Search
  • Follow NativePlanet
Share
» »ನಾಲ್ಕು ಮುಖವನ್ನು ಹೊಂದಿರುವ ಪಾರ್ವತಿಯ ತಿಲ್ಲೈ ಕಾಳಿ ಕ್ಷೇತ್ರವಿದು

ನಾಲ್ಕು ಮುಖವನ್ನು ಹೊಂದಿರುವ ಪಾರ್ವತಿಯ ತಿಲ್ಲೈ ಕಾಳಿ ಕ್ಷೇತ್ರವಿದು

ಶಿವ ಪಾರ್ವತಿಯರ ನಡುವೆ ಯಾರು ಶ್ರೇಷ್ಠರು ಎಂದು ವಾದ ನಡೆದಿರುವ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಶಿವ-ಪಾರ್ವತಿ ನೃತ್ಯ ಕಾರ್ಯಕ್ರಮದಲ್ಲಿ ಪಾರ್ವತಿ ಸೋಲನ್ನೊಪ್ಪಿ ಹೋಗಿ ನೆಲೆಸಿದ ಕ್ಷೇತ್ರವೇ ತಿಲ್ಲೈ ಕಾಳಿ ದೇವಸ್ಥಾನ. ಇಂದು ನಾವು ಈ 'ತಿಲ್ಲೈ ಕಾಳಿ' ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

'ತಿಲ್ಲೈ ಕಾಳಿ' ದೇವಸ್ಥಾನ, ತಮಿಳುನಾಡಿನ ಚಿದಂಬರಂ, ಕುಡ್ಡಲೂರ್ ಜಿಲ್ಲೆಯಲ್ಲಿದೆ. ಇದು ಚಿದಂಬರಂನ ಹೊರವಲಯದಲ್ಲಿದೆ. ಶಿವ ಮತ್ತು ಪಾರ್ವತಿ ನಡುವೆ ಯಾರು ಶ್ರೇಷ್ಠರು ಎಂಬ ವಾದ ನಡೆದು. ಕೊನೆಗೆ ಪಾರ್ವತಿ ಸೋತು ಬಂದು ನೆಲೆಸಿದ ಸ್ಥಳ ಇದಾಗಿದೆ.

ಓರ್ಥುವ ತಾಂಡವ

ಓರ್ಥುವ ತಾಂಡವ

PC: Ms Sarah Welc

ಇವರಿಬ್ಬರ ನಡುವಿನ ವಾದವನ್ನು ಪರಿಹರಿಸಲು, ಶಿವ ಪಾರ್ವತಿ ಚಿದಂಬರಂನಲ್ಲಿ ವಿಷ್ಣು, ಬ್ರಹ್ಮ ಮತ್ತು ಇತರ ದೇವತೆಗಳ ಮುಂದೆ ನೃತ್ಯ ಕಾರ್ಯಕ್ರಮವನ್ನು ಮಾಡಿದರು. ಶಿವನು "ಓರ್ಥುವ ತಾಂಡವ" ಅಂದರೆ ಅವನ ತಲೆಯ ಮೇಲೆ ಒಂದು ಕಾಲು ಎತ್ತುತ್ತಾನೆ.

ಸೋಲನ್ನೊಪ್ಪಿದ ಪಾರ್ವತಿ

ಸೋಲನ್ನೊಪ್ಪಿದ ಪಾರ್ವತಿ

PC:Richard Mortel


ಈ "ಒರ್ಥುವುವ ತಾಂಡವ" ನೃತ್ಯದ ಭಂಗಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಮಹಿಳೆಯರು ತುಂಬಾ ಸಂಕೋಚ ಪಡುತ್ತಾರೆ. ಪಾರ್ವತಿಯು ಈ ಭಂಗಿಯನ್ನು ಮಾಡಲಾಗದೆ ತನ್ನ ಸೋಲನ್ನು ಒಪ್ಪಿಕೊಳ್ಳುತ್ತಾಳೆ.

ಉಗ್ರ ದೇವತೆ 'ತಿಲ್ಲೈ ಕಾಳಿ'

ಉಗ್ರ ದೇವತೆ 'ತಿಲ್ಲೈ ಕಾಳಿ'

PC:' Jayaseerlourdhuraj

'ತಿಲ್ಲೈ ಕಾಳಿ' ಉಗ್ರ ದೇವಿ. ಈ ಕೋಪವು ಬ್ರಹ್ಮನಿಂದ ವೇದ ಪಠಿಸುವ ಮೂಲಕ ಶಾಂತಗೊಳಿಸಲಾಗುತ್ತದೆ. ಈ ದೇವಾಲಯದ ದೇವತೆ 'ತಿಲ್ಲೈ ಅಮ್ಮನ್' ನಾಲ್ಕು ಮುಖಗಳನ್ನು ಹೊಂದಿದ್ದಾಳೆ.

ಯಾವಾಗ ತೆರೆದಿರುತ್ತದೆ'

ಯಾವಾಗ ತೆರೆದಿರುತ್ತದೆ'

PC: Richard Mortel

ಈ ದೇವಸ್ಥಾನವು ಬೆಳಗ್ಗೆ 6.30ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಹಾಗೂ ಸಂಜೆ 4.30ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ. ಭಕ್ತರು ಈ ಸಮಯದಲ್ಲಿ ದೇವಿಯ ದರ್ಶನ ಪಡೆಯಬಹುದು.

ದೇವಿಗೆ ಅಭಿಷೇಕ

ದೇವಿಗೆ ಅಭಿಷೇಕ

ಮಘಾ ನಕ್ಷತ್ರದಲ್ಲಿ ಜನಿಸಿದವರು ಈ ದೇವಿಗೆ ಅರ್ಚನೆ ಅಭಿಷೇಕವನ್ನು ಮಾಡುತ್ತಾರೆ. ಭಕ್ತರು ತಮ್ಮ ಕೋರಿಕೆ ಈಡೇರಿದರೆ ದೇವಿಗೆ ಅಭಿಷೇಕ ಮಾಡುವುದರ ಜೊತೆಗೆ ಬಿಳಿ ವಸ್ತ್ರ ಹಾಗೂ ಕುಂಕುಮಾರ್ಚನೆ ಮಾಡುತ್ತಾರೆ.

ವಿಶೇಷ ಪೂಜೆಗಳು

ವಿಶೇಷ ಪೂಜೆಗಳು

ಇಲ್ಲಿ ಪ್ರತಿದಿನ ಪೂಜೆ, ಅಭಿಷೇಕಗಳು ನಡೆಯುತ್ತವೆ . ಭಾನುವಾರ ಸಂಜೆ ೪.೩೦ರಿಂದ ೬ಗಂಟೆಗಳವರೆಗೆ ಪೂಜಿಸುತ್ತಾರೆ. ರಾಹುಕಾಲ, ಪೂರ್ಣೀಮಾ, ಅಮಾವಾಸ್ಯೆಯಂದು ಪೂಜಿಸಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಚಿದಂಬರಂಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಸುಮಾರು ೨೪೫ ಕಿ.ಮೀ ದೂರದಲ್ಲಿದೆ.
ತಿರುಚಿ, ಮಧೂರೈ, ಚೆನ್ನೈ ರೈಲು ನಿಲ್ದಾಣ ಇಲ್ಲಿಗೆ ಸಮೀಪದಲ್ಲಿದೆ.
ಬಸ್‌ ಮೂಲಕ ಬರುವುದಾದರೆ ಚೆನ್ನೈ, ಅಥವಾ ಮಧುರೈಗೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ಚಿದಂಬರಂ ತಲುಪಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+