Search
  • Follow NativePlanet
Share
» »ಅದಿತಿ ರಾವ್ ಹೈದರಿ ಅವರಂತೆ ನಿಮ್ಮ ಲಗೇಜ್ ವಿಮಾನ ನಿಲ್ದಾಣದಲ್ಲಿ ಎಂದಿಗೂ ಮಿಸ್‌ ಆಗೊಲ್ಲ…ಜಸ್ಟ್‌ ಹೀಗೆ ಮಾಡಿ

ಅದಿತಿ ರಾವ್ ಹೈದರಿ ಅವರಂತೆ ನಿಮ್ಮ ಲಗೇಜ್ ವಿಮಾನ ನಿಲ್ದಾಣದಲ್ಲಿ ಎಂದಿಗೂ ಮಿಸ್‌ ಆಗೊಲ್ಲ…ಜಸ್ಟ್‌ ಹೀಗೆ ಮಾಡಿ

'ಹಿರಾಮಂಡಿ' ಖ್ಯಾತಿಯ ಅದಿತಿ ರಾವ್ ಹೈದರಿ ಇತ್ತೀಚೆಗೆ ಲಂಡನ್‌ಗೆ ಹೋಗಿದ್ದರು. ಅಲ್ಲಿ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ತಮ್ಮ ಲಗೇಜ್‌ ಪಡೆಯಲು ಗಂಟೆಗಟ್ಟಲೇ ಕಾಯಬೇಕಾಯಿತು. ಹಲವಾರು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಉಳಿಯಬೇಕಾಯಿತು. ಈ ಸಮಯದಲ್ಲಿ ಅದಿತಿ ಸೋಶಿಯಲ್‌ ಮೀಡಿಯಾದಲ್ಲಿ ಅನೇಕ ಪೋಸ್ಟ್‌ಗಳನ್ನು ಮಾಡಿದರು ಮತ್ತು ಬ್ರಿಟಿಷ್ ಏರ್‌ವೇಸ್‌ಗೂ ತಿಳಿಸಿದರು. ಕೊನೆಗೆ ವಿಮಾನ ನಿಲ್ದಾಣದಲ್ಲಿ 5 ಗಂಟೆಗಳ ತಾಸು ಕಾದ ನಂತರ ಬ್ಯಾಗ್ ಇಲ್ಲದೆ ವಿಮಾನ ನಿಲ್ದಾಣದಿಂದ ಹೊರಟರು.

ಹೆಚ್ಚು ಕಡಿಮೆ ಸುಮಾರು 45 ಗಂಟೆಗಳ ನಂತರ ಆ ಲಗೇಜ್ ವಾಪಾಸ್‌ ಪಡೆದರು. ಈ ಮಾಹಿತಿಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ಸಲಹೆ, ಪರಿಹಾರದ ಕುರಿತು ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿತ್ತು. ಬಹುಶಃ ನೀವು ಈ ತರಹ ಟಿಪ್ಸ್ ಫಾಲೋ ಮಾಡಿದರೆ ನಿಮ್ಮ ಲಗೇಜ್ ವಿಮಾನ ನಿಲ್ದಾಣದಲ್ಲಿ ಎಂದಿಗೂ ಮಿಸ್‌ ಆಗುವುದಿಲ್ಲ. ಹಾಗಾದರೆ ಲಗೇಜ್ ಕಳೆದುಹೋದರೆ ಅಥವಾ ಮಿಸ್‌ ಆದರೆ ನೀವು ಏನು ಮಾಡಬೇಕು?, ನೋಡೋಣ ಬನ್ನಿ... ‌

ಆಗಾಗ್ಗೆ ಈ ಸಮಸ್ಯೆಗಳನ್ನು ಎದುರಿಸುವ ಪ್ರಯಾಣಿಕರು

ವಿಮಾನ ನಿಲ್ದಾಣದಲ್ಲಿ ಲಗೇಜ್ ಮಿಸ್‌ ಆಗುವುದು ತುಂಬಾ ಸಾಮಾನ್ಯವಾಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಒಂದು ವೇಳೆ ಸಾಮಾನು ಸರಂಜಾಮು ಕಳೆದುಕೊಂಡರೆ ಯಾವುದೇ ಪರಿಹಾರ ನೀಡದ ಕಾರಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಸಾಮಾನುಗಳು ಕಳೆದುಹೋದರೆ ಅದನ್ನು ಹುಡುಕುವಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಅಷ್ಟೇ ಅಲ್ಲ, ಅನೇಕ ಬಾರಿ ಮಿಸ್‌ ಆದ ಬ್ಯಾಗ್‌ಗಳು ಸಿಕ್ಕಿಲ್ಲ. ಇಂತಹ ಸಮಸ್ಯೆ ಎದುರಾದಾಗ ವಿಮಾನಯಾನ ಸಂಸ್ಥೆಗಳ ಕಸ್ಟಮರ್‌ ಕೇರ್‌ ಸಹ ನಿಖರವಾದ ಉತ್ತರವನ್ನು ಕೊಡುವುದಿಲ್ಲ.

ಲಗೇಜ್ ಮಿಸ್‌ ಆದ್ರೆ ಏನು ಮಾಡಬೇಕು?

ಮೇಲ್ಕಂಡ ಸಮಸ್ಯೆಗಳನ್ನು ಓದಿದ ನಂತರ ನಿಮಗೀಗ ಲಗೇಜ್ ಕಳೆದು ಹೋದರೆ ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ? ಇಂತಹ ಸಂದರ್ಭದಲ್ಲಿ ನೀವು ಮೊದಲು ಪಿಐಆರ್ ಅನ್ನು ಸಹಾಯ ಕೇಂದ್ರದಲ್ಲಿ ಸಲ್ಲಿಸಬೇಕು. ಇದರಲ್ಲಿ ನಿಮ್ಮ ಲಗೇಜ್ ಬಗ್ಗೆ ಮಾಹಿತಿ ನೀಡಬೇಕು. ಅಲ್ಲದೆ, ನಿಮ್ಮ ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ನೀವು ನಮೂದಿಸಬೇಕು. ದೂರನ್ನು ಸಲ್ಲಿಸಿದ ನಂತರ, ಅದರ ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ, ಅದು ಕ್ಲೈಮ್ ಸಂಖ್ಯೆಯನ್ನು ಹೊಂದಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಕ್ಲೈಮ್ ಸಂಖ್ಯೆಯ ಸಹಾಯದಿಂದ, ನೀವು ಏರ್‌ಲೈನ್‌ನ ವೆಬ್‌ಸೈಟ್‌ನಲ್ಲಿ ದೂರಿನ ಸ್ಥಿತಿಯನ್ನು ಪರಿಶೀಲಿಸಬಹುದು.

laguagemissing1

ಹಾನಿಗೊಳಗಾದರೆ ಏನು ಮಾಡಬೇಕು?

ದೂರು ನೀಡಿದ ನಂತರವೂ ನಿಮ್ಮ ಲಗೇಜ್ ಸ್ವೀಕರಿಸದಿದ್ದರೆ, ಏರ್‌ಲೈನ್‌ನ ವೆಬ್‌ಸೈಟ್‌ನಲ್ಲಿ ಹೊಸ ಕ್ಲೈಮ್ ಅನ್ನು ಸಲ್ಲಿಸಿ. ಇದರಲ್ಲಿ ಕಾಣೆಯಾದ ವಸ್ತು, ಅದರ ಬೆಲೆ, ಖರೀದಿಸಿದ ದಿನಾಂಕ ಇತ್ಯಾದಿ ಸಂಪೂರ್ಣ ಮಾಹಿತಿ ನೀಡಬೇಕು. ಒಂದು ವೇಳೆ ಸ್ವೀಕರಿಸಿದ ವಸ್ತುವು ಹಾನಿಗೊಳಗಾಗಿದ್ದರೆ, ದುರಸ್ತಿಗೆ ಸಂಬಂಧಿಸಿದಂತೆ ನೀವು ದೂರು ಸಲ್ಲಿಸಬೇಕಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಈ ದೂರನ್ನು ಸರಕುಗಳನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಮಾಡಬೇಕು.

ಈ ಟಿಪ್ಸ್‌ ಫಾಲೋ ಮಾಡಿ

ಅಂದಹಾಗೆ ನಮ್ಮ ಸಾಮಾನುಗಳು ವಿಮಾನ ನಿಲ್ದಾಣದಲ್ಲಿ ಕಳೆದುಹೋಗದಂತೆ, ಮಿಸ್‌ ಆಗದಂತೆ ಕೆಲವು ಸಲಹೆಗಳನ್ನು ಅನುಸರಿಸಬೇಕು. ಮೊದಲನೆಯದಾಗಿ, ಲಗೇಜ್‌ನಲ್ಲಿ ನೀವು ಎರಡು ಟ್ಯಾಗ್‌ಗಳನ್ನು ಹಾಕಬೇಕು. ಐಟಂನ ಹೊರಭಾಗದಲ್ಲಿ ಮೊದಲ ಟ್ಯಾಗ್ ಅನ್ನು ಇರಿಸಿ. ಮತ್ತೆ ಎರಡನೇ ಟ್ಯಾಗ್ ಅನ್ನು ಲಗೇಜ್ ಒಳಗೆ ಇಡಬೇಕು. ಎರಡೂ ಟ್ಯಾಗ್‌ಗಳಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಬರೆಯಲು ಮರೆಯದಿರಿ. ಸಾಮಾನು ಸರಂಜಾಮುಗಳ ಮೇಲೆ ಇರಿಸಲಾದ ಟ್ಯಾಗ್‌ನಲ್ಲಿ ವಿಶೇಷ ಗುರುತು ಮಾಡಲು ಮರೆಯಬೇಡಿ. ಇದು ನಿಮ್ಮ ವಸ್ತುಗಳನ್ನು ಗುರುತಿಸಲು ನಿಮಗೆ ಸುಲಭವಾಗುತ್ತದೆ. ನಿಮ್ಮ ಸಾಮಾನುಗಳನ್ನು ಗುರುತಿಸಲು ನೀವು GPS ಟ್ಯಾಗ್‌ಗಳನ್ನು ಸಹ ಬಳಸಬಹುದು.

bagageairport1

ಮುಂಚಿತವಾಗಿ ವಿಮಾನ ನಿಲ್ದಾಣ ತಲುಪಿ

ನೀವು ಆಗಾಗ್ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ನಿಮ್ಮ ಲಗೇಜ್‌ನಿಂದ ಹಳೆಯ ಟ್ಯಾಗ್‌ಗಳನ್ನು ತೆಗೆದುಹಾಕಿ. ಇದರೊಂದಿಗೆ, ವಿಮಾನಯಾನ ಸಿಬ್ಬಂದಿ ನಿಮ್ಮ ಇತ್ತೀಚಿನ ಪ್ರವಾಸದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು ಮತ್ತು ಲಗೇಜ್ ಕಳೆದುಹೋಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಸಾಮಾನುಗಳನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಒಂದು ಮಾರ್ಗವೆಂದರೆ ನಿಗದಿತ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿ ವಿಮಾನ ನಿಲ್ದಾಣವನ್ನು ತಲುಪುವುದು. ಇದು ನಿಮ್ಮ ಲಗೇಜ್‌ನ ಸರಿಯಾದ ಟ್ಯಾಗ್ ಮಾಡಲು ಏರ್‌ಲೈನ್ ಸಿಬ್ಬಂದಿಗೆ ಸಮಯವನ್ನು ನೀಡುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+