Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಣಾಸಿ » ಆಕರ್ಷಣೆಗಳು » ನವೀನ ವಿಶ್ವನಾಥ ದೇವಸ್ಥಾನ

ನವೀನ ವಿಶ್ವನಾಥ ದೇವಸ್ಥಾನ, ವಾರಣಾಸಿ

3

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಪಂಡಿತ್ ಮದನ್ ಮೋಹನ್ ಮಾಲವಿಯಾ ಶಿವನಿಗಾಗಿ  ನವೀನ ವಿಶ್ವನಾಥ ಮಂದಿರವನ್ನು ನಿರ್ಮಿಸಿದರು. 252 ಅಡಿ ಎತ್ತರದ ಮಂದಿರಕ್ಕೆ 1931ರ ಮಾರ್ಚ್ ನಲ್ಲಿ ಶಿಲಾನ್ಯಾಸ ಮಾಡಲಾಗಿತ್ತು ಮತ್ತು ಮಂದಿರ ನಿರ್ಮಾಣ ಪೂರ್ಣಗೊಳ್ಳಲು ಸುಮಾರು ಮೂರು ವರ್ಷ ಬೇಕಾಯಿತು.

ಈ ಮಂದಿರವನ್ನು ಅಮೃತಶಿಲೆಯಲ್ಲಿ ಕಟ್ಟಲಾಗಿದೆ ಮತ್ತು ಇದು ಕಾಶಿಯಲ್ಲಿ ಮುಘಲ್ ದೊರೆ ಔರಂಗಜೇಬ ಅಲಮ್ಗಿರ್ ಕೆಡವಿದ ಮೂಲ ವಿಶ್ವನಾಥ ಮಂದಿರದ ಪ್ರತಿರೂಪದಂತಿದೆ.ನವೀನ ವಿಶ್ವನಾಥ ಮಂದಿರವು ಬಹುದೊಡ್ಡ ಸಂಕೀರ್ಣವಾಗಿದ್ದು, ಇದರಲ್ಲಿ ವಿವಿಧ ದೇವರು ಹಾಗೂ ದೇವತೆಗಳಿಗೆ ಸೇರಿದ ಸುಮಾರು ಏಳು ಮಂದಿರಗಳಿವೆ. ಶಿವನಿಗೆ ಸೇರಿದ ಮಂದಿರ ನೆಲಮಳಿಗೆಯಲ್ಲಿದೆ. ಲಕ್ಷ್ಮೀ ನಾರಾಯಣ ಮತ್ತು ದುರ್ಗಾ ದೇವತೆಗೆ ಸೇರಿದ ಮಂದಿರ ಮೊದಲ ಮಹಡಿಯಲ್ಲಿದೆ.

ಅಮೃತ ಶಿಲೆಯಿಂದ ಮಾಡಿರುವಂತಹ ಎತ್ತರದ ಶಿಖರ ಹೊಸ ದೇವಾಲಯದ ಒಂದು ವಿಶೇಷವಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ದೇವಾಲಯದ ಒಳಗಿನ ಗೋಡೆಗಳಲ್ಲಿ ಭಗವದ್ಗೀತೆ ಮತ್ತು ಇತರ ಧರ್ಮಗ್ರಂಥಗಳ ಪ್ರಮುಖ ಸಾರಗಳನ್ನು ಒಳಗೊಂಡ ವೈವಿಧ್ಯಮಯ ಚಿತ್ರಗಳಿವೆ.

ಪಂಡಿತ್ ಮದನ್ ಮೋಹನ್ ಮಾಲ್ವಿಯಾ ಅವರ ಉದಾರ ಮತ್ತು ಪ್ರಗತಿಪರ ತತ್ವದಿಂದಾಗಿ ಈ ಮಂದಿರಕ್ಕೆ ಎಲ್ಲಾ ಜಾತಿ ಹಾಗೂ ಧರ್ಮದವರಿಗೆ ಪ್ರವೇಶ ನೀಡಲಾಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri