವಿದ್ಯಾನಿಲಯದ ಮತ್ತೊಂದು ಕ್ಯಾಂಪಸ್ ಇಲ್ಲಿಂದ 60 ಕಿ.ಮೀ. ದೂರದಲ್ಲಿ ಮಿರ್ಜಾಪುರ ಜಿಲ್ಲೆಯ ಬರ್ಕಾಚ್ಚದಲ್ಲಿದೆ. ಈ ಕ್ಯಾಂಪಸ್ ನ್ನು ರಾಜೀವ್ ಗಾಂಧಿ ಸೌಥ್ ಕ್ಯಾಂಪಸ್ ಎಂದು ಕರೆಯಲಾಗುತ್ತದೆ. ಈ ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ಮುಖ್ಯ ಶಿಕ್ಷಣ ಸಂಸ್ಥೆಗಳಿವೆ, 14 ಬೋಧನಾ ವಿಭಾಗಗಳು ಮತ್ತು 140 ಇಲಾಖೆಗಳಿವೆ. ಇದು ವಿಶ್ವದೆಲ್ಲೆಡೆಯ 34 ರಾಷ್ಟ್ರಗಳಿಂದ ವಿದ್ಯಾರ್ಥಿಗಳನ್ನು ಸೆಳೆಯುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed