ಪ್ರವಾಸ ಎಂಬುದು ಮೈಮನಗಳನ್ನು ಪುಳಕಿತಗೊಳಿಸುವ, ಉತ್ಸಾಹ, ಹುಮ್ಮಸ್ಸನ್ನು ಹೆಚ್ಚಿಸುವ, ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದು ಕೊಳ್ಳಲು ಅನುಕೂಲ ಮಾಡಿಕೊಡುವ, ಜ್ಞಾನ ವೃದ್ಧಿಸುವ, ಆರೋಗ್ಯದಲ್ಲೂ ಚೇತರಿಕೆ ತಂದುಕೊಡುವ, ಒತ್ತಡ ಕಡಿಮೆ ಮಾಡುವ ಸುಂದರ ಚಟುವಟಿಕೆಯಾಗಿದೆ.
ಪ್ರವಾಸಕ್ಕೆ ಹೊರಡುವ ಮುಂಚೆ...ಓದಿ
ಪ್ರವಾಸವನ್ನು ಸಾಮಾನ್ಯವಾಗಿ ಹಲವಾರು ಬಗೆಗಳಲ್ಲಿ ವಿಂಗಡಿಸಬಹುದು. ಕೌಟುಂಬಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ಅಧ್ಯಯನ ಪ್ರವಾಸ, ಸಾಹಸಮಯ ಪ್ರವಾಸ, ಧಾರ್ಮಿಕ ಪ್ರವಾಸ ಹೀಗೆ ಹಲವಾರು ವಿಧಗಳನ್ನು ಸೇರಿಸುತ್ತ ಹೋಗಬಹುದು. ಪ್ರತಿಯೊಂದು ರೀತಿಯ ಪ್ರವಾಸಗಳು ತಮ್ಮದೆ ಆದ ವಿಶಿಷ್ಟತೆಗಳನ್ನು ಹೊಂದಿರುತ್ತವೆ.

ಚಿತ್ರಕೃಪೆ: Murray Foubister
ಬೆಂಗಳೂರಿನಲ್ಲೊಂದು ಸಾರ್ಥಕ ಪ್ರವಾಸ!
ಚಾರಣ ಪ್ರವಾಸ ಅಥವಾ ಟ್ರೆಕ್ಕಿಂಗ್ ಹದಿಹರೆಯದವರಲ್ಲಿ, ಯುವಕರಲ್ಲಿ ಹೆಚ್ಚಿನ ಕುತೂಹಲ ಕೆರಳಿಸುತ್ತದೆ. ಇದರಲ್ಲೂ ಸಹ ಹಲವು ಬಗೆಗಳಿವೆ. ಒಂದು ಕಾಡು ಮೇಡುಗಳಲ್ಲಿ ಅಲೆಯುತ್ತ ಸಾಗುವ ಚಾರಣವಾದರೆ, ಇನ್ನೊಂದು ಎತ್ತೆತ್ತರದ ಬೆಟ್ಟಗಳನ್ನು ಜಾಗರೂಕತೆಯಿಂದ ಹತ್ತುವ ಚಾರಣಗಳಾಗಿರುತ್ತವೆ.
ಇನ್ನೂ ಮದುವೆಯಾಗಿಲ್ಲವೆ? ಅಂದರೆ ಈ ಟ್ರೆಕ್ಕುಗಳನ್ನು ಮಾಡಿ!
ಶೈಕ್ಷಣಿಕ ಪ್ರವಾಸ ಎಂಬುದು ಪ್ರವಾಸದ ಇನ್ನೊಂದು ಬಗೆಯಾಗಿದ್ದು ಇಲ್ಲಿ ಪ್ರವಾಸದ ಮುಖ್ಯ ಉದ್ದೇಶ ಸ್ಥಳಗಳ ಐತಿಹಾಸಿಕ ಶ್ರೀಮಂತಿಕೆ, ವಿಶೇಷತೆ ಹಾಗೂ ಸಂಸ್ಕೃತಿಯನ್ನು ತಿಳಿಸುವುದಾಗಿರುತ್ತದೆ. ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನಾರ್ಜನೆಗೆ ಈ ರೀತಿಯ ಪ್ರವಾಸಗಳನ್ನು ಶಾಲಾ-ಕಾಲೇಜು ಆಡಳಿತಗಳು ಆಯೋಜಿಸುತ್ತವೆ.

ಚಿತ್ರಕೃಪೆ: Moody Abraham
ರಾಷ್ಟ್ರೀಯ ಮಹತ್ವ ಪಡೆದಿರುವ ಕರ್ನಾಟಕದ ಸ್ಮಾರಕಗಳು!
ಕೌಟುಂಬಿಕ ಪ್ರವಾಸ ಸಾಮಾನ್ಯವಾಗಿ ಎಲ್ಲರೂ ಹೋಗ ಬಯಸುವ ಪ್ರವಾಸ. ಇಲ್ಲಿ ಕುಟುಂಬ ಸಮೇತರಾಗಿ ಯಾವುದಾದರೂ ಪ್ರಾಕೃತಿಕ ಅಥವಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದೆ ಹೆಚ್ಚಾಗಿ ಕಂಡುಬರುತ್ತದೆ. ನೆಂಟರು, ಬಂಧುಗಳು ಎಲ್ಲರು ಒಂದೆಡೆ ಸೇರಿ ಪ್ರವಾಸ ಮಾಡುವುದರಿಂದ ಸಂಬಂಧದ ಬೆಸುಗೆ ಗಟ್ಟಿಯಾಗುವುದಲ್ಲದೆ ಸಾಕಷ್ಟು ಸಂತಸವನ್ನು ಪ್ರತಿಯೊಬ್ಬರು ಪಡೆಯುತ್ತಾರೆ.
ಮಧುಚಂದ್ರ ಪ್ರವಾಸ, ಇದೊಂದು ಅಮೋಘ ಅನುಭವ ನೀಡುವ ಪ್ರವಾಸ. ಕೇವಲ ನವ ದಂಪತಿಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಅದರಲ್ಲೂ ಮೊದಲ ಬಾರಿ ಮದುವೆಯ ನಂತರ ಕೈಗೊಳ್ಳುವ ಈ ರೀತಿಯ ಪ್ರವಾಸದನುಭವ ಮುಂದೆ ಜೀವನದಲ್ಲಿ ಮತ್ತೆಂದೂ ಲಭಿಸಲಾರದು. ಅದಕ್ಕಾಗಿಯೆ ಕೆಲ ಸ್ಥಳಗಳು ಹನಿಮೂನ್ ತಾಣಗಳಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿವೆ.


Click it and Unblock the Notifications

















