ಧರ್ಮಸ್ಥಳವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ನೇತ್ರಾವತಿ ನದಿಯ ದಡದಲ್ಲಿರುವ ದೇವಾಲಯಗಳ ಪಟ್ಟಣವಾಗಿದೆ. ಈ ಪಟ್ಟಣವು ಶಿವನಿಗೆ ಅರ್ಪಿತವಾಗಿರುವ ಧರ್ಮಸ್ಥಳ ದೇವಾಲಯಕ್ಕೆ ಹೆಸರುವಾಸಿಯಾಗಿದೆ.
ಈ ದೇವಾಲಯದಲ್ಲಿ ಮಂಜುನಾಥ ಎಂದು ಕರೆಯಲ್ಪಡುವ ಶಿವನ ದೇವಾಲಯ ಜೊತೆಗೆ ಅಮ್ಮನವರು ಎಂದು ಕರೆಯಲ್ಪಡುವ ದೇವತೆ, ಮತ್ತು ಧರ್ಮದ ರಕ್ಷಕ ಶಕ್ತಿಗಳಾದ ಚಂದ್ರನಾಥ ಮತ್ತು ಧರ್ಮ ದೈವಗಳು ಇವೆ. ದೇಗುಲದ ವಿಶಿಷ್ಟತೆ ಏನೆಂದರೆ ಇದು ಜೈನ ಆಡಳಿತದಿಂದ ನಡೆಸಲ್ಪಡುತ್ತದೆ ಮತ್ತು ಪೂಜೆಗಳನ್ನು ಹಿಂದೂ ಪುರೋಹಿತರು ನಡೆಸುತ್ತಾರೆ.

ಬೇಲೂರು ಮತ್ತು ಹಳೇಬೀಡು
ಹೊಯ್ಸಳ ಸಾಮ್ರಾಜ್ಯದ ಸ್ಥಾನವಾಗಿದ್ದ ಹಾಸನವು ಬೇಲೂರು, ಹಳೇಬೀಡು, ಶ್ರವಣಬೆಳಗೊಳದ ಪ್ರಸಿದ್ಧ ತಾಣಗಳು ಮತ್ತು ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯ ಅನೇಕ ತಾಣಗಳಿಗೆ ನೆಲೆಯಾಗಿದೆ.
ಬೇಲೂರಿನ ಚೆನ್ನಕೇಶವ ದೇವಾಲಯ ಮತ್ತು ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಗಳ ವಾಸ್ತು ಶಿಲ್ಪ ಅದ್ಬುತಗಳು ನೋಡಲೇಬೇಕಾದಂತವುಗಳಾಗಿವೆ.
ಹಾಸನದಲ್ಲಿ ಊಟ ಮಾಡಿದ ನಂತರ ಧರ್ಮಸ್ಥಳದ ಕಡೆಗೆ ಪ್ರಯಾಣ ಬೆಳೆಸಬಹುದಾಗಿದ್ದು ಇದು ಸುಮಾರು 117 ಕಿ.ಮೀ ಅಂತರದಲ್ಲಿದೆ ಹಾಗೂ ಇದನ್ನು ತಲುಪಲು 2ಗಂಟೆಗಳು ಬೇಕಾಗುತ್ತದೆ.

ಧರ್ಮಸ್ಥಳ
ಧರ್ಮಸ್ಥಳ ದೇವಾಲಯವು 800 ವರ್ಷಗಳಿಗಿಂತಲೂ ಹಳೆಯದೆಂದು ಹೇಳಲಾಗುತ್ತದೆ. ಮತ್ತು
ಮಂಜುನಾಥೇಶ್ವರ ದೇವರನ್ನು ಪೂಜಿಸಲಾಗುತ್ತದೆ ಈ ದೇವಾಲಯದಲ್ಲಿ ಮುಖ್ಯ ದೇವರು ಶಿವ ಆದರೂ ಸಹ ಇಲ್ಲಿ ದೇವರನ್ನು ಪೂಜೆ ಮಾಡುವವರು ವಿಷ್ಣು ದೇವರನ್ನು ಆರಾಧಿಸುವ ವೈಷ್ಣವರಾಗಿರುತ್ತಾರೆ ಎನ್ನುವುದು ವಿಶೇಷವಾದ ಸಂಗತಿಯಾಗಿದೆ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಈ ದೇವಾಲಯದ ಆಡಳಿತವನ್ನು ಜೈನಧರ್ಮವನ್ನು ಅನುಸರಿಸುವವರು ನಡೆಸುತ್ತಿದ್ದು ಅವರನ್ನು ಹೆಗ್ಗಡೆಯವರು ಎನ್ನುತ್ತಾರೆ.

ಹೆಗ್ಗಡೆ
ಧರ್ಮಸ್ಥಳ ಎಂದರೆ ಧರ್ಮವಿರುವ ಸ್ಥಳವೆಂದು ಅರ್ಥೈಸುತ್ತದೆ ಧರ್ಮಸ್ಥಳ ಎಂದರೆ ಮಾನವೀಯತೆ ಮತ್ತು ನಂಬಿಕೆಯ ಸಹ ಅಸ್ತಿತ್ವವಾದಂತಹ ಧರ್ಮದ ನೆಲೆಯಾಗಿದೆ. ಧರ್ಮಸ್ಥಳದ ಹೆಗ್ಗಡೆಯವರ ಸ್ಥಾನವು ಅತ್ಯಂತ ವಿಶಿಷ್ಟವಾದದ್ದು ಎಂಬುದು ದೇಶದ ಇತರ ಅನೇಕ ಧಾರ್ಮಿಕ ಕೇಂದ್ರಗಳಿಗೆ ತಿಳಿದಿರಲಿಕ್ಕಿಲ್ಲ. ಸಂಪ್ರದಾಯದ ಪ್ರಕಾರ, ಸ್ವತಃ ಹೆಗ್ಗಡೆಯವರು ಮಂಜುನಾಥ ದೇವರನ್ನು ಪ್ರತಿನಿಧಿಸುತ್ತಾರೆ ಹಾಗೂ ಇವರು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಧಾರ್ಮಿಕ ಮತ್ತು ಸ್ಥಾಪಿತ ಮುಖ್ಯಸ್ಥರಾಗಿದ್ದಾರೆ. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಸ್ತುತ ಮುಖ್ಯಸ್ಥರಾಗಿದ್ದು, ಸಂಪ್ರದಾಯದಂತೆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.

ಚಂದ್ರನಾಥ ಸ್ವಾಮಿ ಬಸದಿ
ಶತಮಾನಗಳಷ್ಟು ಹಳೆಯದಾದ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಇನ್ನೊಂದು ಪ್ರಮುಖ ಆಕರ್ಷಣೆಯಾಗಿದ್ದು, ಈ ಪ್ರದೇಶವು ಸುಸಜ್ಜಿತವಾಗಿ ನಿರ್ವಹಣೆಗೊಳಪಟ್ಟಿದೆ ಮತ್ತು ದಕ್ಷಿಣ ಭಾರತದ ದಿಗಂಬರ ದೇವಾಲಯಗಳಲ್ಲಿ ಅತ್ಯಂತ ಹೆಚ್ಚಾಗಿ ಪೂಜ್ಯನೀಯ ಸ್ಥಳಗಳಲ್ಲೊಂದೆನಿಸಿದೆ. ನಂಬಿಕೆಯ ಪ್ರತೀಕವೆನಿಸಿರುವ ಧರ್ಮಸ್ಥಳದ ಹೆಸರು ಮತ್ತು ಅದರ ಪರಂಪರೆಯು ಅದರ ಹೆಸರಿಗೆ ಒಂದು ಯೋಗ್ಯತೆಯನ್ನು ತರುವಂತಹುದು.
ಮಂಜುನಾಥ ದೇವಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ರತ್ನಗಿರಿ ಬೆಟ್ಟದ ಮೇಲೆ ಬಾಹುಬಲಿ ಪ್ರತಿಮೆಯನ್ನು ಇರಿಸಲಾಗಿದ್ದು, ಇದು 39 ಅಡಿ ಎತ್ತರವಿದೆ ಈ ಶಿಲ್ಪವನ್ನು ಫೆಬ್ರವರಿ 1982 ರಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದರು.


Click it and Unblock the Notifications
















