ತಮಿಳುನಾಡಿನಲ್ಲಿನ ಕುಂಭಕೋಣಕ್ಕೆ "ಟೆಂಪಲ್ ಸಿಟಿ" ಎಂದು ಕರೆಯಯುತ್ತಾರೆ. ಇಲ್ಲಿರುವ ದೇವಾಲಯಗಳು ಬೇರೆ ಎಲ್ಲೂ ಇಲ್ಲ ಎಂದೇ ಹೇಳಬಹುದು. ಇನ್ನು ಪ್ರತಿ ದೇವಾಲಯವು ತನ್ನದೇ ಆದ ಪ್ರಾಧನ್ಯತೆ ಹೊಂದಿದೆ. ಆ ದೇವಾಲಯಗಳಿಗೆ ಸಂಬಂಧಿಸಿದ ಕಥೆಗಳು ಕೆಲವು ಅತ್ಯಂತ ಪವಿತ್ರತೆಯನ್ನು ಹೊಂದಿವೆ. ಹೀಗಾಗಿ ಸ್ಥಳೀಯರು ಆ ಪುರಾಣ ಕಥೆಗಳನ್ನು ನಂಬುತ್ತಾ ಅಲ್ಲಿನ ದೈವವನ್ನು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಪೂಜಿಸುತ್ತಾರೆ. ಅಷ್ಟೇ ಅಲ್ಲದೇ ಹಾಗೆ ಪೂಜಿಸುವುದರಿಂದ ತಮ್ಮ ಜೀವನದಲ್ಲಿ ಉತ್ತಮವಾದ ಬದಲಾವಣೆಯಾಗಿವೆ ಎಂದು ಹೇಳುತ್ತಾರೆ.
ಈ ದೇವಾಲಯವನ್ನು ಭಕ್ತಿಯಿಂದ ದಂಪತಿಗಳು ಶುಭ್ರಗೊಳಿಸಿದರೆ ದೂರವಾಗಿರುವ ದಂಪತಿಗಳು ಕೂಡ ಯಾವುದೇ ಘರ್ಷಣೆಗಳು ಇಲ್ಲದೇ ನೂರಾರು ವರ್ಷ ಸುಖವಾಗಿ ಜೀವನವನ್ನು ಸಾಗಿಸುತ್ತಾರೆ ಎಂದು ನಂಬಲಾಗಿದೆ. ಮುಖ್ಯವಾಗಿ, ತ್ವರಿತವಾಗಿ ವಿವಾಹವಾಗಬೇಕು, ಉತ್ತಮವಾದ ವರ ಅಥವಾ ವಧು ದೊರೆಯಬೇಕು ಎಂದು ಆಸೆ ಇದ್ದವರು ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಬಹುದು. ಇಲ್ಲಿನ ಮಹಿಮಾನ್ವಿತವಾದ ದೇವರು ಭಕ್ತರ ಆಸೆಗಳನ್ನು ಈಡೇರಿಸುತ್ತಾನಂನತೆ.
ಇಷ್ಟೊಂದು ಶಕ್ತಿವಂತ ದೇವಾಲಯಕ್ಕೆ ದೇಶದ ಅನೇಕ ಪ್ರದೇಶದಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಪಾರ್ವತಿ ದೇವಿಯನ್ನು ಆರಾಧಿಸಿದರೆ ಅನೇಕ ಪ್ರಯೋಜನಗಳಾಗುತ್ತವೆ ಎಂಬುದು ಕೇವಲ ಭಕ್ತರ ನಂಬಿಕೆಯೇ ಅಲ್ಲದೇ ಪೂಜಾರಿಗಳ ನಂಬಿಕೆ ಕೂಡ ಆಗಿದೆ.
ಈ ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯವಾಗಿದ್ದು, ಸಂಕ್ಷೀಪ್ತವಾಗಿ ಈ ದೇವಾಲಯದ ಬಗ್ಗೆ ಮಾಹಿತಿ ತಿಳಿಯೋಣ.

1.ಸ್ಥಳೀಯ ಪುರಾಣ
PC:YOUTUBE
ಪಾರ್ವತಿದೇವಿ ಆ ಪರಮಶಿವನನ್ನು ಪ್ರಸನ್ನಗೊಳಿಸುವುದಕ್ಕೆ ಇಲ್ಲಿ ಆಕೆಯು ಘೋರವಾದ ತಪಸ್ಸನ್ನು ಆಚರಿಸುತ್ತಾಳೆ. ಆಕೆ ತಪಸ್ಸು ಆ ಪರಮೇಶ್ವರನಿಗೆ ಮುಟ್ಟಲಿಲ್ಲ. ಹೀಗಾಗಿ ಆ ಪರಮೇಶ್ವರನು ಆಕೆಗೆ ಕರುಣಿಸಲಿಲ್ಲ. ಇದರಿಂದ ಕೋಪಗೊಂಡ ಪಾರ್ವತಿ ದೇವಿ ತನ್ನ ತಪಸ್ಸನ್ನು ತೀವ್ರಗೊಳಿಸಿದಳು. ಕೇವಲ ಒಂದೇ ಕಾಲಿನಲ್ಲಿ ನಿಂತು ಸ್ವಾಮಿಯನ್ನು ನೆನೆದು ತಪಸ್ಸನ್ನು ಆಚರಿಸಿದಳು. ತದನಂತರ ಆಹಾರವನ್ನು ಕೂಡ ತ್ಯಜಿಸಿದಳು.

2.ಪ್ರತ್ಯಕ್ಷನಾಗುವುದಿಲ್ಲ
PC:YOUTUBE
ಪ್ರಸನ್ನನಾಗಿದ್ದರೂ ಕೂಡ ಪ್ರತ್ಯಕ್ಷನಾಗುವುದಿಲ್ಲ. ಪಾರ್ವತಿ ದೇವಿ ಮಾತ್ರ ಅಲುಗಾಡದಂತೆ ಹಾಗೆಯೇ ಇರುತ್ತಾಳೆ. ಕೊನೆಗೆ ಶಿವನು ತೇಜೋಮಯವಾದ ಅಗ್ನಿಯ ರೂಪದಲ್ಲಿ ದರ್ಶನ ನೀಡುತ್ತಾನೆ. ಶಿವನ ಆ ರೂಪವನ್ನು ಕಂಡ ಪಾರ್ವತಿ ಕೊಂಚವು ಕೂಡ ಹೆದರದೆ ಆ ಅಗ್ನಿಯನ್ನೇ ತಬ್ಬಿಕೊಂಡು ಭಾವುಕಳಾಗುತ್ತಾಳೆ.

3.ವಿವಾಹ
PC:YOUTUBE
ಪಾರ್ವತಿಯ ಪ್ರೇಮಕ್ಕೆ ಮಣಿದ ಮಹಾಶಿವನು ತನ್ನ ನೈಜ ರೂಪದಲ್ಲಿ ಪ್ರತ್ಯಕ್ಷಗೊಂಡು ಪಾರ್ವತಿ ದೇವಿಯನ್ನು ವಿವಾಹ ಮಾಡಿಕೊಳ್ಳುತ್ತಾನೆ. ಈ ರೀತಿಯಾಗಿ ಆದಿ ಶಕ್ತಿಯಾದ ಪಾರ್ವತಿ ದೇವಿಯು ತಾನು ಇಷ್ಟಪಟ್ಟಿದ್ದ ಶಿವನನ್ನೇ ಪತಿಯಾಗಿ ಪಡೆದುಕೊಳ್ಳುತ್ತಾಳೆ. ಹಾಗಾಗಿಯೇ ಈ ದೇವಾಲಯಕ್ಕೆ ಭೇಟಿ ನೀಡಿ ಶ್ರದ್ಧೆ, ಭಕ್ತಿಯಿಂದ ಶಿವನನ್ನು ಆರಾಧಿಸಿದವರಿಗೆ ತಮ್ಮ ಇಷ್ಟ ಬಾಳಸಂಗಾತಿಯನ್ನು ನೀಡುತ್ತಾನೆ.

4.ತಬ್ಬಿಕೊಂಡಿರುವಂತೆ
PC:YOUTUBE
ಇಲ್ಲಿನ ಶಿವಲಿಂಗವು ಕಥೆಗೆ ಪೂರಕವಾಗಿರುವಂತೆಯೇ ಕಂಡು ಬರುತ್ತದೆ. ಅಂದರೆ ಇಲ್ಲಿರುವ ಶಿವಲಿಂಗನನ್ನು ಪಾರ್ವತಿ ದೇವಿಯು ಗಟ್ಟಿಯಾಗಿ ತಬ್ಬಿಕೊಂಡಿರುವಂತೆ ಕಾಣುತ್ತದೆ. ಹಾಗಾಗಿಯೇ ಈ ದೇವಾಲಯವು ಸಾಕಷ್ಟು ಮಹತ್ವವನ್ನು ಪಡೆದಿದೆ ಎಂದೇ ಹೇಳಬಹುದಾಗಿದೆ.

5.ಬಾಳಸಂಗಾತಿ
PC:YOUTUBE
ಈ ದೇವಾಲಯದ ವಿಶೇಷವೆನೆಂದರೆ ಇಲ್ಲಿನ ಮಾಹಿಮಾನ್ವಿತವಾದ ಶಿವನು ತಾವು ಬಯಸಿದ ಜೀವನ ಸಂಗಾತಿಯನ್ನು ನೀಡುವುದು. ಹೀಗೆ ಸ್ವಾಮಿಯಿಂದ ತಮ್ಮ ಬಾಳಸಂಗಾತಿಯನ್ನು ಪಡೆದ ಅದೆಷ್ಟು ಉದಾಹರಣೆಗಳು ಇಲ್ಲಿವೆ. ತಾವು ಅಂದುಕೊಂಡಿರುವುದು ಆಗುತ್ತದೆ ಎಂಬ ವಿಶ್ವಾಸದಿಂದ ನೂರಾರು ಭಕ್ತರು ಈ ಸ್ವಾಮಿಯನ್ನು ಆರಾಧಿಸಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

6.ಭಕ್ತಿ, ಶ್ರದ್ಧೆ ಮುಖ್ಯ
PC:YOUTUBE
ಇಲ್ಲಿಗೆ ಭೇಟಿ ನೀಡುವ ಭಕ್ತರು ತಮ್ಮ ಜೀವನಸಂಗಾತಿಯನ್ನು ಪಡೆಯಲು ಮುಖ್ಯವಾಗಿ ಮಾಡಬೇಕಾದುದು ಶಿವನನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆರಾಧಿಸುವುದು. ಹೀಗೆ ಪ್ರಾರ್ಥನೆ ಮಾಡಿದವರು ಮಾತ್ರ ತಮ್ಮ ಇಷ್ಟಾರ್ಥಗಳು ನೇರವೇರುತ್ತದೆ ಎಂದು ಅಲ್ಲಿನ ಭಕ್ತರ ನಂಬಿಕೆಯಗಿದೆ.

7.ಎಲ್ಲಿದೆ ಈ ಮಾಹಿಮಾನ್ವಿತವಾದ ದೇವಾಲಯ
PC:YOUTUBE
ಅಷ್ಟಕ್ಕೂ ಈ ದೇವಾಲಯವಿರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ? ಈ ದೇವಾಲಯವಿರುವುದು ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಿಂದ ಸುಮಾರು 7 ಕಿ. ಮೀ ದೂರದಲ್ಲಿರುವ ತಿರುಶಕ್ತಿಮಟ್ಟಂ ಎಂಬ ಹಳ್ಳಿಯಲ್ಲಿ. ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯವಾಗಿದೆ.
ಈ ದೇವಾಲಯಕ್ಕೆ ಸಮೀಪದವಾದ ರೈಲ್ವೆ ನಿಲ್ದಾಣವೆಂದರೆ ಅದು ತಮಿಳು ನಾಡು ರಾಜ್ಯದ ಕುಂಭಕೋಣಂ ರೈಲ್ವೆ ನಿಲ್ದಾಣವಾಗಿದೆ. ಈ ದೇವಾಲಯಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ತಂಜಾವೂರ್ ವಿಮನ ನಿಲ್ದಾಣವೇ ಆಗಿದೆ.


Click it and Unblock the Notifications
















