Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಣಾಸಿ » ಆಕರ್ಷಣೆಗಳು » ಮಣಿಕಾರ್ಣಿಕ ಘಾಟ್

ಮಣಿಕಾರ್ಣಿಕ ಘಾಟ್, ವಾರಣಾಸಿ

3

ವಾರಣಾಸಿಯ ಅತ್ಯಂತ ಪ್ರಾಚೀನ ಘಾಟ್ ಆಗಿರುವ ಮಣಿಕಾರ್ಣಿಕ ಘಾಟ್ ಬಗ್ಗೆ ಹಲವಾರು ಪೌರಾಣಿಕ ದಂತಕಥೆಗಳಿವೆ. ಒಂದು ದಂತಕಥೆಯ ಪ್ರಕಾರ ಶಿವ ತನ್ನ ಪತ್ನಿ ಪಾರ್ವತಿಯನ್ನು ಬಿಟ್ಟು ಹೆಚ್ಚಿನ ಸಮಯ ತನ್ನ ಭಕ್ತರನ್ನು ಭೇಟಿಯಾಗಲು ಇಲ್ಲಿಗೆ ಬರುತ್ತಿದ್ದನಂತೆ. ಗಂಗಾ ನದಿಯ ದಂಡೆಯಲ್ಲಿ ತನ್ನ ಆಭರಣ ಕಳೆದುಹೋಗಿದೆ ಅದನ್ನು ಹುಡುಕಿಕೊಡಿ ಎಂದು ಪಾರ್ವತಿ ಮನವಿ ಮಾಡುತ್ತಾಳೆ. ಶಿವ ಯಾವಾಗಲೂ ತನ್ನ ಜತೆಗಿರಬೇಕೆಂದು ಪಾರ್ವತಿ ಈ ರೀತಿ ಹೇಳುತ್ತಾಳೆ. ಮಾನವರು ಸತ್ತ ಬಳಿಕ ಇಲ್ಲಿ ಅಂತ್ಯಕ್ರಿಯೆ ನಡೆಸಿದರೆ ಆಗ ಶಿವ ಅವರಲ್ಲಿ ಮಣಿಕಾರ್ಣಿಕದ ಬಗ್ಗೆ ಕೇಳುತ್ತಾನೆಂಬ ದಂತಕಥೆಯಿದೆ. ಪಾರ್ವತಿಯ ಕಿವಿಯ ಆಭರಣ ಹುಡುಕುತ್ತಿದ್ದ ವೇಳೆ ಶಿವ ನಿರ್ಮಿಸಿದ ಎನ್ನಲಾದ ತೊಟ್ಟಿ ಇಲ್ಲಿದ್ದು, ಇದನ್ನು ಮಣಿಕಾರ್ಣಿಕ ಎಂದು ಕರೆಯಲಾಗುತ್ತದೆ.

ವಾರಣಾಸಿಯಲ್ಲಿ ನಡೆಯುವ ಡೆತ್ ಟೂರಿಸಂನ್ನು ಮಣಿಕಾರ್ಣಿಕದಲ್ಲಿ ಪ್ರತ್ಯಕ್ಷ ನೋಡಬಹುದಾಗಿದೆ. ಸಾರ್ವಜನಿಕರ ಎದುರೇ ನಡೆಯುವ ಶವ ಸಂಸ್ಕಾರವನ್ನು ನೋಡಲೆಂದೇ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ.ಇಲ್ಲೊಂದು ಗಣಪತಿ ಮಂದಿರವಿದೆ ಮತ್ತು ವಿಷ್ಣುವಿನ ಪಾದದ ಗುರುತೆಂದು ಹೇಳಲಾಗಿರುವ ಪಾದದ ಗುರುತು ಕಲ್ಲೊಂದರ ಮೇಲಿದೆ. ಶ್ರೀಮಂತ ಮತ್ತು ವಿಐಪಿಗಳ ಶವ ಸಂಸ್ಕಾರ ಈ ಕಲ್ಲಿನ ಮೇಲೆ ನಡೆಸಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun