1976ರಲ್ಲಿ ಉದಯಪುರ ಸೋಲಾರ್ ಅಬ್ಸರ್ವೇಟರಿಯನ್ನು ಡಾ. ಅರವಿಂದ ಭಟ್ನಾಗರ್ ನಿರ್ಮಿಸಿದರು. ಇದು ಫತೇಹ್ ಸಾಗರ ಕೆರೆಯ ದಡದಲ್ಲಿದೆ. ಈ ಸೋಲಾರ್ ಅಬ್ಸರ್ವೇಟರಿಗೆ ಪ್ರೇರಣೆಯಾಗಿದ್ದು ಬಿಗ್ ಬಿಯರ್ ಕೆರೆಯ ಸಮೀಪವಿರುವ ದಕ್ಷಿಣ ಕ್ಯಾಲಿಫೋರ್ನಿಯಾದ ಸೋಲಾರ್ ಅಬ್ಸರ್ವೇಟರಿ. ಕೇಂದ್ರ ಸರ್ಕಾರದ ಬಾಹ್ಯಾಕಾಶ ಸಂಸ್ತೆಯ ಪರವಾಗಿ ಅಹ್ಮದಾಬಾದ್‌ನಲ್ಲಿರುವ ಫಿಸಿಕಲ್ ರೀಸರ್ಚ್ ಲ್ಯಾಬೊರೇಟರಿಯು ಈ ಕೇಂದ್ರವನ್ನು ನಿರ್ವಹಿಸುತ್ತಿದೆ.
ಎಲ್ಲಾ ಆಧುನಿಕ ಉಪಕರಣಗಳನ್ನೂ ಇಲ್ಲಿಡಲಾಗಿದೆ. ಮ್ಯಾಗ್ನೆಟಿಕ್ ಫೀಲ್ಡ್, ಸ್ಪೆಕ್ಟ್ರಲ್ ಆಬ್ಸರ್ವೇಷನ್‌ಗಳು ಮತ್ತು ಇತರ ಪ್ರಮುಖವಾದ ಉಪಕರಣಗಳನ್ನು ಇಲ್ಲಿ ನೋಡಬಹುದು. ಆಕಾಶಕಾಯಗಳ ಚಲನೆ ಮತ್ತು ಇತರ ಎಲ್ಲಾ ಚಲನವಲನಗಳನ್ನೂ ವೀಕ್ಷಿಸಲು ಇಲ್ಲಿನ ಉಪಕರಣಗಳು ಸಹಾಯಕ.


Click it and Unblock the Notifications