Search
  • Follow NativePlanet
Share
» »ಕಾಣಿಪಾಕಂ ದೇವಾಲಯದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

ಕಾಣಿಪಾಕಂ ದೇವಾಲಯದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ದೇಶದಲ್ಲಿ ವಿನಾಯಕನಿಗೆ ಮುಡಿಪಾದ ದೇವಾಲಯಗಳು ಅಧಿಕ ಸಂಖ್ಯೆಯಲ್ಲಿದೆ. ವಿನಾಯಕನಿಗೆ ಗಣಪತಿ, ಗಜಮುಖ, ವಿಘ್ನವಿನಾಶಕ, ವಿಘ್ನೇಶ್ವರ, ಗಣೇಶ ಎಂಬ ಹಲವಾರು ಹೆಸರುಗಳಿಂದ ಕರೆಯುತ್ತೇವೆ. ಚಿಕ್ಕವರಿಂದ ದೊಡ್ಡವರವರೆವಿಗೂ ಗಣಪತಿ ಎಂದರೆ ಎಲ್ಲರ ಅಚ್

ನಮ್ಮ ದೇಶದಲ್ಲಿ ವಿನಾಯಕನಿಗೆ ಮುಡಿಪಾದ ದೇವಾಲಯಗಳು ಅಧಿಕ ಸಂಖ್ಯೆಯಲ್ಲಿದೆ. ವಿನಾಯಕನಿಗೆ ಗಣಪತಿ, ಗಜಮುಖ, ವಿಘ್ನವಿನಾಶಕ, ವಿಘ್ನೇಶ್ವರ, ಗಣೇಶ ಎಂಬ ಹಲವಾರು ಹೆಸರುಗಳಿಂದ ಕರೆಯುತ್ತೇವೆ. ಚಿಕ್ಕವರಿಂದ ದೊಡ್ಡವರವರೆವಿಗೂ ಗಣಪತಿ ಎಂದರೆ ಎಲ್ಲರ ಅಚ್ಚು-ಮೆಚ್ಚಿನ ದೇವನಾಗಿದ್ದಾನೆ.

ಇತನಿಗೆ ಸಂಬಂಧಿಸಿದಂತೆ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಆ ದೇವಾಲಯವೇ ಕಾಣಿಪಾಕಂ. ಆ ದೇವಾಲಯದ ಸ್ಥಳ ಪುರಾಣದ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ ಎಂದೇ ಹೇಳಬಹುದು. ಇಲ್ಲಿನ ಗಣಪತಿಯು ಸ್ವಯಂ ಭೂವಾಗಿದ್ದು, ಆತನು ಹೇಗೆ ದೊರಕಿದನು? ಆತನ ಮಹಿಮೆ ಏನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1.ಎಲ್ಲಿದೆ ಕಾಣಿಪಾಕಂ?

1.ಎಲ್ಲಿದೆ ಕಾಣಿಪಾಕಂ?

ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯವು ಒಂದು ಹಿಂದೂ ದೇವಾಲಯವಾಗಿದ್ದು, ಇದೊಂದು ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ. ಈ ಶಕ್ತಿಯುತ ದೇವಾಲಯವು ಸ್ವಯಂ ಭೂ ಆಗಿದ್ದು, ಆಂಧ್ರ ಪ್ರದೇಶದ ಚಿತ್ತೂರಿನ ಕಾಣಿಪಾಕಂನಲ್ಲಿದೆ. ಇದು ಚಿತ್ತೂರು ಜಿಲ್ಲೆಯ ಇರಾಲಾ ಮಂಡಲದ ಕಾಣಿಪಾಕಂನಲ್ಲಿದೆ.

2.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

2.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಈ ದೇವಾಲಯಕ್ಕೆ ಒಂದು ಅದ್ಭುತವಾದ ಸ್ಥಳ ಪುರಾಣವಿದ್ದು, ಇದನ್ನು 11 ನೇ ಶತಮಾನದಲ್ಲಿ ಚೋಳರ ರಾಜನಾದ ಒಂದನೇ ಕುಲ ಉತ್ತೊಂಗ ನಿರ್ಮಾಣ ಮಾಡಿದನು. ಈ ದೇವಾಲಯದಲ್ಲಿನ ವಿನಾಯಕನು ಬೆಳೆಯುತ್ತಿರುವುದು ಮತ್ತೊಂದು ಆಶ್ಚರ್ಯಕರವಾದ ಘಟನೆಯೇ ಆಗಿದೆ.

3.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

3.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಏಕೆಂದರೆ ಹಲವಾರು ವರ್ಷಗಳ ಹಿಂದೆ ಒಬ್ಬ ಭಕ್ತೆಯು ವಿನಾಯಕನಿಗೆ ಬೆಳ್ಳಿಯ ಕವಚಗಳನ್ನು ದೇವರಿಗೆ ಅರ್ಪಿಸಿದಳು. ಆದರೆ ಕೆಲವು ವರ್ಷಗಳ ನಂತರ ಕವಚವು ವಿನಾಯಕನಿಗೆ ಆಗದೇ ಆಯಿತು. ಹೀಗೆ ವಿನಾಯಕನು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದ್ದಾನೆ.

4.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

4.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಭಕ್ತರ ಕೋರಿಕೆಗಳನ್ನು ತೀರಿಸಲು ಸ್ವಯಂ ಭೂವಾಗಿ ನೆಲೆಸಿರುವುದಾಗಿ ಅಲ್ಲಿನ ಸ್ಥಳ ಪುರಾಣವು ಹೇಳುತ್ತದೆ. ಇಲ್ಲಿ ಗಣಪತಿಯು ಹೇಗೆ ನೆಲೆಸಿದನು? ಆ ಗ್ರಾಮಕ್ಕೆ ಆ ಹೆಸರು ಬರಲು ಕಾರಣವಾದರೂ ಏನು? ಎಂಬ ವಿಷಯಕ್ಕೆ ಉತ್ತರ ಪಡೆಯಿರಿ.

5.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

5.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಈ ಪುಣ್ಯಕ್ಷೇತ್ರವು ಬಹುದಾ ನದಿ ತೀರದಲ್ಲಿದೆ. ಈ ಕ್ಷೇತ್ರದಲ್ಲಿ ವಿನಾಯಕನು ಸ್ವಯಂ ಭೂವಾಗಿ ನೆಲೆಸಿದ್ದಾನೆ ಎಂದು ಅಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಅದೇನೆಂದರೆ ಪೂರ್ವದಲ್ಲಿ ಈ ಗ್ರಾಮದಲ್ಲಿ 3 ಸಹೋದರರು ಇದ್ದರು. ಅವರಲ್ಲಿ ಒಬ್ಬನು ಮೂಗನಾಗಿದ್ದನು.

6.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

6.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಮತ್ತೊಬ್ಬ ಕುರುಡ, ಇನ್ನೊಬ್ಬ ಕಿವುಡನಾಗಿದ್ದನು. ಇವರು ತಮ್ಮ ದೊಡ್ಡವರಿಂದ ಪಡೆದ ಭೂಮಿಯನ್ನು ಸಾಗುವಳಿ ಮಾಡುವುದಕ್ಕೆ ಮುಂದಾದರು. ಅವರ ಬೆಳೆಗಳು ಉತ್ತಮವಾಗಿ ಬೆಳೆಯಲು ನೀರು ಅತ್ಯವಶ್ಯಕವಾಗಿತ್ತು. ಹಾಗಾಗಿ ಸಮೀಪದಲ್ಲಿಯೇ ಇರುವ ಬಾವಿಯೇ ಅವರಿಗೆ ಆಧಾರವಾಗಿತ್ತು.

7.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

7.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಆ ಬಾವಿಯಲ್ಲಿನ ನೀರು ತೆಗೆದು ತಮ್ಮ ಕೃಷಿಗೆ ಬಳಸುತ್ತಿದ್ದರು. ಹೀಗೆ ಇರುವಾಗ ಒಂದು ದಿನ ಬಾವಿಯಲ್ಲಿರುವ ನೀರೇಲ್ಲಾ ಇಂಗಿ ಹೋಯಿತಂತೆ. ಆ ಬಾವಿಯನ್ನು ಇನ್ನು ಒಳಗೆ ಅಗೆದರೆ ಮತ್ತಷ್ಟು ನೀರು ಸಿಗುತ್ತದೆ ಎಂದು ಅಂದುಕೊಂಡು ಅಗೆಯಲು ಮುಂದಾದರು.

8.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

8.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಸ್ವಲ್ಪ ಅಗೆದ ನಂತರವೇ ನೀರು ಚಿಮ್ಮಲು ಪ್ರಾರಂಭವಾಯಿತಂತೆ. ಇನ್ನು ಒಳಗೆ ಅಗೆದರೆ ಮತ್ತಷ್ಟು ನೀರು ಬರಬಹುದು ಎಂದು ಮತ್ತಷ್ಟು ಒಳಗೆ ಅಗೆದರು. ಆ ಸಮಯದಲ್ಲಿ ಅವರು ಅಗೆಯಲು ಹಿಡಿದುಕೊಂಡಿದ್ದ ಕಬ್ಬಿಣದ ಕೋಲಿಗೆ ರಕ್ತದ ಕಲೆಯಾಗಿತ್ತಂತೆ.

9.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

9.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ತತ್‍ಕ್ಷಣ ಬಾವಿಯ ನೀರೆಲ್ಲಾ ಕೆಂಪು ಬಣ್ಣಕ್ಕೆ ತಿರುಗಿತಂತೆ. ಆ ನೀರು ಆ ಸಹೋದರರಿಗೆ ಚಿಮ್ಮಿ, ಅವರಿಗಿದ್ದ ಶಾರೀರಿಕ ಲೋಪಗಳೆಲ್ಲಾ ಹೋಗಿ ಪರಿಪೂರ್ಣ ಆರೋಗ್ಯವಂತರಾದರಂತೆ. ಈ ವಿಷಯವನ್ನು ತಿಳಿದುಕೊಂಡ ಗ್ರಾಮಸ್ಥರು ಅಲ್ಲಿಗೆ ಬಂದು ಬಾವಿಯನ್ನು ಮತ್ತಷು ಒಳಹೊಕ್ಕಿ ಮತ್ತಷ್ಟು ನೀರು ಪಡೆದು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಅಂದುಕೊಂಡರಂತೆ.

10.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

10.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಬಾವಿಯನ್ನು ಮತ್ತಷ್ಟು ಅಗೆಯಲು ಪ್ರಾರಂಭ ಮಾಡಿದಾಗ ಅಲ್ಲಿ ವರಸಿದ್ಧಿ ವಿನಾಯಕನ ವಿಗ್ರಹವು ಮೇಲೆ ಬಂದು, ಸ್ವಯಂ ಭೂವಾಗಿ ನೆಲೆಸಿದನಂತೆ. ಈ ಅದ್ಭುತವನ್ನು ನೋಡಿದವರೆಲ್ಲಾ ಸಂಭ್ರಮ ಆಶ್ಚರ್ಯದಿಂದ ಗಣಪತಿಯನ್ನು ಭಕ್ತಿಯಿಂದ ಆರಾಧಿಸಿದರಂತೆ.

11.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

11.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಈ ವಿಷಯವನ್ನು ತಿಳಿದುಕೊಂಡ ಸುತ್ತಮುತ್ತಲ ಪ್ರದೇಶದವರು ತಂಡೋಪ ತಂಡವಾಗಿ ಬಂದು, ಸ್ವಾಮಿಗೆ ಕುಬ್ಬರಿಕಾಯಿಯನ್ನು ಒಡೆದು ಆ ನೀರಿನಿಂದ ಸ್ವಾಮಿಗೆ ಅಭಿಷೇಕವನ್ನು ಮಾಡತೊಡಗಿದರಂತೆ. ಹಾಗೆ ಅಭಿಷೇಕ ಮಾಡಿದ ನೀರೆಲ್ಲಾ ಕಾಲುವೆಯಾಗಿ ಪ್ರವಹಿಸಿ, ಅಲ್ಲಿ ಒಂದು ಪುಷ್ಕರಣಿಯಾಗಿ ಮಾರ್ಪಾಟಾಯಿತಂತೆ.

12.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

12.ಕಾಣಿಪಾಕಂ ದೇವಾಲಯದ ಸ್ಥಳ ಪುರಾಣ

ಆ ಪ್ರದೇಶದಲ್ಲಿ ಹೆಚ್ಚಾಗಿ ತಮಿಳರು ಇದ್ದ ಕಾರಣದಿಂದ ಈ ಪುಷ್ಕರಣಿಯನ್ನು ಕಾಣಿಪರಕಂ ಎಂದು ಕರೆಯುತ್ತಿದ್ದರು. ಕಾಣಿ ಎಂದರೆ ಭೂಮಿ ಎಂದೂ, ಪರಕಂ ಎಂದರೆ ಪ್ರವಹಿಸಿದ ನೀರು ಎಂದೂ, ಕಾಲಕ್ರಮೇಣ ಕಾಣಿಪಾಕಂ ಎಂದು ಹೆಸರು ಮಾರ್ಪಾಟಾಯಿತು. ಗಣಪತಿಯು ವರ್ಷದಿಂದ ವರ್ಷಕ್ಕೆ ದೊಡ್ಡವನಾಗುತ್ತಾ ಇರುವುದರಿಂದ ಬಾವಿಯಲ್ಲಿನ ನೀರೆಲ್ಲಾ ಈಚೆಗೆ ಬಿದ್ದು, ಪುಷ್ಕಕರಣಿಯಲ್ಲಿ ಸೇರುತ್ತದೆ.

13.ಹೇಗೆ ಸಾಗಬೇಕು?

13.ಹೇಗೆ ಸಾಗಬೇಕು?

ರಸ್ತೆ ಮಾರ್ಗ ಮೂಲಕ
ತಿರುಪತಿಯಿಂದ ಕಾಣಿಪಾಕಂಗೆ ಸುಲಭವಾಗಿ ತೆರಳಬಹುದಾಗಿದೆ. ತಿರುಪತಿಗೆ ತೆರಳಿದ ನಂತರ ಒಮ್ಮೆ ಗಣಪತಿಯ ಮಹಿಮಾನ್ವತವಾದ ದೇವಾಲಯಕ್ಕೂ ಕೂಡ ತೆರಳಿ ಬನ್ನಿ. ತಿರುಪತಿಯಿಂದ ಕಾಣಿಪಾಕಂಗೆ ಸುಮಾರು 70 ಕಿ.ಮೀ ದೂರದಲ್ಲಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಿಂದ ಕೇವಲ 12 ಕಿ.ಮೀ ದೂರದಲ್ಲಿದೆ.

14.ರೈಲ್ವೆ ಮಾರ್ಗ ಮೂಲಕ

14.ರೈಲ್ವೆ ಮಾರ್ಗ ಮೂಲಕ

ತಿರುಪತಿಯಿಂದ ಚಿತ್ತೂರಿಗೆ ನೇರವಾದ ರೈಲುಗಳ ಸಂಪರ್ಕ ಇರುವುದರಿಂದ ಸುಲಭವಾಗಿ ತಲುಪಬಹುದಾಗಿದೆ. ಈ ಶಕ್ತಿಯುತವಾದ ದೇವಾಲಯವು ಬೆಳಗ್ಗೆ 4 ಗಂಟೆಯಿಂದ ರಾತ್ರಿ 9:30 ರವರೆವಿಗೂ ಭಕ್ತರಿಗೆ ದರ್ಶನವನ್ನು ನೀಡುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+