Search
  • Follow NativePlanet
Share
» »ತಮ್ಮ ಹೆಸರಿಗೆ ವಿಶಿಷ್ಟವಾದ ದಾಖಲೆಯನ್ನು ಹೊಂದಿರುವ ಆಸಕ್ತಿದಾಯಕ ಭಾರತೀಯ ಸ್ಥಳಗಳು.

ತಮ್ಮ ಹೆಸರಿಗೆ ವಿಶಿಷ್ಟವಾದ ದಾಖಲೆಯನ್ನು ಹೊಂದಿರುವ ಆಸಕ್ತಿದಾಯಕ ಭಾರತೀಯ ಸ್ಥಳಗಳು.

ಭಾರತದ ಈ ಆಸಕ್ತಿದಾಯಕ ಸ್ಥಳಗಳ ಹೆಸರುಗಳೇ ಸಾಕು ವಿಶಿಷ್ಟ ದಾಖಲೆಗಳನ್ನು ನೆನಪಿಸುತ್ತವೆ!

ಭಾರತದ ಸಂಸ್ಕೃತಿ ಶ್ರೀಮಂತ, ವರ್ಣರಂಜಿತ ಮತ್ತು ವೈವಿಧ್ಯಮಯವಾಗಿದ್ದು, ಇದು ಇಂದಿಗೂ ಅಭಿವೃದ್ಧಿ ಹೊಂದುತ್ತಿರುವ ಕಲೆ ಮತ್ತು ವಾಸ್ತುಶಿಲ್ಪದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಭಾರತದಲ್ಲಿ ಇಂದಿಗೂ ಆಚರಣೆಯಲ್ಲಿರುವ ಹಲವಾರು ಧರ್ಮಗಳು ಮತ್ತು ಆಧ್ಯಾತ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳಿವೆ. ಅಲ್ಲದೆ ಈ ದೇಶವು ಹಿಂದಿ, ತಮಿಳು ತೆಲುಗು ಮಲಯಾಳಂ ಮತ್ತು ಇನ್ನೂ ಹಲವಾರು ಭಾಷೆಗಳ ನೆಲೆಯಾಗಿದೆ.

ಭಾರತದ ಮೂಲೆ ಮೂಲೆಗೆ ಹೋದರೂ ಏನಾದರೂ ವಿಭಿನ್ನವಾದುದನ್ನು ಪಡೆಯುವುದಂತೂ ಸಹಜ. ಭಾರತವು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಅಥವಾ ಭಾರತದಲ್ಲಿ ಮೊದಲನೆಯ ತೇಲುವ ಗ್ರಂಥಾಲಯ ಮತ್ತು ವಿಶ್ವದ ಅತಿ ಎತ್ತರದ ರೈಲು ಸೇತುವೆಯಂತಹ ದಾಖಲೆ ಹೊಂದಿರುವ ಸ್ಥಳಗಳಿಗಿಂತ ಭಿನ್ನವಾದದ್ದನ್ನು ಹೊಂದಿದೆ.

ತಮ್ಮ ಹೆಸರಿಗೆ ವಿಶಿಷ್ಟವಾದ ದಾಖಲೆಗಳನ್ನು ಹೊಂದಿರುವ ಕೆಲವು ಆಸಕ್ತಿದಾಯಕ ಭಾರತೀಯ ಸ್ಥಳಗಳ ಪಟ್ಟಿ ಇಲ್ಲಿದೆ

ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ

ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ

ಲಡಾಖ್ ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯದಲ್ಲಿ ನೆಲೆಸಿರುವ ಹಿಮಾಲಯದ ಪ್ರಾಂತ್ಯವಾಗಿದೆ. ಈ ಸ್ಥಳವು ಎತ್ತರದಲ್ಲಿ ಪ್ರದೇಶದಲ್ಲಿರುವ ಸರೋವರಗಳು, ಹಿಮಚ್ಚಾದಿತ ಪರ್ವತಗಳು ಮತ್ತು ಮಠಗಳು ಮತ್ತು ಬುದ್ದ ಮಠಗಳಿಗೆ ಹೆಸರುವಾಸಿಯಾಗಿದೆ. ಜಗತ್ತಿನ ಅತ್ಯಂತ ಎತ್ತರದ ಮೋಟಾರು ಸವಾರಿಯ ರಸ್ತೆಯು ಇಲ್ಲಿ ನೆಲೆಸಿರುವುದು ಈ ಸ್ಥಳದ ವಿಶೇಷತೆಯಾಗಿದೆ. ಚಿಸುಮ್-ಡೆಮ್‌ಚೋಕ್ ರಸ್ತೆ, ಸಮುದ್ರ ಮಟ್ಟದಿಂದ 19,000 ಅಡಿಗಳಷ್ಟು ದೈತ್ಯಾಕಾರದ ಎತ್ತರದಲ್ಲಿದೆ, ಇದು ಭಾರತದಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯಾಗಿದೆ. ಇದು ಲಡಾಖ್‌ನ ಉಮ್ಲಿಂಗ್ ಲಾ ದಲ್ಲಿ ನೆಲೆಸಿದ್ದು, ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ಹೊಂದಿದೆ.

ಭಾರತದಲ್ಲಿ ಮೊದಲ ತೇಲುವ ಗ್ರಂಥಾಲಯ

ಭಾರತದಲ್ಲಿ ಮೊದಲ ತೇಲುವ ಗ್ರಂಥಾಲಯ

"ಯಂಗ್ ರೀಡರ್ಸ್ ಬೊಟ್ ಲೈಬ್ರೆರಿ" ಎಂದು ಕರೆಯಲ್ಪಡುವ ಈ ತೇಲುವ ಗ್ರಂಥಾಲಯದಲ್ಲಿ ಈ ಗ್ರಂಥಾಲಯದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಬಂಗಾಳಿ ಮೂರು ಭಾಷೆಗಳಲ್ಲಿ 500 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವನ್ನು ಹೊಂದಿದ್ದು, ಇದು ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ನೆಲೆಸಿದೆ. ಇದು ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಯಿಂದ ಪ್ರಾರಂಭವಾದ ಈ ರೀತಿಯ ಗ್ರಂಥಾಲಯದ ಕ್ರೂಸ್‌ನಲ್ಲಿ ಹಲವು ಆಯ್ಕೆಗಳೊಂದಿಗೆ ನಿಮಗೆ ಬೇಕಾದುದನ್ನು ಓದಲು ಆಯ್ಕೆಮಾಡಿಕೊಳಿ. ಹೌದು! ಮಿಲೇನಿಯಂ ಪಾರ್ಕ್‌ನಿಂದ ಬೇಲೂರು ಮಠಕ್ಕೆ ಪ್ರಯಾಣಿಸುವ ಈ ತೇಲುವ ಗ್ರಂಥಾಲಯವು ನಂತರ ಪ್ರಾರಂಭದ ಹಂತಕ್ಕೆ ಹಿಂತಿರುಗುತ್ತದೆ. ಹೀಗೆ ಈ ಎಲ್ಲಾ ಪ್ರದೇಶಗಳನ್ನು ಸುತ್ತಲು ಸುಮಾರು ಉತ್ತಮ 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಭಾರತದ ತೇಲಾಡುವ ಗ್ರಾಮ

ಭಾರತದ ತೇಲಾಡುವ ಗ್ರಾಮ

ಭಾರತದ ಅತಿದೊಡ್ಡ ಸಿಹಿನೀರಿನ ಸರೋವರ, ಲೋಕ್ತಕ್ ಸರೋವರವು ಭಾರತದಲ್ಲಿ ತೇಲುವ ಹಳ್ಳಿಗೆ ನೆಲೆಯಾಗಿದೆ, ಇದನ್ನು ಚಂಪೂ ಖಾಂಗ್ಪೋಕ್ ಎಂದು ಕರೆಯಲಾಗುತ್ತದೆ, ಇದು ಈಶಾನ್ಯ ಭಾರತದ ಮಣಿಪುರದಲ್ಲಿದೆ. ಇದು ತೇಲಾಡುವ ಏಕೈಕ ರಾಷ್ಟ್ರೀಯ ಉದ್ಯಾನವನವಾದ ಕೀಬುಲ್ ಲಮ್ಜಾವೊದ ಪಕ್ಕದಲ್ಲಿದೆ. ಕುತೂಹಲಕಾರಿ ಸಂಗತಿಯೆಂದರೆ, ಇಡೀ ಗ್ರಾಮವು ತೇಲುವ ಜೀವರಾಶಿಯ ಮೇಲೆ ನಿಂತಿದೆ, ಇದನ್ನು ಫಮ್ಡಿಸ್ ಎಂದು ಕರೆಯಲಾಗುತ್ತದೆ. ಚಂಪೂ ಖಾಂಗ್‌ಪೋಕ್ ತೇಲುವ ಈ ಗ್ರಾಮವು ಕೋವಿಡ್-19 ನಿಂದ ಮುಕ್ತವಾಗಿಯೇ ಉಳಿಯಿತು. ಈ ಸ್ಥಳವು ದಾಖಲೆಗಳಿಂದ ತುಂಬಿದೆ ಎಂಬುದರಲ್ಲಿ ಸಂದೇಹವಿಲ್ಲ!

ವಿಶ್ವದ ಅತಿ ಎತ್ತರದ ರೈಲು ಸೇತುವೆ

ವಿಶ್ವದ ಅತಿ ಎತ್ತರದ ರೈಲು ಸೇತುವೆ

ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ರಿಯಾಸಿ ಜಿಲ್ಲೆಯಲ್ಲಿದೆ ವಿಶ್ವದ ಅತ್ಯಂತ ಎತ್ತರದ ರೈಲು ಸೇತುವೆ! 359 ಮೀ ಎತ್ತರದಲ್ಲಿರುವ ಈ ರೈಲು ಸೇತುವೆಯು ಚೆನಾಬ್ ನದಿಯ ಮೇಲೆ ನಿರ್ಮಿತವಾಗಿರುವುದರಿಂದ ಇದಕ್ಕೆ ಚೆನಾಬ್ ರೈಲು ಸೇತುವೆ ಎಂದು ಕರೆಯಲಾಗುತ್ತದೆ. ಇದು ಬಕ್ಕಲ್ ಮತ್ತು ಕೌರಿಯನ್ನು ಸಂಪರ್ಕಿಸುವ ಕಾಂಕ್ರೀಟ್ ಮತ್ತು ಉಕ್ಕಿನ ಕಮಾನು ಸೇತುವೆಯನ್ನು ಹೊಂದಿರುವ ಭಾರತೀಯ ರೈಲ್ವೆ ಉಪಕ್ರಮವಾಗಿದೆ. ವರದಿಗಳ ಪ್ರಕಾರ, ಸೇತುವೆಯು ಅಂದಾಜು 120 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ ಮತ್ತು 100 ಕಿಮೀ ವಿನ್ಯಾಸದ ವೇಗವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

 ವಿಶ್ವದ ಅತಿ ದೊಡ್ಡ ನೇಯ್ಗೆ ಗ್ರಾಮ

ವಿಶ್ವದ ಅತಿ ದೊಡ್ಡ ನೇಯ್ಗೆ ಗ್ರಾಮ

ಪ್ರಾಚೀನ ಕಾಲದಿಂದಲೂ ಅಸ್ಸಾಂ ನೇಯ್ಗೆಯ ಪ್ರಧಾನ ಕೇಂದ್ರವೆನಿಸಿದೆ. ಅಸ್ಸಾಂ ನಬ್ರಹ್ಮಪುತ್ರಾ ನದಿ ದಡದಲ್ಲಿ ನೆಲೆಸಿರುವ ಸುಲ್ಕುಚಿ ವಿಶ್ವದ ಅತ್ಯಂತ ದೊಡ್ಡ ನೇಯ್ಗೆ ಗ್ರಾಮವೆನಿಸಿದೆ. ಮರದ ಮಗ್ಗಗಳು ಮತ್ತು ಬಿದುರಿನ ದಾರಗಳಿಂದ ನೇಯ್ಗೆ ಮಾಡುವ ಸಾಂಪ್ರದಾಯಿಕ ಪದ್ದತಿಯನ್ನು ಈ ಹಳ್ಳಿಯಲ್ಲಿ ಇನ್ನೂ ಉಳಿದುಕೊಂಡಿದೆ. ಅಸ್ಸಾಂ ನೇಕಾರರು ಭಾರತದಾದ್ಯಂತ ತಮ್ಮ ಕೌಶಲ್ಯಕ್ಕಾಗಿ ಜವಳಿಗಳ ಮೇಲೆ ಸುಂದರವಾದ, ಸಂಕೀರ್ಣವಾದ ವಿನ್ಯಾಸಗಳನ್ನು ಡೈಯಿಂಗ್ ತಂತ್ರಗಳು ಮತ್ತು ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ಬಟ್ಟೆಗಳಿಗೆ ಡೈಯಿಂಗ್ ಮಾಡುವುದು ಇತ್ಯಾದಿಗಳ ಕಲೆಗೆ ಪ್ರಸಿದ್ಧರಾಗಿದ್ದಾರೆ, ಅಲ್ಲದೆ ಇಲ್ಲಿ ಇಡೀ ಜನಸಂಖ್ಯೆಯು ಬಹುಕಾಂತೀಯ ರೇಷ್ಮೆ ಬಟ್ಟೆ ನೇಯ್ಗೆಯಲ್ಲಿ ತೊಡಗಿಸಿಕೊಂಡಿದೆ.

More News

Read more about: assam india village
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+