Search
  • Follow NativePlanet
Share
» »ವಾರಾಂತ್ಯದಲ್ಲಿ ಕಡಿಮೆ ಬಜೆಟ್ ಪ್ರವಾಸ ಯೋಜಿಸುತ್ತಿದ್ದರೆ ಈ ಸುಂದರ ಸ್ಥಳಕ್ಕೆ ಆರಾಮಾಗಿ ಭೇಟಿ ನೀಡಿ…

ವಾರಾಂತ್ಯದಲ್ಲಿ ಕಡಿಮೆ ಬಜೆಟ್ ಪ್ರವಾಸ ಯೋಜಿಸುತ್ತಿದ್ದರೆ ಈ ಸುಂದರ ಸ್ಥಳಕ್ಕೆ ಆರಾಮಾಗಿ ಭೇಟಿ ನೀಡಿ…

ಆಗಸ್ಟ್ ನಲ್ಲಿ ಸಾಕಷ್ಟು ರಜಾ ದಿನಗಳು ಬಂದಿದ್ದರಿಂದ ಜನರು ಮಸ್ತ್‌ ಟ್ರಿಪ್‌ ಎಂಜಾಯ್‌ ಮಾಡಿದರು. ಆದರೆ ಈ ಸಮಯದಲ್ಲಿ ಪ್ರವಾಸ ಯೋಜನೆ ಮಾಡದವರು ಸೆಪ್ಟೆಂಬರ್ ತಿಂಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ ನಲ್ಲಿಯೂ ಅನೇಕ ರಜೆ ದಿನಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನೀವು ಇಂತಹ ರಜಾದಿನಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ, ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಪ್ರವಾಸವನ್ನು ಯೋಜಿಸಬಹುದು.

ಪ್ರಯಾಣವನ್ನು ಇಷ್ಟಪಡುವ ಜನರು ಸಮಯ ಸಿಗುವುದನ್ನು ಕಾಯುತ್ತಿರುತ್ತಾರೆ. ಸಿಕ್ಕ ತಕ್ಷಣ ಹೊರಗೆ ಹೋಗಲು ಪ್ಲಾನ್‌ ಮಾಡುತ್ತಾರೆ. ನೀವು ಕೂಡ ಈ ಸಾಲಿಗೆ ಸೇರಿದ್ದರೆ, ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ, ವಿಶೇಷವಾಗಿ ನಿಮ್ಮ ಸಂಗಾತಿಯನ್ನು ಒಂದೊಳ್ಳೆಯ ಸ್ಥಳಕ್ಕೆ ಕರೆದುಕೊಂಡು ಹೋಗಬೇಕೆಂದು ಅಂದುಕೊಂಡಿದ್ದರೆ ಈ ಲೇಖನ ನಿಮಗಾಗಿ. ಇಂದು ಈ ಲೇಖನದಲ್ಲಿ ಬೈಕ್‌ನಲ್ಲಿ ಸುತ್ತಾಡುವ ಕ್ರೇಜ್‌ ಇರುವವರಿಗೆ ಹಾಗೂ ಸ್ವಂತ ವಾಹನ ಇರುವವರು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಪ್ರವಾಸವನ್ನು ಪೂರ್ಣಗೊಳಿಸಬಹುದಾದ ಒಂದು ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ.

morning ooty

ಊಟಿ ರೋಡ್ ಟ್ರಿಪ್

ಹೌದು, ನಿಮ್ಮ ಬಳಿ ಕೇವಲ 10,000-ರೂ.ಇದ್ದರೆ ಪ್ರವಾಸವನ್ನು ಯೋಜಿಸಬಹುದು ಅದು ಊಟಿಗೆ. ಊಟಿ ಬೆಂಗಳೂರಿಗೆ ಸಮೀಪವಿರುವ ಸುಂದರವಾದ ಗಿರಿಧಾಮ. ವಿಶೇಷವಾಗಿ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ, ಇಲ್ಲಿನ ದೃಶ್ಯ ನೋಡಲು ತುಂಬಾ ಸುಂದರವಾಗಿರುತ್ತದೆ ಮತ್ತು ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ. ಆದರೆ, ಸ್ವಲ್ಪ ಎಚ್ಚರವಾಗಿರಿ. ಏಕೆಂದರೆ ಈ ಅವಧಿಯಲ್ಲಿ ಊಟಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ. ಅಷ್ಟೇ ಅಲ್ಲ, ಊಟಿಯು ಜುಲೈ ಮತ್ತು ಸೆಪ್ಟೆಂಬರ್ ನಡುವೆ ಗರಿಷ್ಠ ಮಳೆಯನ್ನು ಪಡೆಯುತ್ತದೆ.

ಬೆಂಗಳೂರಿನಿಂದ ಹೋಗುವುದು ಹೇಗೆ?

ನೀವು ಬೆಂಗಳೂರಿನಿಂದ ಹಲವಾರು ಮಾರ್ಗಗಳ ಮೂಲಕ ಊಟಿಯನ್ನು ತಲುಪಬಹುದು. ಆದರೆ ನೀವು ಸಮೀಪದ ಮಾರ್ಗವನ್ನು ಬಯಸಿದರೆ NH 275 ಮೂಲಕ ಹೋಗಬಹುದು. ಇಲ್ಲಿಂದ ಅಂತರ ಕೇವಲ 277 ಕಿ.ಮೀ. ಇದರೊಂದಿಗೆ, ನೀವು NH 209 ಮೂಲಕ ಸಹ ಊಟಿ ತಲುಪಬಹುದು. ಇಲ್ಲಿ ಇನ್ನೊಂದು ಪ್ಲಸ್‌ ಪಾಯಿಂಟ್‌ ಅಂದರೆ ನೀವು ದಾರಿ ಮಧ್ಯದಲ್ಲಿ ನಿಲ್ಲಿಸಿ, ಸುಂದರವಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

ooty monsson travel

ಯಾವ ವಾಹನ ಸೂಕ್ತ?

ನೀವು ಕಾರಿನಲ್ಲಿಯಾದರೆ ಕೇವಲ 5-6 ಗಂಟೆಗಳಲ್ಲಿ ಇಲ್ಲಿಗೆ ತಲುಪಬಹುದು. ಬಸ್ ಅಥವಾ ಕ್ಯಾಬ್ ಬದಲಿಗೆ ನಿಮ್ಮ ಸ್ವಂತ ಕಾರಿನಲ್ಲಿ ಪ್ರಯಾಣಿಸಿ. ಏಕೆಂದರೆ ಸ್ವಂತ ವಾಹನದಲ್ಲಿ ಪ್ರಯಾಣಿಸುವವರಿಂದ ಪೆಟ್ರೋಲ್ ಮತ್ತು ಟೋಲ್ ಶುಲ್ಕವನ್ನು ಮಾತ್ರ ಕಟ್ಟಬೇಕಾಗುತ್ತದೆ.

ವಸತಿ ವ್ಯವಸ್ಥೆ

1,500-2000 ರೂಪಾಯಿಗಳ ನಡುವೆ ತಂಗಲು ನೀವು ಇಲ್ಲಿ ಉತ್ತಮ ಹೋಟೆಲ್‌ಗಳನ್ನು ಪಡೆಯಬಹುದು. ಅದೇ ನೀವು ಹೋಟೆಲ್ ನಲ್ಲಿ 3 ರಾತ್ರಿ ತಂಗುವುದಾದರೆ ಇಬ್ಬರಿಗೆ 6000 ರೂ.ಹಾಗಾಗಿ ಆನ್‌ಲೈನ್‌ನಲ್ಲಿ ಹೋಟೆಲ್‌ಗಳನ್ನು ಬುಕ್ ಮಾಡಿ. ಏಕೆಂದರೆ ಆಗ ನೀವು ಉತ್ತಮ ಆಫರ್‌ ಪಡೆಯಬಹುದು. ಆದರೆ ಬೈಕ್‌ನಲ್ಲಿ ಪ್ರಯಾಣಿಸುವವರು ಮಾತ್ರ ಮುಂಚಿತವಾಗಿ ಹೋಟೆಲ್ ಅನ್ನು ಕಾಯ್ದಿರಿಸಬೇಡಿ. ಏಕೆಂದರೆ ನಿಮಗಾಗ ನಿಮ್ಮ ಆಯ್ಕೆಯ ಸ್ಥಳ ಮತ್ತು ಹೋಟೆಲ್ ಅನ್ನು ಸುಲಭವಾಗಿ ಬುಕ್‌ ಮಾಡುವ ಅವಕಾಶ ಲಭಿಸುತ್ತದೆ.

ooty church

ಒಟ್ಟು ವೆಚ್ಚ ಎಷ್ಟಾಗಬಹುದು?

ನೀವು ನಿಮ್ಮ ಸಂಗಾತಿಯೊಂದಿಗೆ ಹೋಟೆಲ್‌ನಲ್ಲಿ ಉಳಿದುಕೊಂಡರೆ 3 ದಿನಗಳ ವೆಚ್ಚ ಸುಮಾರು 6,000 ರೂ. ಆಹಾರದ ವೆಚ್ಚವು 4,000 ರೂ. ಮತ್ತು ಪೆಟ್ರೋಲ್ ಮತ್ತು ಟೋಲ್ ವೆಚ್ಚವು 3000-4000 ರೂಪಾಯಿಗಳ ನಡುವೆ ಇರುತ್ತದೆ. ಈ ರೀತಿಯಲ್ಲಿ ನೀವು ಕೇವಲ 15,000 ರೂಪಾಯಿಗಳಲ್ಲಿ ಊಟಿ ಪ್ರವಾಸವನ್ನು ಆರಾಮಾಗಿ ಆನಂದಿಸಬಹುದು.

ಊಟಿಯಲ್ಲಿ ನೋಡಬಹುದಾದ ಸ್ಥಳಗಳು

ಊಟಿ ಲೇಕ್, ಬೊಟಾನಿಕಲ್ ಗಾರ್ಡನ್, ರೋಸ್ ಗಾರ್ಡನ್, ವೆನ್ಲಾಕ್ ಡೌನ್ಸ್, ಪೈನ್ ಫಾರೆಸ್ಟ್ ಮತ್ತು ಎಮರಾಲ್ಡ್ ಲೇಕ್ ಸೇರಿದಂತೆ ಊಟಿಯಲ್ಲಿ ನೋಡಲು 47 ಕ್ಕೂ ಹೆಚ್ಚು ಜನಪ್ರಿಯ ಸ್ಥಳಗಳಿವೆ.

More News

Read more about: weekend getaways ooty tamil nadu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+