ಲೇಕ್ ಪ್ಯಾಲೇಸ್ ಇರುವುದು ಪಿಚೋಲಾ ಕೆರೆಯ ಮಧ್ಯೆ ಇರುವ ಜಗ್ ನಿವಾಸ ದ್ವೀಪದಲ್ಲಿ. ಮಹಾರಾಣ ಜಗತ್ ಸಿಂಗ್ ಈ ಅರಮನೆಯನ್ನು 1743ರಲ್ಲಿ ನಿರ್ಮಿಸಿದರು. ಸದ್ಯ ಈ ಅರಮನೆಯನ್ನು ಫೈವ್ ಸ್ಟಾರ್ ಹೊಟೆಲ್ ಆಗಿ ಪರಿವರ್ತಿಸಲಾಗಿದೆ. ಈ ಕಟ್ಟಡ ವಾಸ್ತುಶಿಲ್ಪ ಶೈಲಿಯು ಅತ್ಯಂತ ಸುಂದರವಾಗಿದೆ.
ಜಗತ್ತಿನಲ್ಲೇ ಅತ್ಯಂತ ಸುಂದರ ಅರಮನೆಗಳಲ್ಲಿ ಇದೂ ಒಂದು. ಸುಂದರವಾಗಿ ನಿರ್ಮಿಸಿದ ಕಂಬಗಳು, ಅಂಕಣಗಳನ್ನು ಹೊಂದಿರುವ ವೆರಾಂಡಾ, ಉದ್ಯಾನಗಳು ಮತ್ತು ಕಾರಂಜಿಗಳು ಈ ಅರಮನೆಯ ಸೌಂದರ್ಯವನ್ನು ಹೆಚ್ಚಿಸುತ್ತಿದೆ. ಅರಮನೆಯ ಕೋಣೆಗಳನ್ನು ಗಾಜುಗಳು, ಕಮಾನುಗಳು ಮತ್ತು ಹಸಿರು ಕಮಲದ ಎಲೆಗಳಿಂದ ಅಲಂಕರಿಸಲಾಗಿದೆ.
ಇಲ್ಲಿ ಇನ್ನೂ ಹಲವು ಅಪಾರ್ಟ್ಮೆಂಟ್ಗಳಿದ್ದು, ಕುಶ್ ಮಹಲ್, ಬಡಾ ಮಹಲ್, ಧೋಲಾ ಮಹಲ್, ಫೂಲ್ ಮಹಲ್ ಮತ್ತು ಅಜ್ಜನ್ ನಿವಾಸ್ ಎಂದು ಗುರುತಿಸಲಾಗಿದೆ. ಬಾರ್, ಈಜುಕೊಳ ಮತ್ತು ಸಭಾಂಗಣವು ಈ ಅರಮನೆಯಲ್ಲಿದೆ.