ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ನಿಯಮಗಳು ಇರುತ್ತವೆ. ಅವುಗಳನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ದೇವಾಲಯಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದುದು ಎಂದು ಭಾವಿಸಲಾಗುತ್ತದೆ. ಪ್ರತಿಯೊಬ್ಬನು ಆ ನಿಯಮಗಳನ್ನು ಪಾಲಿಸಲೇಬೇಕು. ಲೇಖನದಲ್ಲಿ ತಿಳಿಸುತ್ತಿರುವ ದೇವಾಲಯ ಅತ್ಯಂತ ದೊಡ್ಡದಾದ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ. ಆ ದೇವಾಲಯಕ್ಕೆ ತೆರಳಿ ಸ್ವಾಮಿಯ ಭೇಟಿ ಮಾಡಿದ ನಂತರ ಯಾವುದೇ ಕಾರಣಕ್ಕೂ ಬೇರೆ ದೇವಾಲಯಗಳಿಗೆ ಹೋಗುವುದು ನಿಷಿದ್ಧ. ಅದಕ್ಕೆ ಕಾರಣವೂ ಕೂಡ ಇದೆ. ಸಾಮಾನ್ಯವಾಗಿ ಒಂದು ತಾಣಕ್ಕೆ ತೆರಳಿದ ನಂತರ ಅಲ್ಲಿನ ಎಲ್ಲಾ ಸುತ್ತಮುತ್ತಲ ಪ್ರದೇಶವನ್ನು ನೋಡಿಬಿಡಬೇಕು ಎಂದು ಅಂದುಕೊಳ್ಳುತ್ತೇವೆ.
ಅಸಲಿಗೆ ಆ ಮಹಿಮಾನ್ವಿತವಾದ ದೇವಾಲಯವು ಆಂಧ್ರ ಪ್ರದೇಶದಲ್ಲಿದ್ದು, ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಹಾಗಾದರೆ ಆ ತೀರ್ಥಕ್ಷೇತ್ರ ಯಾವುದು? ಆ ದೇವಾಲಯಕ್ಕೆ ತೆರಳಿ ಇತರ ದೇವಾಲಯಕ್ಕೆ ತೆರಳಿದರೆ ಏನಾಗುತ್ತದೆ? ಅದರ ಪರಿಣಾಮವೇನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರವನ್ನು ಲೇಖನದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ಪಡೆಯೋಣ.

1.ಎಲ್ಲಿದೆ ಆ ದೇವಾಲಯ?
ಆ ಶಕ್ತಿವಂತ ದೇವಾಲಯವೇ ಶ್ರೀ ಕಾಳಹಸ್ತಿ. ಈ ದೇವಾಲಯವು ಸ್ವರ್ಣಮುಖಿ ನದಿ ತೀರದಲ್ಲಿ ನೆಲೆಸಿರುವ ಸ್ವಾಮಿ ಶ್ರೀ ಕಾಳಹಸ್ತಿಶ್ವರನು. ಸ್ವಯಂ ಭೂ ಲಿಂಗ ಎಂದು ಕೆಲವರು ಇನ್ನೂ ಕೆಲವರು ಬ್ರಹ್ಮ ದೇವನು ಪ್ರತಿಷ್ಟಾಪಿಸಿದ ಲಿಂಗ ಎಂದು ಇನ್ನೂ ಕೆಲವರು ತಿಳಿಸುತ್ತಾರೆ. ಲಿಂಗದ ಮುಂಭಾಗದಲ್ಲಿರುವ ದೀಪವು ಶಿವಲಿಂಗದಿಂದ ಬರುವ ಗಾಳಿಯಿಂದ ಕದಲುತ್ತದೆಯಂತೆ. ಶ್ರೀ ಕಾಳಹಸ್ತಿಯನ್ನು ದಕ್ಷಿಣ ಕಾಶಿ ಎಂದು ಸಹ ಕರೆಯುತ್ತಾರೆ.

2. ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಶ್ರೀ ಕಾಳಹಸ್ತಿ ದೇವಾಲಯವು ರಾಹು ಹಾಗೂ ಕೇತು ದೋಷವನ್ನು ಪರಿಹರಿಸುವಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಪೂಜೆಗಳು ಮಾಡಿದರೆ ಸಕಲ ದೋಷ ನಿವಾರಣೆಯಾಗಿ ಸಂತಾನ ಭಾಗ್ಯ, ವಿವಾಹ, ಉದ್ಯೋಗ, ಮನೆಯಲ್ಲಿ ಶಾಂತಿ ನೆಲೆಸುತ್ತದೆ. ರಾಹು ಹಾಗೂ ಕೇತು ದೋಷ ಪರಿಹಾರ ಮಾಡಿಸಿಕೊಳ್ಳಲು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.

3. ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಆದಿ ಶಂಕರಾಚಾರ್ಯರು ಇಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದರು. ಈ ದೇವಾಲಯದ ಇತರ ಹೆಸರುಗಳೆಂದರೆ, ದಕ್ಷಿಣ ಕೈಲಾಸ, ಸತ್ಯ ಮಾಹಾ ಭಾಸ್ಕರಕ್ಷೇತ್ರ, ಸದಾಮುಕ್ತಿ ಕ್ಷೇತ್ರ ಇನ್ನೂ ಹಲವಾರು. ಶಿವ ರಾತ್ರಿಯ ದಿನದಂದು ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಗುತ್ತದೆ.

4. ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಶ್ರೀ ಕಾಳಹಸ್ತಿ ದೇವಾಲಯದ ನಿರ್ಮಾಣದಲ್ಲಿ ಒಂದು ವಿಶೇಷವಿದೆ. ಇಲ್ಲಿನ ವಿನಾಯಕ, ಶ್ರೀ ಕಾಳಹಸ್ತಿಶ್ವರ, ಜ್ಞಾನ ಪ್ರಸೂನಾಂಬ ದೇವತೆ, ದಕ್ಷಿಣ ಮೂರ್ತಿ ಒಬ್ಬೊಬ್ಬರು ಒಂದೊದು ದಿಕ್ಕಿಗೆ ಅಭಿಮುಖವಾಗಿದ್ದಾರೆ. ಈ ದೇವಾಲಯದ ದರ್ಶನದಿಂದಾಗಿ ಎಲ್ಲಾ ಕಾರ್ಯವು ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

5. ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಶ್ರೀಕಾಳಹಸ್ತಿ ಕ್ಷೇತ್ರದಲ್ಲಿ ಪವಿತ್ರವಾದ ಲಿಂಗವನ್ನು ದರ್ಶನ ಮಾಡಿಕೊಂಡರೆ ರಾಹು, ಕುಜ ಸರ್ವ ದೋಷಗಳು ಪರಿಹಾರವಾಗುತ್ತದೆ. ಹಾಗಾಗಿ ಇಲ್ಲಿ ದಿನನಿತ್ಯ ಸಾವಿರಾರು ಭಕ್ತರು ದಂಪತಿಗಳ ಸಮೇತ ತಮ್ಮ ದೋಷಗಳನ್ನು ಪರಿಹರಿಸಿಕೊಳ್ಳಲು ಭೇಟಿ ನೀಡುತ್ತಾರೆ.

6. ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಶ್ರೀ ಕಾಳಹಸ್ತಿಯಲ್ಲಿ ದರ್ಶನ ಮಾಡಿದ ನಂತರ ಅಥವಾ ರಾಹು, ಕೇತು ಶಾಂತಿ ಮಾಡಿದ ನಂತರ ನೇರವಾಗಿ ಮನೆಗೆ ತೆರಳಬೇಕು. ಇಲ್ಲವಾದರೆ ಅನಿಷ್ಟ ಸಂಭವಿಸುತ್ತದೆ ಎಂದು ನಂಬಲಾಗಿದೆ. ಇದಕ್ಕೆ ಕಾರಣ ದೋಷ ಪರಿಹಾರವಾಗಬೇಕಾದರೆ ಶ್ರೀ ಕಾಳಹಸ್ತಿಯಲ್ಲಿ ಪಾಪವನ್ನು ಬಿಟ್ಟು ಹೋಗುವುದೇ ಆಗಿದೆ. ತಿರುಗಿ ಯಾವುದೇ ದೇವಾಲಯಕ್ಕೂ ತೆರಳಬಾರದು ಎಂದು ಹೇಳುತ್ತಾರೆ.

7. ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಗ್ರಹಣಗಳು, ಶನಿ ಭಾದೆಗಳು ಪರಮಶಿವನಿಗೆ ಇರುವುದಿಲ್ಲ ಆದರೆ ಇತರೆ ದೇವತೆಗಳಿಗೆ ಈ ಎಲ್ಲಾ ದೋಷಗಳು ಇರುವುದರಿಂದ ಶ್ರೀ ಕಾಳಹಸ್ತಿಯಿಂದ ತೆರಳಬಾರದು ಎಂದು ಹೇಳುತ್ತಾರೆ. ಇನ್ನು ಎಲ್ಲಾ ದೇವತೆಗಳಿಗೂ ಗ್ರಹಣದ ತೊಂದರೆಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕೆ ಮತ್ತೊಂದು ಆಧಾರವೆನೆಂದರೆ ಚಂದ್ರ ಗ್ರಹಣ.

8. ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು....ಏಕೆ?
ಏಕೆಂದರೆ ಗ್ರಹಣದ ಸಮಯದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಎಲ್ಲಾ ಪುಣ್ಯಕ್ಷೇತ್ರಗಳನ್ನು ಮುಚ್ಚಿ ಹಾಕುತ್ತಾರೆ. ಗ್ರಹಣ ಸಮಾಪ್ತಿಯಾದ ನಂತರ ಪ್ರೋಕ್‍ಷಣೆ ಮಾಡಿ ದೇವಾಲಯವನ್ನು ತೆರೆಯುತ್ತಾರೆ. ಆದರೆ ಶ್ರೀ ಕಾಳ ಹಸ್ತಿಯಲ್ಲಿ ಮಾತ್ರ ಗ್ರಹಣದ ಸಮಯದಲ್ಲಿ ಬಾಗಿಲನ್ನು ತೆರೆದಿರುತ್ತಾರೆ. ಆ ದಿನ ಪ್ರತ್ಯೇಕವಾದ ಪೂಜೆಗಳನ್ನು ಮಾಡಲಾಗುತ್ತದೆ. ಹಾಗಾಗಿಯೇ ಇಲ್ಲಿ ದರ್ಶನ ಮಾಡಿದ ನಂತರ ನೇರವಾಗಿ ಮನೆಗೆ ತೆರಳಬೇಕಾಗುತ್ತದೆ.

9. ತಲುಪುವ ಬಗೆ ಹೇಗೆ?
ಶ್ರೀ ಕಾಳಹಸ್ತಿಗೆ ತಿರುಪತಿಯಿಂದ 30 ಕಿ,ಮೀ ದೂರದಲ್ಲಿರುವ ಈ ದೇವಾಲಯಕ್ಕೆ 5 ನಿಮಿಷಕ್ಕೆ ಒಮ್ಮೆ ಬಸ್‍ಗಳ ಸೌಕರ್ಯವಿದೆ. ರೈಲ್ವೆ ಮೂಲಕ ಸಾಗುವವರಿಗೆ ಬೆಂಗಳೂರಿನಿಂದ ತಿರುಪತಿಗೆ ನೇರವಾದ ತಿರುಪತಿ ಎಕ್ಸ್‍ಪ್ರೆಸ್ ಇದ್ದು, ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಶ್ರೀ ಕಾಳಹಸ್ತಿ ದೇವಾಲಯಕ್ಕೆ ತೆರಳಬಹುದಾಗಿದೆ.


Click it and Unblock the Notifications
















